ಕಿಮ್ಸ್ ಬೋಧಕ, ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಕ್ರಮ: ತುಕಾರಾಂ

ಕೊಪ್ಪಳ  25: ಕಿಮ್ಸ್ಗೆ ಬೋಧಕ, ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕನರ್ಾಟಕ ಸಕರ್ಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಈ. ತುಕಾರಾಮ್ ಅವರು ಹೇಳಿದರು.  

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ "ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯ (450 ಹಾಸಿಗೆ ಆಸ್ಪತ್ರೆ ನಿಮರ್ಾಣಕ್ಕೆ) ಸೋಮವಾರದಂದು ಶಂಕು ಸ್ಥಾಪನೆ ನೆರೆವೇರಿಸಿ ಅವರು ಮಾತನಾಡಿದರು.  

ಎಂ.ಸಿ.ಐ. ನಿಯಮಾನುಸಾರ ಕಿಮ್ಸ್ನಲ್ಲಿ ಕ್ರಮ ವಹಿಸಲಾಗುವುದು.  ಮೆಡಿಕಲ್ ಕೌನ್ಸಲ್ ಆಫ್ ಇಂಡಿಯಾದ (ಎಂ.ಸಿ.ಐ.) ನಿಯಮಾವಳಿ ಪ್ರಕಾರ ಕೊಪ್ಪಳದ ಮೆಡಿಕಲ್ ಕಾಲೇಜು ನಿರ್ವಹಣೆಗೆ ಪ್ರಯತ್ನ ಮಾಡುತ್ತಿದ್ದೇವೆ.  ಬೋಧಕ ಹಾಗೂ ಉಪನ್ಯಾಸಕರು ಸೇರಿದಂತೆ ಅಗತ್ಯ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ.  ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜಿಗೆ ಅಗತ್ಯ ಸೌಲಭ್ಯಗಳ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಸುದೀರ್ಘ ಚಚರ್ೆ ನಡೆಸಿದ್ದು, ಕಿಮ್ಸ್ಗೆ ಅಗತ್ಯವಿರುವ ಕಟ್ಟಡ ಸೇರಿದಂತೆ ಸಾಮಗ್ರಿಗಳ ಖರೀದಿ ಪ್ರಕ್ರಿಯೆಗೆ ಕ್ರಮ ಕೈಗೊಂಡಿದ್ದೇವೆ.  ಇಲ್ಲಿ ಎಂ.ಸಿ.ಐ. ನಿಯಮಾನುಸಾರ ಕೆಲವೊಂದು ಹುದ್ದೆ ಸೇರಿದಂತೆ ಅಗತ್ಯ ಸೌಲಭ್ಯಗಳ ಸಮಸ್ಯೆಗಳಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.  ಕಿಮ್ಸ್ಗೆ 90 ವೈದ್ಯರು ಬೇಕಿದ್ದು, ಅದರಲ್ಲಿಯೇ 30 ವಿಶೇಷ ಶಸ್ತ್ರ ಚಿಕಿತ್ಸಕರು ಹಾಗೂ 60 ಎಂ.ಬಿ.ಬಿ.ಎಸ್. ವೈದ್ಯರ ಅವಶ್ಯಕತೆಯಿದೆ.  ಈ ಬಗ್ಗೆ ವಿವಿಧ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ.  ಬೋಧಕರ ಹುದ್ದೆ ಸೇರಿದಂತೆ 2500 ಪುಸ್ತಕಗಳ ಕೊರತೆಯಿದೆ.  ಇನ್ನೂ ವಿಜಿಟರ್ ಕೊಠಡಿ, ಪ್ರಯೋಗಾಲಯದ ಕೊಠಡಿ ಸೇರಿದಂತೆ ಇತರೆ ಕೊಠಡಿಗಳ ವ್ಯವಸ್ಥೆಗಳನ್ನು ಕಲ್ಪಿಸಬೇಕಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಕೆಲವೊಂದು ವೈದ್ಯರ ಹಾಗೂ ಬೋಧಕರ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆದಿದ್ದು, ಕೆಲವರು ಆಸಕ್ತಿ ವಹಿಸಿ ಮುಂದೆ ಬಂದಿದ್ದಾರೆ.  ಆದರೆ ಶಸ್ತ್ರ ಚಿಕಿತ್ಸಕರು ಮುಂದೆ ಬರುತ್ತಿಲ್ಲ.  ಹೀಗಾಗಿ ಪಯರ್ಾಯ ವ್ಯವಸ್ಥೆಗೂ ಚಿಂತನೆ ನಡೆದಿದೆ.  ಒಟ್ಟಾರೆ ಎಂ.ಸಿ.ಐ. ನಿಯಮಾನುಸಾರ ಕಿಮ್ಸ್ ನಿರ್ವಹಣೆಗೆ ಎಲ್ಲ ಸಿದ್ದತೆಗಳನ್ನು ಕೈಗೊಂಡಿದೆ.  ಪ್ರಸ್ತುತ 700 ಹಾಸಿಗೆಯುಳ್ಳ ಈ ಆಸ್ಪತ್ರೆಯನ್ನು ಮುಂದಿನ ದಿನದಲ್ಲಿ 1000 ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾಡಲು ಹಾಗೂ ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಯನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  

ಆಸ್ಪತ್ರೆಯ ಅಡಿಗಲ್ಲು ಸಮಾರಂಭದಲ್ಲಿ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.  ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್,  ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ತಹಶೀಲ್ದಾರ ಜೆ.ಬಿ. ಮಜ್ಗಿ, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಹಾಗೂ ರಾಜಶೇಖರ ಹಿಟ್ನಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲುಖಾದರ ಖಾದ್ರಿ, ನಗರಸಭೆ ಸದಸ್ಯರಾದ ಅಮಜದ್ ಪಟೇಲ್, ಗುರುರಾಜ ಹಾಗೂ ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಹಲವು ಗಣ್ಯರು ಇದೇ ಸಂದರ್ಭದಲ್ಲಿ  ಉಪಸ್ಥಿತರಿದ್ದರು.