ಲೋಕದರ್ಶನ ವರದಿ
ಗಜೇಂದ್ರಗಡ 08: ಸ್ಥಳೀಯ ಮೈಸೂರು ಮಠದಲ್ಲಿ 156 ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು ಕಾರ್ಯಕ್ರಮದಲ್ಲಿ ಸಾಹಿತ್ಯ ಲೋಕಕ್ಕೆ ಪ.ಗು.ಹಳಕಟ್ಟಿಯವರು ಕೊಡುಗೆ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಸಾಪ ತಾಲೂಕಾ ಅಧ್ಯಕ್ಷ ಐಎ ರೇವಡಿ ಮಾತನಾಡಿ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಅವರ ಪಾತ್ರವನ್ನ ವಿವರಿಸುತ್ತಾ, 1926ರಲ್ಲಿ ಹಿತಚಿಂತಕ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ ಅದರ ಮೂಲಕ ಮಾನವ ಕುಲಕ್ಕೆ ಶರಣರ ವಚನಳನ್ನು ಮುದ್ರಿಸಿ ಲೋಕಕ್ಕೆ ಸಮಪರ್ಿಸಿದರು.
ವಚನಗಳ ಪಿತಾಮಹ ಎಂಬ ಬಿರುದಿನಿಂದಲೆ ಜಗತ್ತು ಇವರನ್ನು ಗುರುತಿಸುತ್ತದೆ. ಆಗೀನ ಕಾಲದಲ್ಲಿಯೇ ಶಿವಾನುಭವ ಎಂಬ ವಾರ ಪತ್ರಿಕೆಯೊಂದಿಗೆ ಸುಮಾರು ಮೂವತೈದು ವರ್ಷಗಳ ವರೆಗೆ ಅದನ್ನು ನಡೆಸಿಕೊಂಡು ಬರುತ್ತಾರೆ. ವಿಶ್ವವಿದ್ಯಾಲಯವು ಮಾಡುವ ಕೆಲಸವನ್ನು ಇವರು ಒಬ್ಬರೆ ಮಾಡುತ್ತಿದ್ದರು. ಅದನ್ನು ಗಮನಿಸಿದ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಡುತ್ತೆ.
ಡಾಕ್ಟರೇಟ್ ಪದವಿ ಬಂದಿರುವಂತಹ ಸಂದರ್ಭದಲ್ಲಿ ಇವರು ಕೊಟಿನೊಳಗೆ ಹರಿದ ಅಂಗಿಯ ವಿಷಯದ ಸಂದರ್ಭವನ್ನ ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರಾಡದೆ ಇರದು ಎಂದರು. ವೈದ್ಯಾಧಿಕಾರಿ ಮಹಾಂತೇಶ ಹಾದಿಮನಿ ಮಾತನಾಡಿ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಹಿತ್ಯದ ಕೊಡುಗೆಯ ಕುರಿತು ಮಾತನಾಡುತ್ತಾ ಕನ್ನಡದಲ್ಲಿ ವೈದ್ಯ ಸಾಹಿತಿಗಳು ಸಾಕಷ್ಟು ಜನರಿದ್ದು, ವೈದ್ಯ ಸಾಹಿತ್ಯಗೋಷ್ಠಿಗಳು ನಡೆಯಲಿ, ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡದ ಸಾಹಿತ್ಯದ ವಾತಾವರಣ ಸೃಷ್ಟಿಯಾಗಲಿ ಎಂದರು.
ಉಪನ್ಯಾಸವನ್ನು ಶಂಕ್ರಣ್ಣ ಅಂಗಡಿ ಮಾತನಾಡಿ ಫ.ಗು.ಹಳಕಟ್ಟಿಯವರು ಕೇವಲ ಒಂದು ಭಾಷೆಯಲ್ಲಿ ವಚನಗಳನ್ನು ಹೊರತಂದಿದ್ದರೆ ಇಂದು 23 ಕ್ಕೂ ಹೆಚ್ಚು ಭಾಷೆಗಳಲ್ಲಿ ಬಸವಣ್ಣನವರ ವಚನಗಳು ಮುದ್ರಿತಗೊಂಡಿದ್ದು ಅದು ವಚನ ಸಾಹಿತ್ಯಕ್ಕಿರುವ ಶಕ್ತಿ. ನಮ್ಮ ಮಕ್ಕಳಿಗೆ ವಚನ ಸಾಹಿತ್ಯವನ್ನು ಪರಿಚಯಿಸುವುದರ ಮೂಲಕ, ಕಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಚನ ಸಾಹಿತ್ಯದ ಕಾಲಘಟ್ಟವನ್ನು ಮರುಕಳಿಸುವಲ್ಲಿ ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗಜೇಂದ್ರಗಡದ ಚನ್ನು ಸಮಗಂಡಿ ಅವರ 'ಸತ್ಯ-ಮಿತ್ಯ ಎಂಬ ಮಾಸ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಅಶೋಕ ಅರವಾ, ಬಿ.ಟಿ. ಹೊಸಮನಿ, ಹನುಮಂತಪ್ಪ ಭಜಂತ್ರಿ, ಮಹಾಂತೇಶ ಅರಳಿ, ವಿರುಪಾಕ್ಷಯ್ಯ ಅಳವಂಡಿ, ಈರಣ್ಣ ಬಳಿಗೇರ, ಸುರೇಶ ಭಂಡಾರಿ, ಕಾತರ್ಿಕ ಶಿಂಗ್ರಿ, ಎಮ್.ಎಸ್.ಮಕಾನದಾರ, ಕೆ.ಜಿ.ಸಂಕಟಿ,ಶರಣಪ್ಪ ಬೇವಿನಕಟ್ಟಿ, ಎಸ್.ಎಸ್.ನರೇಗಲ್ ಮುಂತಾದವರು ಉಪಸ್ಥಿತರಿದ್ದರು.