ಸಾವಿತ್ರಿ ಬಾಯಿ ಫುಲೆ ರವರ 194ನೇ ಜನ್ಮ ದಿನಾಚರಣೆಯ ಪಾಕ್ಷಿಕ ಕಾರ್ಯಕ್ರಮ

Fortnightly program of Savitri Bai Phule's 194th birth anniversary

ಸಾವಿತ್ರಿ ಬಾಯಿ ಫುಲೆ ರವರ 194ನೇ  ಜನ್ಮ ದಿನಾಚರಣೆಯ ಪಾಕ್ಷಿಕ ಕಾರ್ಯಕ್ರಮ 

ಬಳ್ಳಾರಿ 03: ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಹನುಮಂತಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಗೌರವ ಸಲ್ಲಿಸುತ್ತಾ  "ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಹಾಗೂ ಪ್ರಥಮ ಮಹಿಳಾ  ಶಿಕ್ಷಕಿ ಸಾವಿತ್ರಿಬಾಯಿ ಫುಲೆ ರವರನ್ನು ಪ್ರತಿಯೊಬ್ಬ ಹೆಣ್ಣುಮಗಳು ನೆನಪಿಸಿಕೊಳ್ಳಲೇಬೇಕು. ಚಿಕ್ಕ ವಯಸ್ಸಿನಲ್ಲೇ  ಸ್ವತಃ ಶಿಕ್ಷಣವನ್ನು  ಕಲಿತು,   ಹೆಣ್ಣುಮಕ್ಕಳ  ಶಿಕ್ಷಣಕ್ಕಾಗಿ, ಅವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಶಿಕ್ಷಣದ ಅರಿವೇ ಇರದ  ಕಾಲದಲ್ಲಿ, ಮನುವಾದವನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಲವಾರು ಶಾಲೆಗಳನ್ನು ತೆರೆದರು. ಸಂಪ್ರದಾಯವಾದಿಗಳಿಂದ ಬಂದ ವಿರೋಧವನ್ನು ಮೆಟ್ಟಿನಿಂತು  ದೀನ ದಲಿತರ, ಅಸ್ಪೃಶ್ಯರ, ವಿಧವೆಯರ  ಜೀವನವನ್ನು ಉತ್ತಮಗೊಳಿಸಲು ಜೀವನ ಪಯಂರ್ತ ಶ್ರಮಿಸಿದರು. ಬಾಲ್ಯ ವಿವಾಹ , ವರದಕ್ಷಿಣೆ , ಜಾತಿ ತಾರತಮ್ಯ, ಮೌಢ್ಯತೆಯನ್ನು ಕಟುವಾಗಿ ವಿರೋಧಿಸಿದರು. ಇಂತಹ ಹೋರಾಟಗಾರ್ತಿ  ಇಂದಿನ ವಿದ್ಯಾರ್ಥಿ-ಯುವ ಜನತೆಗೆ, ಮಹಿಳಾ ಸಮುದಾಯಕ್ಕೆ ಮಾದರಿಯಾಗಬೇಕು" ಎಂದು ಹೇಳಿದರು.  

 ನಂತರ ಂಋಖಖ ನ ಜಿಲ್ಲಾಧ್ಯಕ್ಷರಾದ ಕೆ.ಎಂ. ಈಶ್ವರಿ ಮಾತನಾಡುತ್ತಾ "ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆಗಾಗಿ ಕೊಲೆ, ಮರ್ಯಾದೆಗೇಡು ಹತ್ಯೆಗಳು, ಆಸಿಡ್ ದಾಳಿ, ಗುಂಪು ಅತ್ಯಾಚಾರ..ಹೀಗೆ ಹಲವು ಬಗೆಯ ಅಗೌರವ, ಅನಾದರಗಳಿಗೆ ಮಹಿಳೆ ತುತ್ತಾಗುತ್ತಿದ್ದಾಳೆ. ಸಾಂಸ್ಕೃತಿಕ ಅಧಪತನದಿಂದಾಗಿ ಸಮಾಜದಲ್ಲಿ ನೀತಿ-ನೈತಿಕತೆ, ಸಂಸ್ಕೃತಿ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಎಐಎಂಎಸ್, ಸಾವಿತ್ರಿಬಾಯಿ ಫುಲೆ ಯಂತಹ ದಿಟ್ಟ ಹೋರಾಟಗಾರ್ತಿಯ ಜೀವನದಿಂದ ಸ್ಫೂರ್ತಿ ಪಡೆದು,  ಅವರು ಕಂಡ ಕನಸಿನ ಸಮಾಜ - ಎಲ್ಲರಿಗೂ ಸಮಾನತೆ ಇರುವ ಹೆಣ್ಣುಮಕ್ಕಳ, ಶೋಷಕರ,  ನೊಂದವರ ನೋವನ್ನು ನಿವಾರಿಸುವ ಹೊಸ ಸಮಾಜವನ್ನು ಕಟ್ಟಲು ಶ್ರಮಿಸುತ್ತಿದೆ. 

 ಈ ನಿಟ್ಟಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿಯು ಜನವರಿ 3 ರಿಂದ 18ರ ವರೆಗೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಮಹಿಳಾ ಶಿಕ್ಷಣ, ಉದ್ಯೋಗ, ಆರೋಗ್ಯ, ಭದ್ರತೆ ಖಾತ್ರಿಗಾಗಿ ಆಗ್ರಹಿಸುತ್ತಾ ಪಾಕ್ಷಿಕ ಕಾರ್ಯಕ್ರಮಗಳನ್ನು ಎಲ್ಲಾ ಸ್ತರದ ಮಹಿಳೆಯರ ನಡುವೆ ಹಮ್ಮಿಕೊಳ್ಳುತ್ತಿದೆ. ಸಾವಿತ್ರಿಬಾಯಿ ಫುಲೆ ಅವರ ಜೀವನ ಹೋರಾಟದ ಸ್ಫೂರ್ತಿಯನ್ನು ಎಲ್ಲೆಡೆ ಹರಡುವ ಈ ಮಹಾನ್ ಉದ್ದೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು " ಎಂದು ಹೇಳಿದರು. 

ಕಾಲೇಜಿನ ಪ್ರಿನ್ಸಿಪಾಲರ ಪರವಾಗಿ ಉಪನ್ಯಾಸಕರಾದ ಶ್ರೀ ಬಿ.ವಿಜಯ ರಂಗ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಂಋಖಖ ನ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ಸೌಮ್ಯ, ವಿದ್ಯಾವತಿ ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.