ವಿದ್ಯುತ್ ಅವಘಡ : ಸುಟ್ಟು ಕರಕಲವಾದ ಟಿವಿ, ಮೊಬೈಲ್ ಸೇರಿ ಎಲೆಕ್ಟ್ರಿಕಲ್

Electrical accident: TV, mobile phone and other electrical items burnt to ashes

ವಿದ್ಯುತ್ ಅವಘಡ : ಸುಟ್ಟು ಕರಕಲವಾದ ಟಿವಿ, ಮೊಬೈಲ್ ಸೇರಿ ಎಲೆಕ್ಟ್ರಿಕಲ್   

ಕಂಪ್ಲಿ:ಮೇ.21. ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಟಿವಿ, ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಿಕಲ್ ಸಾಮಾಗ್ರಿಗಳು ಸುಟ್ಟು ಕರಕಲವಾಗಿರುವ ಘಟಕ ಕಂಪ್ಲಿಯಲ್ಲಿ ಬುಧವಾರ ನಡೆದಿದೆ.  ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಕ್ವಾಟರ್ಸ್‌ನಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ ಸಂಭವಿಸಿದ ಹಿನ್ನಲೆ ನಾನಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.  ರಾಮಣ್ಣ ವಾಸಿಸುವ ಮನೆಯಲ್ಲಿ ಟಿವಿ, ಮೊಬೈಲ್ ಸೇರಿದಂತೆ ಕೆಲ ಎಲೆಕ್ಟ್ರಿಕ್ ಉಪಕರಣಗಳು ಬ್ಲಾಸ್ಟ್‌ ಆಗಿವೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಹಿನ್ನಲೆ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ಬಳಿಕ ಸ್ಥಳದಲ್ಲಿದ್ದ ಯುವಕರು ತಕ್ಷಣ ಮನೆ ಬಾಗಿಲು ಒಡೆದು ಒಳಪ್ರವೇಶಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಸ್ಥಳಕ್ಕೆ ಕೆಇಬಿ ಸಿಬ್ಬಂದಿ ಹಾಗೂ ಗ್ಯಾಸ್ ಸಿಲಿಂಡರ್ ಇಲಾಖೆಯ ಅಧಿಕಾರಿಗಳು ಬಂದು ವಿದ್ಯುತ್ ಲೈನ್ ಹಾಗೂ ಗ್ಯಾಸ್ ಲೈನ್ ಅನ್ನು ನಿಷ್ಕ್ರಿಯಗೊಳಿಸಿ ಮತ್ತಷ್ಟು ಅನಾಹುತ ತಪ್ಪಿಸಿದ್ದಾರೆ.  ಮೇ.03 ಮತ್ತು 03ಎ: ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಕ್ವಾಟರ್ಸ್‌ನಲ್ಲಿರುವ ಮನೆಯೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಸುಟ್ಟು ಕರಕಲವಾದ ಎಲೆಕ್ಟ್ರಿಕಲ್ ಸಾಮಾಗ್ರಿಗಳು.