ಮುಂಡರಗಿ ತಹಶೀಲ್ದಾರ ಕಛೇರಿಗೆ ಜಿಲ್ಲಾಧಿಕಾರಿಗಳ ಭೇಟಿ

ಗದಗ 28:  ಪ್ರಧಾನಮಂತ್ರಿ ರೈತ ಸಮ್ಮಾನ ನಿಧಿ ಯೋಜನೆಯಡಿ ಕಿಸಾನ್ ಡಾಟಾ ಎಂಟ್ರಿ ಕುರಿತು ಮುಂಡರಗಿ ತಹಶೀಲದಾರ ಕಛೇರಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು. ರೈತ ಸಮ್ಮಾನ ಯೋಜನೆಯಡಿಯಲ್ಲಿ ಅರ್ಹ ರೈತರು ಜಮೀನಿನ ಸರ್ವೆ ಸಂಖ್ಯೆ, ಆಧಾರ, ಹಾಗೂ ಘೋಷಣಾ ಪತ್ರ ನೀಡಿ ನೋಂದಾಯಿಸಿಸಿಕೊಳ್ಳಲು  ಹಾಗೂ ಯೋಜನೆ ಕುರಿತು ಜಾಗೃತಿ ಮೂಡಿಸಿ ಎಲ್ಲ ಅರ್ಹ ರೈತರು ಈ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕ್ರಮ ವಹಿಸಿಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಮುಡರಂಗಿ ತಹಶೀಲ್ದಾರ ವೆಂಕಟೇಶ ನಾಯಕ, ಸಿಬ್ಬಂದಿಗಳು ಉಪಸ್ಥಿತರಿದ್ದರು.