ಪಪಂ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ
ಯರಗಟ್ಟಿ 21: ಪಟ್ಟಣದ ಚರಂಡಿ, ಪಟ್ಟಣವನ್ನು ಸ್ವಚ್ಚಗೊಳಿಸುವ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಪಾಲಿಕೆ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ ವಿತರಣೆ ಮಾಡಿದರು. ನಂತರ ಮಾತನಾಡಿ, ಚಳಿ, ಮಳೆ ಬಿಸಿಲನ್ನು ಲೆಕ್ಕಿಸದೆ ಪಟ್ಟಣವನ್ನು ಸ್ವಚ್ಚತೆಗಾಗಿ ದೈನಂದಿನವಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರು ಆರೋಗ್ಯದ ಕಡೆ ಗಮನ ಹರಿಸಬೇಕು. ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು, ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನ ಜತೆತೆ ಮಾತನಾಡುವಂತೆ ತಿಳಿಸಿದರು. ಕಿರಿಯ ಆರೋಗ್ಯ ನೀರೀಕ್ಷಕ ನಾಗರಾಜ ಚವಡಪ್ಪನವರ, ಕೆ. ಬಿ. ಬೆಣ್ಣಿ, ಆನಂದ ಬೆಳವಿ, ಸೇರಿದಂತೆ ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಇದ್ದರು.