‘ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸಾಯಿಟಿಗೆ 45.35 ಕೋಟಿ ಲಾಭ’

'Yaksamba Beereshwar Co-op Society earns Rs 45.35 crore profit'

ಲೋಕದರ್ಶನ ವರದಿ 

‘ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸಾಯಿಟಿಗೆ 45.35 ಕೋಟಿ ಲಾಭ’ 

ಚಿಕ್ಕೋಡಿ: ದಕ್ಷಿಣ ಭಾರತದಲ್ಲಿ ದೊಡ್ಡ ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ಗ್ರಾಹಕರ ವಿಶ್ವಾಸ ಪಡೆದಿರುವ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ(ಮಲ್ಟಿಸ್ಟೇಟ್) ಇದರ ಆರ್ಥಿಕ ವರ್ಷದ ಅಂತ್ಯದವರೆಗೆ 45.35 ಕೋಟಿ ನಿವ್ವಳ ಲಾಭಗಳಿಸಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ 226 ಶಾಖೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತೊಳಿಸಿದರು. 

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾ ಭವನದಲ್ಲಿ ಕರೆದ ಸುದ್ದಿಗೋಷ್ಠೀಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 35 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಬೀರೇಶ್ವರ ಸಹಕಾರಿ ಶಾಖೆಗಳನ್ನು ಆರಂಭಿಸಿ ಸಹಕಾರಿ ರಂಗದಲ್ಲಿ ಹೊಸ ಅಧ್ಯಾಯ ಬರೆದಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಸಹಕಾರಿ ಸಂಸ್ಥೆಗಳಲ್ಲಿ ದೊರೆಯುತ್ತದೆ. ಇದರಿಂದ ಗ್ರಾಹಕರ ನೆಚ್ಚಿನ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು. 

ಸಂಸ್ಥೆಯು 4.08.233 ಸದಸ್ಯರನ್ನು ಹೊಂದಿದೆ. 34.92.16.400.00 ಶೇಅರ ಕ್ಯಾಪಿಟಲ್ ಹೊಂದಿದೆ. 200.93.63.424.22 ರಿಜರ್ವ ಪಂಡ ಹೊಂದಿದೆ. 4338.58.01.234.51 ಡಿಪಾಜಿಟ್ ಹೊಂದಿದೆ. 3313.79.84.992.50 ಸಾಲ ವಿತರಿಸಲಾಗಿದೆ. 1244.68.38.363.69 ಬ್ಯಾಂಕ ಉಳಿತಾಯ ಮತ್ತು ಗುಂತಾವಣಿ ಹೊಂದಿದೆ. 5030.90.15.574.73  ದುಡಿಯುವ ಬಂಡವಾಳ ಇದ್ದು, ಆರ್ಥಿಕ ವರ್ಷದ ಅಂತ್ಯದವರಿಗೆ 45.35.25.150.99 ನಿವ್ವಳ ಲಾಭಗಳಿಸಿದೆ ಎಂದರು. 

ಸಂಸ್ಥೆಯು ಇಷ್ಟೊಂದು ಬೆಳವಣಿಗೆ ಸಾಧಿಸಲು ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿ ಪ್ರೋತ್ಸಾಹ ಮತ್ತು ಸಿಬ್ಬಂದಿಗಳ ನಿರಂತರ ಪರಿಶ್ರಮ ಯಶಸ್ವಿಗೆ ಕಾರಣವಾಗಿದೆ ಎಂದರು. 

ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಸಿದ್ರಾಮ ಗಡದೆ, ಯಾಶೀನ ತಾಂಬೋಳೆ, ವಿಭಾವರಿ ದೀಲಿಪ ಖಾಂಡಕೆ, ಆನಂದ ದೇವಗೌಡ ಪಾಟೀಲ, ಅಣ್ಣಾಸಾಹೇಬ ಚೌಗಲಾ, ರುಷಭ ಜೈನ, ವಜ್ರಕಾಂತ ಸದಲಗೆ, ಪ್ರಕಾಶ ಪಾಟೀಲ, ನಿಂಗಪ್ಪ ಕೋಕಲೆ, ಕಾಶಿನಾಥ ಕಮತೆ, ದತ್ತಾತ್ರೇಯ ಪಾಟೀಲ, ಬಾಳಾಸಾಹೇಬ ಕದಮ, ಮಲ್ಲಿಕಾರ್ಜುನ ತೇಲಿ, ಸದಾನಂದ ಹಳಿಂಗಳಿ, ಜಯಪ್ರಕಾಶ ಸಾವಂತ, ಚೇತನ ದೇಶಪಾಂಡೆ, ಶ್ರೀನಿವಾಸ ಕರಾಳೆ, ಶ್ರೀಪಾದ ನೇರ್ಲಿಕರ ಮತ್ತು ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ, ಉಪ ಪ್ರಧಾನ ವ್ಯವಸ್ಥಾಪಕ ಎಂ.ಕೆ.ಮಂಗಾವತೆ, ಶಿವು ಡಬ್ಬನ್ನವರ, ಎಸ್‌.ಕೆ.ಮಾನೆ ಮುಂತಾದವರು ಇದ್ದರು.