ಗಜೇಂದ್ರಗಡ: ಶಿವಕುಮಾರ ಉದಾಶಿ ಗೆಲುವಿಗೆ ಸಂಭ್ರಮ ಆಚರಣೆ

ಲೋ ಕದರ್ಶನ ವರದಿ 

ಗಜೇಂದ್ರಗಡ (ಗದಗ)  23: ಹಾವೇರಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿ ಶಿವಕುಮಾರ ಉದಾಶಿ ಹ್ಯಾಟ್ರಿಕ್ ಗೆಲುವಿನಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸಹಸ್ರಾರು ಕಾರ್ಯಕರ್ತರು ಪರಸ್ಪರ ಬ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜೃಂಬಣಿ ಯಿಂದ ವಿಜಯೋತ್ಸವ ಆಚರಿಸಿದರು. 

ಪಟ್ಟಣದ ಕಾಲಕಾಲೇಶ್ವರ ವೃತ್ತ, ದುಗರ್ಾವೃತ್ತ, ಹಿರೇಬಜಾರ, ಸೇರಿದಂತೆ ಎಲ್ಲ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ಸಾಮೂಹಿಕವನ್ಣ ಪಟಾಕಿ ಸಿಡಿಸಿದರು. ಬಳಿಕ ಬೈಕ ರ್ಯಾಲಿ ನಡೆಸಿದ ಕಾರ್ಯಕರ್ತರು ರೋಣ ರಸ್ತೆಯ ಬಿಜೆಪಿ ಕಾರ್ಯಾಲ ಯಕ್ಕೆ ತೆರಳಿ ನೆಚ್ಚಿನ ನಾಯಕನ ಗೆಲುವಿಗೆ ಕೆಕೆ ಹಾಕಿ ಸಂಭ್ರಮಿಸಿದರು. ಸಾಕಷ್ಟು ಕಾರ್ಯಕರ್ತರು ಶಾಸಕ ಕಳಕಪ್ಪ ಬಂಡಿ ನಿವಾ ಸಕ್ಕೆ ತೆರಳಿ ಅವರ ಧರ್ಮಪತ್ನಿ ಸಂಯುಕ್ತಾ ಬಂಡಿ ಅವರನ್ನು ಅಭಿನಂದಿಸಿದರು. 

ಸಂಸದ ಶಿವಕುಮಾರ ಉದಾಶಿ ಮೂರನೇ ಬಾರಿ ಹಾವೇರಿ ಲೋಕಸಭಾ ಮತಕ್ಷೇತ್ರದಲ್ಲಿ ಐತಿಹಾಸಿಕ ಜಯಬೇರಿ ಬಾರಿ ಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡು ಪಕ್ಷದ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬಿತು ಪಡಿಸಿಕೊಂಡಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದ ಸಹಸ್ರಾರು ಸಂಖ್ಯೆ ಕಾರ್ಯಕರ್ತರ ಹಷರ್ೋದ್ಘಾರ ಮುಗಿಲು ಮುಟ್ಟಿತ್ತು. ಎಲ್ಲರೂ ಪರಸ್ಪರ ಬಣ್ಣ ಎರಚಿ, ಪಟಾಕ್ಷಿ ಸಿಡಿಸಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು. ಇಂದು ಪ್ರಕಟವಾದ ಫಲಿತಾಂಶ ಹೊಸ ಐತಿಹಾಸಿಕ ನಿಣರ್ಾಯಕ್ಕೆ ನಾಂದಿಯಾಯಿತು ಎಂದು ರಾಜಕೀಯ ತಜ್ಞರು ತಿಳಿಸಿದರು. 

