ಲೋಕದರ್ಶನ ವರದಿ
ಗದಗ 10: 14ನೇ ಶತಮಾನದ ಶಿವಶರಣಿ ಹೇಮರಡ್ಡಿ ಮಲ್ಲಮ್ಮನ ಸ್ಥಾನ ಮುಗ್ದ ಭಕ್ತಿಯದು, ಶ್ರದ್ಧೆಯ ಸತಿಯದು ನಿಪಪೇಕ್ಷೆ ಸೇವೆ ಮಾಡಿದ ಸೊಸೆ ಅವಳು, ಹೆಣ್ಣು ಒಂದು ಮನೆಯ ಕಣ್ಣು ಆದಾಗ ಜಗದ ಕಣ್ಣಾಗಿಯೇ ಬೆಳೆಯುತ್ತಾಳೆ. ಹುಚ್ಚು ಮನಸ್ಸಿನ ವಿಕ್ಷಿಪ್ತ ಗಂಡನನ್ನು ಮೆಚ್ಚಿ ದೇವರಂತೆ ಸೇವೆ ಮಾಡಿದ್ದು, ಪ್ರಣಯದ ಪ್ರಲೋಭನೆಗೆ ಸಿಕ್ಕು ಮತ್ತನಾದ ಮೈದುನನ್ನು ಪ್ರಪಾತದಿಂದ ಮೇಲೆತ್ತಿ ಕಾವ್ಯಷರ್ಿಯಾಗಲು ಕಾರಣಳಾದಳು. ಒಡೆದ ಮನೆಯನ್ನು ಒಂದುಗೂಡಿಸಿದಳು. ತಿರಸ್ಕರಿಸಿದವರನ್ನು ಪ್ರೀತಿಸಿದ್ದು ಈ ತಾಯಿಯ ಘಣ ಆದರ್ಶವೆಂದು ಈ ಆದರ್ಶಗುಣಗಳನ್ನು ನಾವೆಲ್ಲರೂ ಮೈಗೂಡಿಸಕೊಳ್ಳಬೇಕೆಂದು ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದ ಅಧ್ಯಕ್ಷರಾದ ರವೀಂದ್ರನಾಥ ಮೂಲಿಮನಿ ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಕಸ್ತೂರಿಬಾಯಿ ಹಿರೇಗೌಡರ, ಲೀಲಾ ಮದರಡ್ಡಿ ಇವರಿಂದ ಪ್ರಾರ್ಥನೆ ಜರುಗಿತು. ಸಂಘದ ಸಹಕಾರ್ಯದಶರ್ಿಯಾದ ಶಿವನಗೌಡ ಹಳ್ಳೂರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶೇಖರಡ್ಡಿ ಗದ್ದಿಕೇರಿ, ರವಿ ಕುಲಕಣರ್ಿ, ಸಿ.ಕೆ.ಪಾಟೀಲ, ಬಿ.ಎಚ್.ಮಂಕಣಿ, ಸಿ.ಜಿ.ಜಲರಡ್ಡಿ, ಹನುಮಂತಪ್ಪ ಸಂಶಿ, ಎಸ್.ಜಿ.ಕೊನರಡ್ಡಿ, ಶರಣಪ್ಪ ಹೊಸಮನಿ, ಸಮಸ್ತ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಕೃಪೆಗೆ ಪಾತ್ರರಾದರು