'ಬಯೋ ಮೇಟ್ರಿಕ್ ಪದ್ಧತಿ ಕೈಬಿಟ್ಟ ಸರ್ಕಾರದ ಕ್ರಮಕ್ಕೆ ಸ್ವಾಗತ

ಲೋಕದರ್ಶನ ವರದಿ

ಗದಗ 04:  ಸ್ಲಂ ಜನಾಂದೋಲನ ಕರ್ನಾಟಕ  ಹಾಗೂ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯಿಂದ ಜೂನ್-12 ರಂದು ಆಹಾರ ಪಡಿತರ ಚೀಟಿದಾರರ ಸದಸ್ಯರ ಬಯೋ ಮಡಟ್ರಿಕ್ ಪದ್ಧತಿ ಕೈಬಿಡಬೇಕೆಂದು ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ  ಬಯೋ ಮೆಟ್ರಿಕ್ ಪದ್ದತಿಯನ್ನು ಹಿಂದಕ್ಕೆ ಪಡಿದಿದ್ದು ಸ್ಲಂ ಸಮಿತಿ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ.ಆರ್.ಮಾನ್ವಿ ಸರ್ಕಾರದ ಕ್ರಮವನ್ನು ಸ್ವಾತಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರ ಸಕರ್ಾರದಲ್ಲಿ ರಾಜ್ಯದ ಯಾವ ಒಬ್ಬ ಕುಟುಂಬವು ಹಸಿವುನಿಂದ ಇರಬಾರದೆಂಬ ಉದ್ದೇಶದಿಂದ ಹಸಿವು ಮುಕ್ತ ಕನರ್ಾಟಕದ ಹೆಸರಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು, ಕಾಳ ಸಂತೆಯಲ್ಲಿ ಆಹಾರ ಧಾನ್ಯಗಳು ಮಾರಾಟವಾಗುತ್ತಿದೆ ಮತ್ತು ಭೂಗಸ್ ಕಾರ್ಡಗಳನ್ನು ಪತ್ತೆ ಹಚ್ಚುವ ನೆಪ್ಪದಲ್ಲಿ ಒಂದಿಲ್ಲಾ ಒಂದು ದಾಖಲೆಗಳನ್ನು ಕೇಳಿ ಅನೇಕ ಕುಟುಂಬಗಳ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ, ಪಡಿತರದಾರರು ತಮ್ಮ ಕುಟುಂಬದೊಂದಿಗೆ ಹೆಬ್ಬಟಿನ ಗುರುತನ್ನು ನೀಡಬೇಕೆಂದು ಬಯೋ ಮೇಟ್ರಕ್ ಪದ್ಧತಿಯನ್ನು ಜಾರಿಗೆ ತಂದಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ ಕನರ್ಾಟಕ ರಾಜ್ಯ ಸಂಘಟನೆಯ ನೇತೃತ್ವದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ 12-06-2019 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿ ರಾಜ್ಯ ಸಕರ್ಾರ ಕೊಡಲೇ ಆಹಾರ ಪಡಿತರ ಚೀಟಿದಾರರ ಕುಟುಂಬ ಸದಸ್ಯರ ಇ-ಕೆವೈಸಿ ಬಯೋ ಮೆಟ್ರಿಕ್ ಪದ್ದತಿಯನ್ನು ಕೈಬಿಡಬೇಕೆಂದು ಆಗ್ರಹಿಸಲಾಗಿತ್ತು.

ಇದರ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸ್ಲಂ ಸಮಿತಿಯ ನೇತೃತ್ವದಲ್ಲಿ ಜನ ವಿರೋಧಿ ಬಯೋ ಮೆಟ್ರಿಕ್ ಪದ್ಧತಿ ಕೈಬಿಡಲು ರಾಜ್ಯ ಸಕರ್ಾರಕ್ಕೆ ಮನವಿಯ ಮೂಲಕ ಒತ್ತಾಯಿಸಲಾಗಿತ್ತು, ತಕ್ಷಣ ಎಚ್ಚತ್ತಗೊಂಡ ರಾಜ್ಯ ಸಕರ್ಾರ ದಿನಾಂಕ: 20ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕೇಂದ್ರ ಕಚೇರಿಯಿಂದ ಆಹಾರ ಪಡಿತರ ಚೀಟಿದಾರರ ಕುಟುಂಬ ಸದಸ್ಯರ ಇ-ಕೆವೈಸಿ ಬಯೋ ಮೆಟ್ರಿಕ್ ಪದ್ದತಿಯನ್ನು ಕೈಬಿಡಲಾಗಿದೆ ಎಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ, ಆದರೆ ಗದಗ ಜಿಲ್ಲೆಯಲ್ಲಿ ಹಾಗೂ ಗದಗ ಬೆಟಗೇರಿ ನಗರದ ಕಂಪ್ಯೋಟರ್ ನೆಟ್ ಸೆಂಟರಗಳು ಸಕರ್ಾರದ ಸುತ್ತೋಲೆಗೆ ಬೆಲೆ ನೀಡದೇ ಕುಟುಂಬ ಸದಸ್ಯರ ಇ-ಕೆವೈಸಿ ಮಾಡಿಸುತ್ತಿದ್ದು, ಇದಕ್ಕೆ ಆಹಾರ ಇಲಾಖೆಯ ಅಧಿಕಾರಿಗಳೆ ನೇರ ಹೊಣೆಗಾರರು, ಸಕಾರದ ಸುತ್ತೋಲೆ ಇದ್ದರು ಸಹ ಸಾರ್ವಜನಿಕರಿಗೆ ಮಾಹಿತಿ ನೀಡದೇ ಆಹಾರ ಇಲಾಖೆ ಅಧಿಕಾರಿಗಳು ಜನ ವಿರೋಧಿ ಕಾರ್ಯ ನಡೆಸುತ್ತಿದ್ದಾರೆ.

ಆದ್ದರಿಂದ ತಕ್ಷಣ ಆಹಾರ ಇಲಾಖೆ ಅಧಿಕಾರಿಗಳು ಸಕರ್ಾರದ ಸುತ್ತೋಲೆ ಪ್ರಕಾರ ಇ-ಕೆವೈಸಿ ಬಯೋ ಮೆಟ್ರಿಕ್ ಪದ್ದತಿಯನ್ನು ಕೈಬಿಟ್ಟಿರುವುದನ್ನು ಸಾರ್ವಜನಿಕ ಪ್ರಕಟಣೆ ನೀಡಬೇಕು, ಹಾಗೂ ಸಕರ್ಾರದ ಸುತ್ತೋಲೆಗೆ ಬೆಲೆ ನೀಡದೇ ಸಾರ್ವಜನಿಕರಿಗೆ ಬಯೋ ಮೆಟ್ರಿಕ್ ಮಾಡಿಸಲು ಒತ್ತಾಯ ಮಾಡುತ್ತಿರುವ ನೆಟ್ ಸೆಂಟರ್ಗಳ ಮಾಲಿಕರ ಹಾಗೂ ಪಡಿತರ ಅಂಗಡಿಕಾರರ ಮೇಲೆ ಕ್ರಮ ಕೈಗೊಳ್ಳಬೇಕು, ಆಹಾರ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಆಹಾರ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್. ಮಾನ್ವಿ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.