ನಾಳೆ ಅಸ್ತಮಾ ರೋಗಿಗಳಿಗೆ ಉಚಿತ ಓಷಧ ವಿತರಣೆ

Free medicine distribution to asthma patients tomorrow

ನಾಳೆ ಅಸ್ತಮಾ ರೋಗಿಗಳಿಗೆ ಉಚಿತ ಓಷಧ ವಿತರಣೆ   

  ಯಲಬುರ್ಗಾ  06: ಪಟ್ಟಣದ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ನಾಳೆ ಭಾನುವಾರ ಬೆಳಗ್ಗೆ 10-00 ಗಂಟೆಗೆ ಸಾವಿರಾರು ಅಸ್ತಮಾ ರೋಗಿಗಳಿಗೆ ಶ್ರೀಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಉಚಿತ ಓಷಧ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.ಬೆಂಗಳೂರು, ರೋಣ, ಕುಷ್ಟಗಿ ಸೇರಿದಂತೆ ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ರೋಗಿಗಳಿಗೆ ಉಚಿತ ಓಷಧವನ್ನು ಪಡೆದುಕೊಳ್ಳಲು ಆಗಮಿಸಲಿದ್ದಾರೆ ಎಂದರು.ಸುಮಾರು 10-15 ವರ್ಷದಿಂದಲೂ ಓಷಧಿ ನೀಡಲಾಗುತ್ತಿದೆ. ಮೃಗಶಿರ ಮಳೆ ಕೂಡುವ ವೇಳೆ ನೀಡುವ ಈ ಓಷಧವನ್ನು ಸತತ ಮೂರ್ನಾಲ್ಕು ವರ್ಷ ಸೇವಿಸಿದರೆ ಅಸ್ತಮಾ ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಸ್ತಮಾ ರೋಗಿಗಳು ಪ್ರತಿವರ್ಷ ಇಲ್ಲಿಗೆ ಬರುತ್ತಾರೆ. ಈ ವರ್ಷಕೂಡ ಹೆಚ್ಚು ಜನತೆ ಬರುವ ಭರವಸೆ ಇದೆ ಎಂದು ಪತ್ರಕರ್ತರಿಗೆ ತಿಳಿಸಿದರು.