ದುಬೈ ಕನ್ನಡ ಉತ್ಸವದಲ್ಲಿ ಬೆಳಗಾವಿ ‘ನಾದಸುಧಾ’

Belgaum's 'Nada Sudha' at the Dubai Kannada Festival

ದುಬೈ ಕನ್ನಡ ಉತ್ಸವದಲ್ಲಿ ಬೆಳಗಾವಿ ‘ನಾದಸುಧಾ’ 

ಬೆಳಗಾವಿ 8: ಇತ್ತೀಚೆಗೆ ಡಾ.ಗುಣವಂತ ಮಂಜು ಅವರ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ  ಇವರ ವತಿಯಿಂದ ದುಬೈ ಮಹಾನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ ಸಲುವಾಗಿ ದುಬೈನಲ್ಲಿ ಕನ್ನಡ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಅದ್ದೂರಿಯಾಗಿ ನಡೆಯಿತು. 

ಬೆಳಗಾವಿಯ ನಾದಸುಧಾ ಸಂಗೀತ ಶಾಲೆಯ ಕಲಾವಿದ ಡಾ. ಸಂಪ್ರಿತಾ ನಾಗಭೂಷಣ್ ಅವರ ಭರತನಾಟ್ಯ ಹಾಗೂ ಡಾ.ಸತ್ಯನಾರಾಯಣ ಮತ್ತು ಡಾ. ಸಂಪ್ರಿತಾ ಅವರಿಬ್ಬರೂ ”ಚೆಲುವಯ್ಯ ಚೆಲುವೋ” ಜಾನಪದಗೀತೆಗೆ ಹಾಡಿ ಹೆಜ್ಜೆ ಹಾಕಿದರು. ಇದು ಎಲ್ಲರ ಗಮನ ಸೆಳೆಯಿತು.  ಬೆಳಗಾವಿಯ ಡಾ. ಸತ್ಯನಾರಾಯಣ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸೇವೆಯನ್ನು ಗಮನಿಸಿ  ಇಂಟರ್ ನ್ಯಾಶನಲ್ ಅಚೀವ್ ಮೆಂಟ್ ಅವಾರ್ಡ್‌ ಹಾಗೂ ಡಾ. ಸಂಪ್ರಿತಾ ನಾಗಭೂಷಣ್ ಅವರು ಸ್ಟಾರ್ ಗೋಲ್ಡ್‌ ಇಂಟರ್ ನ್ಯಾಶನಲ್  ಅವಾರ್ಡ್‌ ನೀಡಿ ಗೌರವಿಸಿದರು. ಅಲ್ಲದೇ  ಕರ್ನಾಟಕದ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಗಣನೀಯ ಸೇವೆಯನ್ನು ಸಲ್ಲಿಸಿರುವ ಸಾಧಕರನ್ನೂ ಗೌರವಿಸಲಾಯಿತು. 

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಾದಸುಧಾ ಸಂಸ್ಥಾಪಕ ಡಾ. ಸತ್ಯನಾರಾಯಣ ಅವರು, ವಿದೇಶದಲ್ಲಿ  ಕನ್ನಡ ಕಾರ್ಯಕ್ರಮ ನೀಡುತ್ತಿರುವ ನನಗೆ ಅತಿ ಸಂತೋಷವನ್ನುಂಟು ಮಾಡಿದೆ. ಹೊರದೇಶದಲ್ಲಿ ನಮ್ಮ ಸಂಸ್ಕೃತಿಯ ಕಂಪನ್ನು ಪಸರಿಸುತ್ತಿರುವ ಈ ಸಂಘಟಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು. 

ಡಾ. ಸಂಪ್ರೀತಾ ನಾಗಭೂಷಣ ಅವರ ಭರತನಾಟ್ಯ ಹಾಗೂ ಪದ್ಮಾ ಸತ್ಯನಾರಾಯಣ ಮತ್ತು ಡಾ. ಸತ್ಯನಾರಾಯಣ ಅವರ ಗಣೇಶ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಟನೆಗೊಂಡಿತು, ಕರ್ನಾಟಕ ಮೂಲದ ದುಬೈನ ಖ್ಯಾತ ವೈದ್ಯರಾದ ಡಾ. ರಶ್ಮಿ ನಂದಕಿಶೋರ್, ದುಬೈನ ಉನ್ನತ ಪೊಲೀಸ್ ಅಧಿಕಾರಿ ಶೇಕ್ ಪಹೇದ್ ಅಲ್ಲಾನೇಮ್, ಯುವ ನಾಯಕ ಅಂಬರೀಶ ಗೌಡ, ದುಬೈ ಕನ್ನಡ ಸಂಘದ ಅಧ್ಯಕ್ಷ ಸದನ್ ದಾಸ್, ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಸ್‌. ಅಕ್ಬರ್ ಭಾಷಾ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.