ನಿಧನ ವಾರ್ತೆ
ದಾರವಾಡ 21: ವಾಹಿನಿಯ ಮುಖ್ಯ ಕಾರ್ಯ ನಿರ್ವಾಹಕ ನಿರ್ಮಾಪಕ ಡಾ. ವಿಲಾಸ ವಸಂತರಾವ್ ನಾಂದೋಡಕರ ಅವರ ತಂದೆ ವಸಂತರಾವ್ ನಾಂದೋಡಕರ (76) ಮಂಗಳವಾರ ಬೆಳಗಿನ ಜಾವ ಅನಾರೋಗ್ಯದ ಕಾರಣ ನಿಧನರಾದರು. ಧಾರವಾಡದ ಸಂಪಿಗೆ ನಗರ ಹತ್ತಿರ ಇರುವ ಸಿದ್ಧಗಂಗಾ ನಗರದ ನಿವಾಸಿ. ವಸಂತರಾವ್ ನಾಂದೋಡಕರ ಅವರು ಪೊಲೀಸ್ ಮುಖ್ಯ ಪೇದೆಯಾಗಿ ನಿವೃತ್ತರಾಗಿದ್ದರು. ಮೃತರಿಗೆ ಮೂವರು ಗಂಡು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಪ್ರಮಾಣದ ಬಂಧು, ಮಿತ್ರರು ಇದ್ದಾರೆ.