ಹುತಾತ್ಮ ಯೋಧನ ಪರಿವಾರ ಗೌರವಿಸುವ ಕಾರ್ಯಕ್ರಮಕ್ಕೆ ಸಹಕರಿಸಿ

ಧಾರವಾಡ 02: ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನು ಹೊಂದಿದ ಕನರ್ಾಟಕದ ವೀರಯೋಧ ಎಚ್. ಗುರು ಅವರ ಪತ್ನಿ ಕಲಾವತಿ, ತಂದೆ ಹೊನ್ನಯ್ಯ, ತಾಯಿ ಚಿಕ್ಕತಾಯಮ್ಮ ಹಾಗೂ ಸಹೋದರರಾದ ಮಧು ಮತ್ತು ಆನಂದ ಇವರು ಉತ್ತರ ಕನರ್ಾಟಕ ಸೈನಿಕರ ಕಲ್ಯಾಣ ಸಮಿತಿಯ ಆಮಂತ್ರಣದ ಮೇರೆಗೆ ಇದೇ ಮಾರ್ಚ 7 ರಂದು ಗುರುವಾರ ಧಾರವಾಡಕ್ಕೆ ಬರಲಿದ್ದು ಅವರಿಗೆ ವಿರೋಚಿತ ಸ್ವಾಗತ ನೀಡಿ, ಬೃಹತ್ ಮೆರವಣಿಗೆ ಹಾಗೂ ಸಮಾರಂಭದಲ್ಲಿ ಗೌರವಿಸುವ ಬಗ್ಗೆ ಜಿಲ್ಲಾ ಆಡಳಿತವು ಸಹಾಯ ಮಾಡಬೇಕೆಂದು ಸಮಿತಿಯು ಜಿಲ್ಲಾಧಿಕಾರಿ ದೀಪಾ ಚೋಳನ ಅವರಿಗೆ ಮನವಿಯನ್ನು ಸಲ್ಲಿಸಿತು.

      ಯೋಧರ ತ್ಯಾಗ ಬಲಿದಾನಕ್ಕೆ ಸಮಸ್ತ ಕನರ್ಾಟಕದ ಜನತೆಯ ಬೆಂಬಲವಿದ್ದು, ಈ ಕಾರ್ಯಕ್ರಮಕ್ಕೆ ಸರ್ವ ರೀತಿಯ ಸಹಾಯವನ್ನು ಒದಗಿಸುವುದಾಗಿ ಹೇಳಿ, ಪರೀಕ್ಷೆಯ ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಯಾವುದೇ ತೊಂದರೆಯಾಗದಂತೆ ಈ ದೇಶಭಕ್ತಿಯ ಕಾರ್ಯಕ್ರಮವನ್ನು ಸಂಘಟಿಸಬೇಕೆಂದು ಸೂಚಿಸಿದರು. 

 ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಕೃಷ್ಣ ಜೋಶಿ ಯವರು ಮನವಿಯನ್ನು ಸಲ್ಲಿಸಿ ಕಾರ್ಯಕ್ರಮದ ರೂಪ ರೇಷೆಗಳನ್ನು ವಿವರಿಸಿದರು. ಇದನ್ನು ಕೇಳಿದ ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿ, ಧಾರವಾಡದಲ್ಲಿ ನಡೆಯುವ ಈ ಕಾರ್ಯಕ್ರಮ ಹೆಮ್ಮೆ ಪಡುವಂತದ್ದು ಎಂದು ಹೇಳಿ ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದರು. 

  ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಮಾತನಾಡಿ, ಇಂದು ಪಾಕಿಸ್ತಾನದಿಂದ ಬಿಡುಗಡೆ ಹೊಂದಿದ ವಿಂಗ್ ಕಮಾಂಡರ ಅಭಿನಂದನ ವರ್ಧಮಾನ ಇವರನ್ನು ಕಂಡು ಧಾರವಾಡಕ್ಕೆ ಆಹ್ವಾನಿಸುವುದಾಗಿ ಹೇಳಿದರು. 

 ಈ ಸಂದರ್ಭದಲ್ಲಿ ಮನೋಜ ಪಾಟೀಲ, ಪಂಡಿತ ಮುಂಜಿ, ಕೆ. ಎ. ಜೋಶಿ, ಶಿವಣ್ಣ ಬಡಿಗೇರ, ಮಹಾಬಳೇಶ್ವರ ಸಿಂದಗಿ, ಸುಧೀರ ಜೋಶಿ, ಕೆ.ಎಚ್. ನಾಯಕ, ಮಹೇಶ ಕಲ್ಲಿಕರೆಣ್ಣವರ, ಅಶೋಕ ಕುಂಬಾರಿ, ಭೀಮಪ್ಪ ಜಾಧವ, ಸಿ. ಅಭಿನಂದನ್ ಮತ್ತಿತರರು ಉಪಸ್ಥಿತರಿದ್ದರು.