ಕೊಪ್ಪಳ 23: ನಟಸಾರ್ವಭೌಮ ಡಾ. ರಾಜ್ಕುಮಾರ್ ಇವರ 91ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ. ರಾಜ್ಕುಮಾರ್ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್ ಪೆದ್ದಪ್ಪಯ್ಯರವರು ಡಾ. ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಇವರನ್ನು ಸ್ಮರಿಸುತ್ತಾ ಡಾ. ರಾಜ್ಕುಮಾರ್ರವರು ಅವರೊಟ್ಟಿಗೆ ಕೆಲಸ ಮಾಡುತ್ತಿದ್ದ ಸಹ ಕಲಾವಿದರಿಗೆ ಸಂಧ್ಯಾಕಾಲದಲ್ಲಿ ದುಡಿಯಲು ಆಗದ ಕಲಾವಿದರ ಜೀವನ ನಿರ್ವಹಣೆಗಾಗಿ ಅಂತಹ ಕಲಾವಿದರಿಗೆ ನೆರವು ನೀಡುತ್ತಿದ್ದ ಇವರು ದೇಶ, ರಾಜ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು ತಮ್ಮ ಸಿನಿಮಾಗಳ ಮೂಲಕ ಸಮಾಜವನ್ನು ತಿದ್ದುವ, ಮಾರ್ಗದರ್ಶನ ನೀಡುವಂತಹ ಮತ್ತು ವೃತ್ತಿ ಬದುಕಿನಲ್ಲಿ ಪ್ರಮಾಣಿಕತೆ, ಶ್ರದ್ಧಾ-ಭಕ್ತಿ ಮೂಡಿಸುವಂತಹ ಕೆಲಸವನ್ನು ತಮ್ಮ ಚಲನಚಿತ್ರಗಳ ಮೂಲಕ ಮಾಡಿದ್ದಾರೆ. ಇಂತಹ ಆದರ್ಶಪ್ರಾಯವಾದ ನಟ ಡಾ. ರಾಜ್ಕುಮಾರ್ ನಮಗೆಲ್ಲರಿಗೂ ಹಾಗೂ ಮುಂದಿನ ಪೀಳಿಗೆಗೂ ಮಾದರಿ ಎಂದರು.
ವಾತರ್ಾಧಿಕಾರಿ ಧನಂಜಯರವರು ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ರಾಜ್ಕುಮಾರ್ರವರ ಜಯಂತಿಯನ್ನು ಸಕರ್ಾರದಿಂದ ಆಚರಿಸಲಾಗುತ್ತಿದ್ದು ವಾತರ್ಾ ಇಲಾಖೆಯನ್ನು ನೋಡಲ್ ಇಲಾಖೆಯನ್ನಾಗಿ ನೇಮಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಸಾಹಿತಿ ಮಹಾಂತೇಶ ಮಲ್ಲನಗೌಡರ, ಉಪನ್ಯಾಸಕ ಚಿಕ್ಕರೆಡ್ಡೆಪ್ಪ, ಸರಗಣಚಾರ್, ವಾರ್ತಾ ಇಲಾಖೆಯ ಎಂ. ಅವಿನಾಶ, ಪಾಂಡುರಂಗ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.