ಲೋಕದರ್ಶನ ವರದಿ
ಗದಗ 01: ಸಮಾಜದಲ್ಲಿ ಮನೆ ಮಾಡಿದ ಜಾತಿ-ಮತ ಪಂಥ ತೊಡೆದು ಹಾಕುವ ಉದ್ದೇಶದಿಂದ ಈ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ಹೊಸಹಳ್ಳಿ ಬೂದೀಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಬೂದೀಶ್ವರ ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಐದು ದಿನಗಳ ಬೂದೀಶ್ವರ ಜಾತ್ರಾ ಮಹೋತ್ಸ ಪ್ರಯುಕ್ತ ಶನಿವಾರ ಸಾಮೂಹಿಕ ವಿವಾಹದಲ್ಲಿ ಆಶೀರ್ವಚನ ಅವರು ಮಾತನಾಡಿ, ಸಂಸಾರ ಎಂಬುದು ಜೋಡೆತ್ತಿನ ಬಂಡಿ. ಸತಿ-ಪತಿ ಬದುಕಿನ ಬಂಡಿ ಜೋಡಿಯಾಗಿ ಎಳೆಯಬೇಕು. ಸುಖ-ದುಃಖದಲ್ಲಿ ಸಮಪಾಲು ಹೊಂದಿ ಸಂಸಾರ ನಡೆಸಬೇಕು ಎಂದು ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು.
ಗಂಡ-ಹೆಂಡಿರ ಬದುಕು ನಂದಾದೀಪವಿದ್ದಂತೆ ಆದರೆ, ಇದನ್ನು ದೀವಟಗೆ ತರಹ ಉರಿಯಲು ಬಿಡದೆ, ಶಾಂತರೀತಿಯಾಗಿ ಉರಿಸಬೇಕು. ಧರ್ಮ, ಅರ್ಥ, ಕಾಮ ಜಯಸಿ ಮೋಕ್ಷದತ್ತ ಸಾಗಬೇಕು. ಗಂಡ-ಹೆಂಡತಿ ಧರ್ಮದ ಮಾರ್ಗದಲ್ಲಿ ಸಾಗಬೇಕು. ನ್ಯಾಯದಿಂದ ದುಡಿದ ಸಂಪತ್ತು ಧಾಮರ್ಿಕ ಕಾರ್ಯಗಳಿಗೆ ವಿನಿಯೋಗ ಮಾಡಬೇಕು. ದುಶ್ಚಟಗಳಿಂದ ದೂರ ಇರುವಂತೆ ಬೂದೀಶ್ವರ ಶ್ರೀಗಳು ಸಲಹೆ ನೀಡಿದರು.
ನರೇಗಲ್ ಶ್ರೀಗಳು ಮಾತನಾಡಿ, ದುಶ್ಚಟಗಳಿಗೆ ಬಲಿಯಾಗಿ ಹೆಂಡಿತಿ, ಮಕ್ಕಳು ಬೀದಿಗೆ ತಳ್ಳುವ ಕೆಲಸ ಮಾಡಬಾರದು. ಗಂಡರು ಹಿತ್ತಾಳೆ ಕಿವಿಗೆ ಓಗೋಡಬಾರದು ಎಂದು ತಿಳಿಸಿದರು.
ನೆರಗಲ್ ಶ್ರೀಗಳು ಮಾತನಾಡಿ, ಮದುವೆ ಮಾಡಿಕೊಂಡ ನಂತರ ಜವಾಬ್ದಾರಿ ಹೆಚ್ಚುತ್ತವೆ. ಅವುಗಳನ್ನು ಅಚ್ಚುಕಟ್ಟಾಗಿ ನಿಭಾಹಿಸಬೇಕು. ಹಿರಿಯರನ್ನು ಗೌರವಿಸಬೇಕು.
ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ- ತಾಯಿ, ಗುರು, ದೇವರ ಋಣ ತೀರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ 32 ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಭುಸ್ವಾಮಿ ಹಿರೇಮಠ, ಸಿದ್ದಯ್ಯ ಹಿರೇಮಠ, ದುಂಡಯ್ಯ ವಿವಾಹ ಕಾರ್ಯ ನೆರವೇರಿಸಿದರು.
ಸಮಾರಂಭದಲ್ಲಿ ಕುರ್ತಕೋಟಿ ಗ್ರಾಪಂ ಸದಸ್ಯ ಅಪ್ಪಣ್ಣ ಇನಾಮತಿ, ಕುಮಾರಪ್ಪ ಬೆಟಗೇರಿ, ಸಂಗಮೇಶ ಅಂಗಡಿ, ಈರಪ್ಪ ಈರಗಾರ, ಫಕ್ಕೀರಪ್ಪ ಅಂಗಡಿ, ಅಪ್ಪಣ್ಣ ಅಂಗಡಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದರು.