ನವದೆಹಲಿ 2: ಜಲಿಯನ್ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ 2019 ಅನ್ನು ಶುಕ್ರವಾರ ಲೋಕಸಭೆಯಲ್ಲಿ ವಿರೋಧಿಸಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು, ಸರ್ಕಾರ ಇತಿಹಾಸವನ್ನು ಮತ್ತೆ ಬರೆಯುತ್ತಿದೆ ಎಂದು ಆರೋಪಿಸಿದರೆ, ತುಂಬಾ ಹಳೆಯ ಪಕ್ಷವು ಇತಿಹಾಸವನ್ನು ಉತ್ಪಾದಿಸುತ್ತಿದೆ ಎಂದು ಆಡಳಿತ ಪಕ್ಷ ಪ್ರತ್ಯಾರೋಪ ಮಾಡಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನು ಜಲಿಯನ್ವಾಲ ಬಾಗ್ ಸ್ಮಾರಕ ಟ್ರಸ್ಟಿಯಾಗಿ ತೆಗೆದುಹಾಕುವುದಕ್ಕೆ ಮಸೂದೆ ತಿದ್ದುಪಡಿ ಮಾಡಲಿದೆ. ಇದಲ್ಲದೆ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ಇಲ್ಲದಿದ್ದಾಗ, ಅತಿದೊಡ್ಡ ವಿರೋಧ ಪಕ್ಷ ಟ್ರಸ್ಟಿಯಾಗಿರುತ್ತದೆ. ಸದನದಲ್ಲಿ ಮಸೂದೆ ಕುರಿತ ಚರ್ಚೆ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯ ಗುಜರಾತ್ ಔಜ್ಲಾ ಮಾತನಾಡಿ, ಸಕರ್ಾರ ಇತಿಹಾಸ ಬದಲಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಅಧ್ಯಕ್ಷರನ್ನು ಟ್ರಸ್ಟಿಯಾಗಿ ತೆಗೆದುಹಾಕುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ಸಕರ್ಾರ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಎಸ್ಎಡಿ ಸದಸ್ಯೆ ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಮಾತನಾಡಿ, 1984 ರ ಸಿಖ್ ವಿರೋಧಿ ಗಲಭೆಗೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಇತಿಹಾಸವನ್ನು ಮರೆಮಾಚಿದೆ ಎಂದು ಆರೋಪಿಸಿದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ, ಪಂಜಾಬ್ನ ಈಗಿನ ಮುಖ್ಯಮಂತ್ರಿಯವರ ಅಜ್ಜ ಜನರಲ್ ಡಯರ್ ಅವರಿಗೆ ನಿಮ್ಮ ಕ್ರಮ ಸರಿಯಾಗಿದೆ ಎಂದು ಟೆಲಿಗ್ರಾಮ್ ಮಾಡಿದ್ದರು. ಇದಕ್ಕೆ ಇತಿಹಾಸದ ದಾಖಲೆಯೇ ಸಾಕ್ಷಿ ಎಂದು ಹರ್ಸಿಮ್ರತ್ ಹೇಳಿದರು. ಸಚಿವರ ಹೇಳಿಕೆಯನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿ ಸದನದಲ್ಲಿ ಕೋಲಾಹಲ ಉಂಟು ಮಾಡಿದರು. ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಚಿವರು ಯಾರೊಬ್ಬರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ಅಸಂವಿಧಾನಿಕ ಪದಗಳನ್ನು ಪ್ರಯೋಗಿಸಿದ್ದರೆ ಅವನ್ನು ಎಂದು ಹೇಳಿದರು. ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ಡಿಎಂಕೆ ಸದಸ್ಯ ದಯಾನಿಧಿ ಮಾರನ್ ಹೇಳಿದರು.
'ನೀವು (ಸರ್ಕಾರ) 100 ವರ್ಷಗಳ ನಂತರ ಇತಿಹಾಸವನ್ನು ಬದಲಾಯಿಸಲು ಮತ್ತು ಇತಿಹಾಸವನ್ನು ಮತ್ತೆ ಬರೆಯಲು ಏಕೆ ಇಚ್ಛಿಸುತ್ತಿದ್ದೀರಿ ಎಂದು ಮಾರನ್ ಪ್ರಶ್ನಿಸಿದರು. ಈ ಸಂಸತ್ ಇತಿಹಾಸವನ್ನು ಮತ್ತೆ ಬರೆಯಬಾರದು. ಇತಿಹಾಸವನ್ನು ಸೃಷ್ಟಿಸಬೇಕು. ಇತಿಹಾಸವನ್ನು ಮತ್ತೆ ಬರೆಯುವಲ್ಲಿ ಸಂಸತ್ನ ಸಮಯವನ್ನು ಏಕೆ ವ್ಯರ್ಥಮಾಡುತ್ತೀರಿ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರನ್ನು ಟ್ರಸ್ಟಿ ಸದಸ್ಯರನ್ನಾಗಿ ತೆಗೆದುಹಾಕುವ ಮಸೂದೆಯ ಅಂಶವನ್ನು ತಾವು ವಿರೋಧಿಸುವುದಾಗಿ ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತಾ ರಾಯ್ ಹೇಳಿದರು. 1951 ರ ಜಲಿಯನ್ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಕಾಯ್ದೆಯು ಇದರ ಹತ್ಯಾಕಾಂಡದಲ್ಲಿ ಮಡಿದವರ ಮತ್ತು ಗಾಯಗೊಂಡವರ ನೆನಪಿಗಾಗಿ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಸ್ಮಾರಕವನ್ನು ನಿರ್ವಹಿಸಲು ಟ್ರಸ್ಟ್ ವೊಂದರ ರಚನೆಗೆ ಇದು ಅವಕಾಶ ಮಾಡಿಕೊಡಲಿದೆ.
1952 ರ ಕಾಯಿದೆ ಕಾಂಗ್ರೆಸ್ ಅಧ್ಯಕ್ಷರನ್ನು ಸ್ಮಾರಕದ ಟ್ರಸ್ಟಿಗಳಲ್ಲಿ ಒಬ್ಬರೆಂದು ಹೆಸರಿಸಿತ್ತು. ಜವಾಹರಲಾಲ್ ನೆಹರು, ಡಾ. ಸೈಫುದ್ದೀನ್ ಕಿಚ್ಲೆವ್, ಮೌಲಾನಾ ಅಬುಲ್ ಕಲಾಂ ಆಜಾದ್, ಪಂಜಾಬ್ ರಾಜ್ಯದ ರಾಜ್ಯಪಾಲರು, ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಮೂವರು ವ್ಯಕ್ತಿಗಳು ಇದರ ಟ್ರಸ್ಟಿಗಳಾಗಿರುತ್ತಾರೆ.
ಸದ್ಯ, ಪ್ರಧಾನಮಂತ್ರಿ, ಕಾಂಗ್ರೆಸ್ ಅಧ್ಯಕ್ಷರು, ಸಂಸ್ಕೃತಿ ಸಚಿವರು, ಲೋಕಸಭೆಯ ಪ್ರತಿಪಕ್ಷದ ನಾಯಕ, ಪಂಜಾಬ್ ರಾಜ್ಯಪಾಲರು ಮತ್ತು ಪಂಜಾಬ್ ಮುಖ್ಯಮಂತ್ರಿ ಟ್ರಸ್ಟ್ ಸದಸ್ಯರಾಗಿದ್ದಾರೆ. ತಿದ್ದುಪಡಿ ಮಸೂದೆ ಕಾಂಗ್ರೆಸ್ ಅಧ್ಯಕ್ಷರನ್ನು ಟ್ರಸ್ಟಿಗಳ ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಅವಕಾಶ ಮಾಡಿಕೊಡಲಿದೆ.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ಇಲ್ಲದಿದ್ದರೆ, ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕ ಟ್ರಸ್ಟಿಯಾಗಲು ಮಸೂದೆ ಅವಕಾಶ ಕಲ್ಪಿಸಿಕೊಡಲಿದೆ.
1951 ರ ಕಾಯಿದೆಯಲ್ಲಿ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದ ಮೂರು ಟ್ರಸ್ಟಿಗಳು ಐದು ವರ್ಷಗಳ ಅವಧಿಗೆ ಟ್ರಸ್ಟಿಗಳಾಗಿರುತ್ತಾರೆ. ಹಾಗೂ ಮರುನಾಮನಿದರ್ೆಶನಕ್ಕೆ ಅರ್ಹರಾಗುತ್ತಾರೆ. ಆದರೆ ತಿದ್ದುಪಡಿ ಮಸೂದೆಯು ಯಾವುದೇ ಕಾರಣವನ್ನು ಸೂಚಿಸದೆ ಟ್ರಸ್ಟಿ ಅವಧಿ ಮುಗಿಯುವ ಮೊದಲು ನಾಮನಿರ್ದೇಶಿತ ಟ್ರಸ್ಟಿಯ ಅವಧಿಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿಸುತ್ತದೆ.