ಹಾವೇರಿ ಸಭಾ ಮತಕ್ಷೇತ್ರದ ಸರ್ವ ಸಮುದಾಯ ಜನತೆಯ ಗೆಲವು ಇದಾಗಿದೆ. ಕ್ಷೇತ್ರದ ಜನತೆ ಬಿಜೆಪಿ ಅವಧಿಯಲ್ಲಿನ ಅಭಿವೃದ್ಧಿ ಕಂಡು ಮತ್ತೆ ಪಕ್ಷವನ್ನು ಗೆಲ್ಲಿಸಿದ್ದಾರೆ ಇದರ ಸಂಪೂರ್ಣ ಶ್ರೇಯಸ್ಸು ಕ್ಷೇತ್ರದ ಜನತೆಗೆ ಸಲ್ಲುತ್ತದೆ ಎಂದು ಮುಖಂಡರು ತಿಳಿಸಿದರು. 

ಇದಕ್ಕೂ ಮೊದಲು ಫಲಿತಾಂಶ ಕುರಿತು ಕುತೂಹಲಭರಿತರಾದ ಜನತೆ ಬೆಳಗ್ಗೆ ಟಿವಿ ಮುಂದೆ ಕುಳಿತು ವಿಕ್ಷಿಸಿದರು. ಸಾಕಷ್ಟು ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲಿ ಟಿವಿ ನೋಡಿದರು. ಇದರಿಂದ ಮಾರುಕಟ್ಟೆ ಬೀದಿಯಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಕ್ಷೇತ್ರ ಅಭ್ಯಥರ್ಿ ಶಿವಕುಮಾರ ಉದಾಶಿ ಗೆಲವು ಬಳಿಕ ಮಾರುಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾರಾಟ, ಕೂಗಾಟವನ್ನು ಜೋರಗಿ ನಡೆಸಿದರು.  

ವಿಜಯೋತ್ಸವದಲ್ಲಿ ರಾಜೆಂದ್ರ ಘೋರ್ಪಡೆ, ಶಂಕರ್ ಇಂಜನಿ, ಮಹಾಂತೇಶ ಗಂಧದ, ಜಗದೀಶ ಸಕ್ರೀ, ಮುತ್ತಣ್ಣಾ ಚೆಟ್ಟೇರ್, ವಿಶ್ವನಾಥ ಕುಷ್ಟಗಿ, ಸಂಜೀಯಕುಮಾರ ಜೋಶಿ, ರೂಪಲೇಶ ರಾಟೋಡ, ವಿರುಪಾಕ್ಷಪ್ಪ ಕುಂಬಾರ, ತಾಯಪ್ಪ ಮ್ಯಾಕಲ್, ಕವಿತಾ ಜಾಲಿಹಾಳ, ಕೌಸರಬಾನು ಹುನಗುಂದ, ಲೀಲಾವತಿ ಸವಣೂರ, ಅಂಬರೀಶ ಬಳಿಗೇರ, ಅಶೋಕ ವನ್ನಾಲ, ರಾಜೇಂದ್ರ ಘೋರ್ಪಡೆ, ಮೋಹನಸಾ ರಾಯಬಾಗಿ, ಭಾಸ್ಕರ್ ರಾಯಬಾಗಿ, ಲಾಲಪ್ಪ ರಾಟೋಡ, ಗಿರಿಶ ಕುಲ ಕಣರ್ಿ, ಎಮ್.ಬಿ. ಕಂದಗಲ್, ಮುತ್ತಣ್ಣಾ ಗುಗ್ಗರಿ, ಪ್ರಭು ಚವಡಿ, ಬಸವರಾಜ ಪುರ್ತಗೇರಿ, ಕನಕಪ್ಪ ಅರಳಿ ಗಿಡದ, ಮೂಕಪ್ಪ ನಿಡಗುಂದಿ, ಮುದಿಯಪ್ಪ ಮುಧೋಳ, ಶರಣಪ್ಪ ರೇವಡಿ, ತರಪಾದಾರ, ರೂಪ್ಲೇಪ್ಪ ರಾಟೋಡ, ಅಮರೇಶ ಅರಳಿ, ರವಿ ಗಡೇದವರ, ಬುಡ್ಡಪ್ಪ ಮೂಲಿಮನಿ, ವಿಶ್ವನಾಥ ಮೇಘರಾಜ, ಹೊನ್ನುಸಾ ದಾನಿ ಇನ್ನಿತರು ಉಪಸ್ಥಿತರಿದ್ದರು.