ಬಳ್ಳಾರಿ: ‘ಕರ್ನಾಟಕ ದರ್ಶನ’ ಮಕ್ಕಳ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ

Bellary: 'Karnataka Darshan' children's educational tour program launched

ಬಳ್ಳಾರಿ: ‘ಕರ್ನಾಟಕ ದರ್ಶನ’ ಮಕ್ಕಳ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ  

ಬಳ್ಳಾರಿ 17 :ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯಡಿ ಕೈಗೊಂಡಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ‘ಕರ್ನಾಟಕ ದರ್ಶನ’ ಪ್ರವಾಸ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಬಿ.ಉಮಾದೇವಿ ಅವರು ಗುರುವಾರ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿ ಪ್ರವಾಸಕ್ಕೆ ತೆರಳುವ ಬಸ್ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಪ್ರವಾಸ ಕೈಗೊಳ್ಳುವುದರಿಂದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಹೊಂದಲು ಸಹಾಯಕವಾಗುತ್ತದೆ ಎಂದರು.ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಬಳ್ಳಾರಿ ಜಿಲ್ಲೆಯಿಂದ ಪರಿಶಿಷ್ಟ ಜಾತಿಯ 270, ಪರಿಶಿಷ್ಟ ಪಂಗಡದ 309 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 579 ವಿದ್ಯಾರ್ಥಿಗಳ ಗುರಿ ನಿಗದಿಪಡಿಸಲಾಗಿದ್ದು, ಅದರಂತೆ ಪ್ರವಾಸಕ್ಕೆ ಮೊದಲ ಹಂತದಲ್ಲಿ 8, 9 ನೇ ತರಗತಿಯ 154 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್‌.ತಳಕೇರಿ ಅವರು ಮಾತನಾಡಿ, ಒಟ್ಟು ನಾಲ್ಕು ದಿನಗಳ ಪ್ರವಾಸದಲ್ಲಿ ಚಿತ್ರದುರ್ಗ, ಬೇಲೂರು, ಯಗಚಿ, ಹಳೆಬೀಡು, ಶ್ರವಣಬೆಳಗೊಳ, ತಲಕಾವೇರಿ, ಮಡಿಕೇರಿ, ಬೈಲುಕುಪ್ಪೆ, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಸಂದರ್ಶಿಸುವರು ಎಂದು ತಿಳಿಸಿದರು.ಇದೇ ವೇಳೆ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಗ್, ನೋಟ್ ಬುಕ್, ಟೀ-ಶರ್ಟ್‌, ಕ್ಯಾಪ್, ಪೆನ್ , ಕರ್ನಾಟಕ ಮ್ಯಾಪ್ ಹಾಗೂ ದಿನ ಬಳಕೆಯ ಟೂತ್ ಪೇಸ್ಟ್‌, ಸೋಪ್, ಶ್ಯಾಂಪೂ, ಹೇರ್ ಆಯಿಲ್, ಬಾಚಣಿಕೆ ಸೇರಿದಂತೆ ಇತರೆ ಒಳಗೊಂಡ ಬಾತ್ ಕಿಟ್ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಯಿಮೂರ್ ರೆಹಮಾನ್, ಜಿಲ್ಲಾ ನೋಡಲ್ ಅಧಿಕಾರಿ ನರಸಿಂಹಮೂರ್ತಿ, ತಾಲ್ಲೂಕು ನೋಡಲ್ ಅಧಿಕಾರಿ ಗೊಳೆಪ್ಪ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದ ಅನುಷ್ಠಾನ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು ಹಾಜರಿದ್ದರು. 

ಜ.18 ರಂದು ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಮತ್ತು ಜಾಗೃತಿ ಸಭೆಬಳ್ಳಾರಿ 17 :ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರಿಗಾಗಿ ವಿದ್ಯುತ್ ಸಂಬಂಧಿತ ದೂರು, ಸಮಸ್ಯೆ ಮತ್ತು ಅರಿವು ಮೂಡಿಸುವ ಸಲುವಾಗಿ ಜ.18 ರಂದು ಸಿರುಗುಪ್ಪ ಉಪವಿಭಾಗ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜೆಸ್ಕಾಂ ಗ್ರಾಹಕರ ‘ಕುಂದುಕೊರತೆ ಮತ್ತು ಜಾಗೃತಿ ಮೂಡಿಸುವ ಸಭೆ’ ಏರಿ​‍್ಡಸಲಾಗಿದೆ. 

ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಗೆ ಸಂಬಂಧಿಸಿದಂತೆ ಸಮಸ್ಯೆ ಇರುವಂತಹ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಭೆಗೆ ಹಾಜರಾಗಬೇಕು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.