ಮಕ್ಕಳ ಸಾಹಿತ್ಯ ವೈವಿಧ್ಯತೆ ಪಡೆದುಕೊಳ್ಳುತ್ತಿದೆ: ಡಾ.ವೀರಣ್ಣ

ಲೋಕದರ್ಶನವರದಿ

ಬೆಳಗಾವಿ 08: ಧಾರವಾಡದ ಧ್ವನಿ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡ ಮಕ್ಕಳ ಸಾಹಿತ್ಯ ಒಂದು ಹೊರಳು ನೋಟ ಸ.ರಾ.ಸುಳಕೂಡೆಯವರು ಸಂಪಾದಿಸಿದ ಕೃತಿಯನ್ನು ಬಿಡುಗಡೆಗೊಳಿಸಿದ ನಾಡಿನ ಹಿರಿಯ ವಿದ್ವಾಂಸ ಪ್ರೊ.ವೀರಣ್ಣ ರಾಜೂರ ಮಕ್ಕಳ ಸಾಹಿತ್ಯವು ವೈವಿಧ್ಯಮಯವಾಗಿ ಬೆಳಕಿಗೆ ಬರುತ್ತಿರುವುದು ಸಂತೋಷದ ಸಂಗತಿ ಎಂದರು. ಕಥೆ, ಕವನಕ್ಕೆ ಸೀಮಿತವಾಗಿದ್ದ ಮಕ್ಕಳ ಸಾಹಿತ್ಯವಿಂದು ಕಾದಂಬರಿ, ಪ್ರಬಂಧಗಳ ಜೊತೆಗೆ ದೃಶ್ಯ ಮಾಧ್ಯಮದಲ್ಲಿ ಸ್ಥಾನ ಪಡೆದುಕೊಂಡಿದೆ. ಮಕ್ಕಳ ಸಾಹಿತ್ಯ, 'ಒಂದು ಹೊರಳು ನೋಟ' ಕೃತಿಯಲ್ಲಿ ಎಲ್ಲ ಪ್ರಬಂಧಗಳು ಮಕ್ಕಳಸಾಹಿತ್ಯದ ಬಗ್ಗೆ ಹೊಸ ನೋಟವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಮಕ್ಕಳ ಸಾಹಿತ್ಯವೆಂದರೇನು? ಮಕ್ಕಳ ಸಾಹಿತ್ಯವನ್ನು ಗ್ರಹಿಸುವ ವಿಧಾನ ರಚನೆ, ಶೈಲಿ ಮುಂತಾದವುಗಳು ಮುಕ್ತವಾಗಿ ಚಚರ್ಿತಗೊಂಡಿವೆ ಎಂದು ಅಭಿಪ್ರಾಯಪಟ್ಟರು. ಕೃತಿಯ ಸಂಪಾದನೆ ಮಾಡಿದ ಸ.ರಾ.ಸುಳಕೂಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಸಾಹಿತ್ಯದ ಮಾಹಿತಿಕೋಶ, ಮಕ್ಕಳ ಸಾಹಿತ್ಯಚರಿತ್ರೆ, ಸಾಹಿತ್ಯವಿಮಶರ್ೆ ಬೆಳಕು ಕಾಣುವ ಅವಶ್ಯಕತೆಯಿದೆಯೆಂದು ಹೇಳಿ ಸಂಪಾದಿತ ಕೃತಿಯು ಮಕ್ಕಳಸಾಹಿತ್ಯದ ವಿಭಿನ್ನ ನೆಲೆಗಳನ್ನು ಗುತರ್ಿಸಿದ್ದನ್ನ ವಿವರಿಸಿದರು.

ಆನಂದ ಪಾಟೀಲ ಡಾ.ಬಸು ಬೇವಿನಗಿಡದ ಶಿಕ್ಷಕ, ಸಾಹಿತಿ, ಕೆ.ಶಿವಲಿಂಗಪ್ಪ ಹಂದಿಹಾಳ ಇವರು ತಮ್ಮ ಲೇಖನದ ಸಾರಾಂಶಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಸಮಾರಂಭದಲ್ಲಿ ಭಾಗವಹಿಸಿದ ಡಾ. ಮಾಲತಿ ಪಟ್ಟಣಶೆಟ್ಟಿ, ಧೋಮಡೆ ಮುಂತಾದವರು ಮಕ್ಕಳ ಸಾಹಿತ್ಯ ಎಲ್ಲ ವರ್ಗದ ಮಕ್ಕಳಿಗೆ ತಲುಪುವಂತೆ ರೂಪಿಸುವ ಅಗತ್ಯವಿದೆಯೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಚಿಂತಕ ಶಿವಾನಂದ ಹೊಂಬಳ ಇವರು ಮಕ್ಕಳ ಸಾಹಿತ್ಯಕ್ಕೆ ಅಗತ್ಯ ಪ್ರೋತ್ಸಾಹಸಿಗುವಂತೆ ನಾವೆಲ್ಲ ಶ್ರಮಿಸಬೇಕೆಂದು ಹೇಳಿದರು.

ಈ ಸಮಾರಂಭದಲ್ಲಿ ಡಾ.ಆರ್.ಬಿ.ಚಿಲುಮಿ, ಸಂಜೀವ ಲದ್ದಿಮಠ, ನಿವೃತ್ತ ಗ್ರಂಥಾಲಯಾಧಿಕಾರಿ ಜಿ.ಬಿ.ಹೊಂಬಳ, ದಯಾನಂದ ತೋಕರ್ೆ, ಡಾ. ಚಂದ್ರಶೇಖರ ರೊಟ್ಟಿಗವಾಡ, ಪ್ರಕಾಶಕರಾದ ಚೇತನ ಕಣಬೂರ ರಾಮಚಂದ್ರ ದೊಂಗಡಿ, ಶ್ರೀನಿವಾಸ ವಾಡಪ್ಪಿ.ಮೊದಲಾದವರು ಭಾಗವಹಿಸಿದ್ದರು. ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು.