ಕೊಪ್ಪಳ: ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ, ಪುರ ಕೆರೆ ಶುದ್ಧಿಕರಣ ಕಾಮಗಾರಿ: ಯೋಜನಾ ವ್ಯವಸ್ಥಾಪಕ ಪಿ.ಪಾಂಡಿಯನ್ ಹೇಳಿಕೆ

ಲೋಕದರ್ಶನ ವರದಿ

ಕೊಪ್ಪಳ 20: ಜಿಲ್ಲೆಯ ಕುಷ್ಟಗಿ  ತಾಲೂಕಿನ  ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಪುರ ಗ್ರಾಮದ ಕೆರೆಯನ್ನು ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕೊಪ್ಪಳ ವತಿಯಿಂದ ಮಂಜೂರಾದ ಯೋಜನೆ ಅಡಿಯಲ್ಲಿ ಪುರ ಗ್ರಾಮದ ಕೆರೆ ಶುದ್ಧಿಕರಣಗೊಳಿಸುವ ಕಾಮಗಾರಿ ಎಲ್&ಟಿ ಸಂಸ್ಥೆ ವತಿಯಿಂದ ವಿಶ್ವಜಲಸಂರಕ್ಷಣೆ ದಿನಾಚರಣೆ ಪ್ರಯುಕ್ತ ಜರುಗಿತು.

ಗ್ರಾಮಿಣ ಜನರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲು ಸ್ವಚ್ಚತೆಯ ಅಭಿಯಾನ ನಡೆಸಿ ನೀರು ಜೀವ ಜಲ ಅಮುಲ್ಯವಾದದ್ದು, ಇದನ್ನು ಮಿತವಾಗಿ ಬಳಸಿ, ಎಂಬುವದು ಗ್ರಾಮಿಣ ಜನರಿಗೆ ಜಾಗೃತಿ ಮೂಡಿಸುವದರ ಜೋತೆಗೆ ಕೆರೆ ಶುಧ್ಧಿಕರಣಗೊಳಿಸಿ ಸೂಮಾರು 8 ಹಳ್ಳಿಗಳ ಜನರಿಗೆ ಕುಡಿಯುವ ನೀರು ಪೂರೈಕೆ ಸದರಿ ಕಾಮಗಾರಿಯಿಂದ ಮತ್ತು ಕೆರೆ ಶುಧ್ಧಿಕರಣದಿಂದ ಸಿಗುವ ಈ ಕಾಮಗಾರಿ ಸಾಗಿದೆ. ಕುಷ್ಟಗಿ ಶಾಸಕ ಅಮರೆಗೌಡ ಪಾಟೀಲ್ ಬಯ್ಯಾಪುರರವರು ತೋರಿಸಿದ ಪುರ ಕೆರೆಯಲ್ಲಿ ಸ್ವಚ್ಚಗೊಳಿಸುವ ಕಾರ್ಯ ಎಲ್&ಟಿ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಕೆ.ಮಣಿ, ಯೋಜನಾ ವ್ಯವಸ್ಥಾಪಕ ಪಿ.ಜಗವೀರ ಪಾಂಡಿಯನ್ ಸೇರಿದಂತೆ ಅನೇಕರು ಸೇರಿ ಗ್ರಾಮಸ್ತರ ಸಹಕಾರದಿಂದ ನೆರೆವೇರಿಸಲಾಯಿತು.