ಭಾರತದ ಸಂವಿಧಾನ ವಿಶ್ವ ಶ್ರೇಷ್ಠ: ಶಾಸಕ ನಾಡಗೌಡ

India's constitution is world's greatest: MLA Nad Gowda

ಭಾರತದ ಸಂವಿಧಾನ ವಿಶ್ವ ಶ್ರೇಷ್ಠ: ಶಾಸಕ ನಾಡಗೌಡ  

ತಾಳಿಕೋಟಿ 26: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಅದ್ಭುತವಾದ ಸಂವಿಧಾನವನ್ನು ಕೊಟ್ಟು ಹೋದ ಭಾರತ ರತ್ನ ಅಂಬೇಡ್ಕರ್ ರನ್ನು ಸ್ಮರಿಸುವ ಕಾರ್ಯ ಆಗಬೇಕು ಎಂದು ಕೆ. ಎಸ್‌.ಡಿ.ಎಲ್ ಅಧ್ಯಕ್ಷ, ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಹೇಳಿದರು.  

ರವಿವಾರ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ, ನೈಸರ್ಗಿಕ ಸಂಪನ್ಮೂಲಗಳಲ್ಲಿ ಭಾರತ ಜಗತ್ತಿನ ಶ್ರೀಮಂತರ ರಾಷ್ಟ್ರ ಆದರೆ ಕೆಲವು ಸಂಕುಚಿತ ವಿಚಾರಗಳಿಂದಾಗಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇವಲ್ಲವುಗಳನ್ನು ಮರೆತು ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ಅಗತ್ಯ ಇದೆ ಎಂದರು. ಧ್ವಜಾರೋಹಣ ನೆರವೇರಿಸಿ ತಹಸಿಲ್ದಾರ್ ಕೀರ್ತಿಚಾಲಕ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹೀನೀಯರನ್ನು ಹಾಗೂ ಶ್ರೇಷ್ಠ ಸಂವಿಧಾನವನ್ನು ಕೊಟ್ಟು ಹೋದ ಡಾ.ಬಾಬಾ ಸಾಹೇಬರನ್ನು ಅನುದಿನವು ಅನುಸರಿಸಿ ಸ್ಮರಿಸೋಣ ಎಂದರು. ಈ ವೇಳೆ ಮಾಜಿ ಸೈನಿಕರಿಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.  

ಕಾರ್ಯಕ್ರಮಕ್ಕೆ ಮುನ್ನ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪಿಎಸ್‌ಐ ರಾಮನಗೌಡ ಸಂಕನಾಳ ನೇತ್ರತ್ವದಲ್ಲಿ ಸಿಬ್ಬಂದಿ, ಎನ್‌ಸಿಸಿ, ಹೋಂ ಗಾರ್ಡ, ರೇಂಜರ್ಸ್‌ ಆಯಿಂಡ್ ರೋವರ್ಸ, ಎಚ್‌ಎಸ್ ಪಾಟೀಲ ಬಿಎಡ್ ಕಾಲೇಜ, ವಿಪಿಎಂ ಶಾಲೆ ಬ್ಯಾಂಡ್ ಸೆಟ್ ವಿದ್ಯಾರ್ಥಿಗಳು ಧ್ವಜ ವಂದನೆ ಸಲ್ಲಿಸಿದರು.  

ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆಯಲ್ಲಿ ತಾಪಂ ಇಒ ನಿಂಗಪ್ಪ ಮಸಳಿ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಇದ್ದರು.  

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ರಾಜಕೀಯ ಮುಖಂಡರು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.