ಲೋಕದರ್ಶನ ವರದಿ
ಕಾಗವಾಡ 15: ಕನರ್ಾಟಕ ಸಕರ್ಾರ ರಚಿಸಲಾದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ ವೇತನ, ಮನಶ್ವೀನಿ ಹಾಗೂ ಮೈತ್ರಿ ಈ ಎಲ್ಲ ಪಿಂಚಣಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಕಾಗವಾಡ ತಾಲೂಕಿನ ಎಲ್ಲ ಗ್ರಾಮಗಳಲ್ಲಿ "ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಎಲ್ಲರು ಪಡೆದುಕೊಳ್ಳಿರಿ ಎಂದು ಕಾಗವಾಡ ತಹಸೀಲ್ದಾರ ಪರಿಮಳಾ ದೇಶಪಾಂಡೆ ಶೇಡಬಾಳ ಸ್ಟೇಶನದಲ್ಲಿ ಹೇಳಿದರು.
ಸೋಮವಾರ ರಂದು ಶೇಡಬಾಳ ಪಟ್ಟಣದ ಮಜರೆ ಗ್ರಾಮವಾದ ಶೇಡಬಾಳ ಸ್ಟೇಶನದ ದತ್ತ ಭವನದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಹಸೀಲ್ದಾರರು ಅಗಮಿಸಿದ ಎಲ್ಲ ಫಲಾನುಭವಿಗಳಿಗೆ ಮಾರ್ಗದರ್ಶನ ನೀಡಿದರು.
ಈಗಾಗಲೇ ಕಾಗವಾಡ ತಹಸೀಲ್ದಾರ ಕಚೇರಿ ವ್ಯಾಪ್ತಿಯಲ್ಲಿಯ ಲೋಕುರ, ಶೇಡಬಾಳ ಗ್ರಾಮದಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ. ಅದರಂತೆ ಮಂಗಳವಾರ ದಿ. 16 ಮಂಗಸೂಳಿ, ಬುಧವಾರ ದಿ. 17 ಕೆಂಪವಾಡ, ನವಲಿಹಾಳ, ಕವಲಗುಡ್ಡ, ದಿ. 19 ರಂದು ಮೋಳೆ, ಕಾತ್ರಾಳ, ಬಜಿನವಾಡ, ದಿ. 21 ರಂದು ಉಗಾರ ಖುರ್ದ, ದಿ. 23 ರಂದು ಐನಾಪೂರ, ಕೃಷ್ಣಾ-ಕಿತ್ತೂರ, ದಿ. 24 ರಂದು ಉಗಾರ ಬುದ್ರುಕ, ಕುಸನಾಳ, ದಿ. 25 ರಂದು ಶಿರಗುಪ್ಪಿ, ದಿ. 26 ರಂದು ಜುಗೂಳ, ಮಂಗಾವತಿ, ದಿ. 27 ರಂದು ಕಾಗವಾಡ ಗ್ರಾಮಗಳಲ್ಲಿ ಬೆಳಿಗ್ಗೆ 11:00 ಗಂಟೆಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ ಹೇಳಿದರು.
ಶೇಡಬಾಳದಲ್ಲಿ 50 ಪಿಂಚಣಿಧಾರಕರು ಅಜರ್ಿ ಸಲ್ಲಿಸಿದರು. ಕಂದಾಯ ನೀರಿಕ್ಷಕ ಎಸ್.ಬಿ.ಮುಲ್ಲಾ, ಶಿರಸದಾರ ಎಂ.ಆರ್.ಪಾಟೀಲ, ಗ್ರಾಮಲೇಕ್ಕಾಧಿಕಾರಿ ಸಂತೋಷ ಬಾಯನಾಯಿಕ ಇವರು ಪಿಂಚಣಿಧಾರಕರಿಗೆ ಸಹಕಾರ ನೀಡಿದರು.
ಗ್ರಾಪಂ ಮಾಜಿ ಸದಸ್ಯ ಪ್ರಮೋದ ಖೋತ, ಸಂದೀಪ ಸಾಳುಂಕೆ, ವಿಠ್ಠಲ ಚೋಳಕೆ, ಪೋಪಟ ಕನವಾಡೆ, ಅಶೋಕ ಬಾಗಿ, ಸಂತೋಷ ಮುಜಾವರ, ಬಾಬಾಸಾಹೇಬ ರತ್ನಾಪ್ಪಗೋಳ,ಸೇರಿದಂತೆ ಅನೇಕರು ಇದ್ದರು. ಸುಕುಮಾರ ಬನ್ನೂರೆ ಸ್ವಾಗತೀಸಿ, ವಂದಿಸಿದರು.