’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ವಿ ಬೃಹತ್ ’ತಿರಂಗಾ ಯಾತ್ರೆ’

'Operation Sindhoora' a successful massive 'Tiranga Yatra'

’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ವಿ ಬೃಹತ್ ’ತಿರಂಗಾ ಯಾತ್ರೆ’  

 ಲೋಕದರ್ಶನ ವರದಿ  

 ಯಲಬುರ್ಗಾ   21: ’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ’ರಾಷ್ಟ್ರ  ಭದ್ರತೆಗಾಗಿ ನಾಗರಿಕರು’ ಎಂಬ ಧೈಯದೊಂದಿಗೆ ಮಂಗಳವಾರ ಬಿಜೆಪಿ ನೇತೃತ್ವದಲ್ಲಿ ಬೃಹತ್ ’ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಮಗ್ಗಿಬಸವೇಶ್ವರ ದೇವಸ್ಥಾನ ದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ 1000 ಅಡಿ ಉದ್ದದ ಬಾವುಟ ಹಿಡಿದು ಬೃಹತ್ ಮೆರವಣಿಗೆ ನಡೆಯಿತು. ಈ ತಿರಂಗಾ ಯಾತ್ರೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಸೇರಿದಂತೆ ನಿವೃತ್ತ ಸೈನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ  ಪಕ್ಷಾತೀತವಾಗಿ ರಾಷ್ಟ್ರಧ್ವಜ ಹಿಡಿದು ಭಾಗವಹಿಸುವ ಮೂಲಕ ದೇಶಾಭಿಮಾನ ಮೆರೆದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಹಾಲಪ್ಪ ಆಚಾರ , ’ಪಹಲ್ಲಾಮ್ ದಾಳಿ ನಂತರ ಭಾರತ ಪಾಕಿಸ್ತಾನ ಉಗ್ರರಿಗೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದೆ. ಸೈನಿಕರ ಧೈರ್ಯ, ದೃಢತೆ, ಆತ್ಮಸ್ಥೆರ್ಯ, ತ್ಯಾಗವನ್ನು ನಾವೆಲ್ಲ ಮೆಚ್ಚಬೇಕು. ದೇಶ ಸೈನಿಕರಿಗೆ ಅಭಿನಂದನೆ ಹಾಗೂ ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂಬ ಸಂದೇಶ ರವಾನಿಸಲು ಬೃಹತ್ ’ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿತ್ತು’ ಎಂದರು. ’ಭಯೋತ್ಪಾದಕರ ಅಡಗುತಾಣ, ತರಬೇತಿ ಕೇಂದ್ರ ಗುರಿಯಾಗಿಸಿಕೊಂಡು, ಪಾಕಿಸ್ತಾನಕ್ಕೆ ಊಹಿಸಲಾಗದಷ್ಟು ಪೆಟ್ಟು ನೀಡಿದ್ದೇವೆ’ ಎಂದು ಹೇಳಿದರು. ಈ ವೇಳೆ ಪಟ್ಟಣ ಪಂಚಾಯತ್ ಸದಸ್ಯರು, ಮಾಜಿ ಸೈನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು.