ಮಕ್ಕಳ ಹಬ್ಬ ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣ ಸಂಸ್ಕಾರ ನೀಡಬೇಕು : ಆರ್‌.ಎಸ್‌. ಬುರಡಿ

Children's Festival Children should be educated in childhood: R.S. Buradi

ಮಕ್ಕಳ ಹಬ್ಬ  ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣ ಸಂಸ್ಕಾರ ನೀಡಬೇಕು : ಆರ್‌.ಎಸ್‌. ಬುರಡಿ  

ಗದಗ  09 ; ಮಗುವಿನ ಸಾಧನೆಯಲ್ಲಿ ಅತೀ ಹೆಚ್ಚು ಸಂತೋಷ ಪಡುವರು ತಂದೆ-ತಾಯಿ ಹಾಗೂ ಶಿಕ್ಷಕರಾಗಿದ್ದಾರೆ  ಎಂದು  ಡಿಡಿಪಿಐ  ಆರ್‌.ಎಸ್‌. ಬುರಡಿ ಅವರು ಹೇಳಿದರು.  

 ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ 19 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಹಬ್ಬ-2024-25  ಸಾಲಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಂದೆ-ತಾಯಿಗಳು ಮಕ್ಕಳ  ಉತ್ತಮ ಭವಿಷ್ಯಕ್ಕಾಗಿ  ಸಾಕಷ್ಟು ಕಷ್ಟಪಡುತ್ತಿರುವದರಿಂದ  ಮಕ್ಕಳ  ಉತ್ತಮ ಶಿಕ್ಷಣ ಪಡೆದು ದೊಡ್ಡವರಾದ ಮೇಲೆ ತಂದೆ-ತಾಯಿಗಳನ್ನು ಜೋಪಾನ ಮಾಡಬೇಕು.  ಈ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ  ಸಂಸ್ಕಾರ  ನೀಡುವದು ಅಗತ್ಯವಾಗಿದೆ.    ಮಕ್ಕಳು ಮನೆಯಲ್ಲಿ  ಪ್ರತಿದಿನ ತಂದೆ-ತಾಯಿ, ಗುರು-ಹಿರಿಯರಿಗೆ ನಮಸ್ಕಾರ ಮಾಡಿ ಬರಬೇಕು.  ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ  ಹೋಮವರ್ಕ್‌ನ್ನು ತಂದೆ-ತಾಯಿ ಮಾಡದೆ ಮಕ್ಕಳಿಗೆ ಮಾಡಲು  ಪ್ರೋತ್ಸಾಹ ನೀಡಬೇಕು.  ಜೀವನ ರಕ್ಷಣೆ  ಜ್ಯಾನ ಕೌಶಲ್ಯಗಳನ್ನು  ಮಕ್ಕಳಿಗೆ ಕಲಿಸಬೇಕು ಎಂದು ಅವರು ಹೇಳಿದರು.  

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ  ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಸಾಧನೆಗೆ ಶಾಲೆಯ  ಆಡಳಿತ ಮಂಡಳಿ ಮತ್ತು ಶಿಕ್ಷಕಿಯರ ಕೊಡುಗೆ ಅಪಾರವಾಗಿದೆ. ಅಲ್ಲದೆ, ಬಡವರ್ಗದ ಜನರೆ ಹೆಚ್ಚಾಗಿರುವ ಈ ಪ್ರದೇಶದಲ್ಲಿನ ಮಕ್ಕಳಿಗೆ  ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ  ನೀಡಬೇಕು ಎನ್ನುವ ಉದ್ದೇಶ  ಶಾಲೆಯನ್ನು ಆರಂಭಿಸಿರುವ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.  

 ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ  ಶಿಕ್ಷಣಕ್ಕಾಗಿತಮ್ಮ ಜೀವನವನ್ನೆ ಮುಡುಪಾಗಿಟ್ಟ,   ನಾಡಿನ ಸಂತ ಶ್ರೇಷ್ಟರ ವೇಷದಾರಿಗಳಾದ ಗೌತಮ ಕಬಾಡಿ-(ಲಿಂ.ಪಂ. ಪುಟ್ಟರಾಜ ಗವಾಯಿಗಳು), ಶುಭಂ ಕಬಾಡಿ-(ಲಿಂ.ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗಾ), ಮೈಲಾರಿ ಹಿರೇಮನಿ-(ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು), ಆಕಾಶ ಜಡಿ-(ಲಿಂ. ಪೂಜ್ಯಶ್ರೀ ಸಿದ್ದೇಶ್ವರ ಶ್ರೀಗಳು) ಹಾಗೂ ರಿಶಬ್ ಇಮರಾಪೂರ-(ಪೂಜ್ಯಶ್ರೀ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು) ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದರು.  

ಈ ಸಂದರ್ಭದಲ್ಲಿ ವೇದಿಕೆ ಮೇಲೆ  ನಟರಂಗ ಅಕಾಡೆಮಿಯ ಸಂಸ್ಥಾಪಕ ಸೋಮಶೇಖರಯ್ಯ ಚಿಕ್ಕಮಠ,  ಶಿಕ್ಷಕರುಗಳಾದ ಎಫ್‌.ಎ.ನಮಾಜಿ, ಆರ್‌.ಬಿ.ಲೋದಿ, ಸಮಾಜ ಸೇವಕ  ಹೀರಾಲಾಲ ಸಿಂಗ್ರಿ, ಶಾಲೆಯ ನಿರ್ದೇಶಕರುಗಳಾದ ಮೋಹನ ಇಮರಾಪೂರ, ಕವಿತಾ ಇಮರಾಪೂರ,  ಹಿರಿಯರಾದ ನಿರ್ಮಲಾ ಪಾಟೀಲ, ಸಲಹಾ ಸಮಿತಿ ಸದಸ್ಯರುಗಳಾದ ಮುತ್ತು ಜಡಿ, ಲೋಕೇಶ ಮಲ್ಲಿಗವಾಡ,  ಸವಿತಾ ಇಮರಾಪೂರ, ಶೋಭಾ ಕುರಿಯವರ, ಲಕ್ಷ್ಮೀ ಕವಡಕಿ, ಕವಿತಾ ಜಡಿ, ಆಡಳಿತಾಧಿಕಾರಿ ಸಾವಿತ್ರಿ ಕವಡಕಿ, ಮುಖ್ಯೋಪಾದ್ಯಾಯನಿ ಎಚ್‌.ಎಂ. ನದಾಫ್,  ಶಿಕ್ಷಕಿಯರಾದ  ಮಂಜುಳಾ ಹಿಡ್ಕಿಮಠ, ಸುಧಾ ತಿರಕಣ್ಣವರ, ರೇಖಾ ಅಂಗಡಿ, ವಂದನಾ ಕಲ್ಮನಿ, ಮಂಜುಳಾ ದಾಸರ,  ರೂಪಾ ಅಸೂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.