ಕೊಪ್ಪಳ: ಕ್ರೀಡೆ ಇಲ್ಲದವನ ಬಾಳು ಕೀಟತಿಂದ ಹಣ್ಣಿನಂತೆ: ನಾಡಗೀರ್ ಹೇಳಿಕೆ

ಕೊಪ್ಪಳ 26:  ಕ್ರೀಡೆ ಇಲ್ಲದನ ಬಾಳು ಕೀಟತಿಂದ ಹಣ್ಣಿನಂತೆ ಎಂದು ಕೊಪ್ಪಳ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ. ನಾಡಗೀರ ಅವರು ಹೇಳಿದರು.

ಕೊಪ್ಪಳ ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ಕ್ರೀಡಾ ಇಲಾಖೆ ಹಾಗೂ ವಂದೇಮಾತರಂ ಯುವ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರದಂದು ಆಯೋಜಿಸಲಾದ ಗ್ರಾಮೀಣ ಕ್ರೀಡೋತ್ಸವ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದ ಉದ್ದೇಶಿಸಿ ಆರ್.ಜಿ. ನಾಡಗೀರ ಅವರು ಮಾತನಾಡಿದರು.

ಕ್ರೀಡೆಯಿಂದ ಮಾನವನ ಸಧೃಢ ಆರೋಗ್ಯ ನಿಮರ್ಾಣವಾಗಲು ಸಾಧ್ಯವಾಗುತ್ತದೆ. ಮಾನವ ಜೀವನದಲ್ಲಿ ಕ್ರೀಡೆಯೆನ್ನುವುದು ಮಾನವನ ಅವಿಭಾಜ್ಯ ಅಂಗ ಮಾನವನು ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕ್ರೀಡೆ ಇಲ್ಲದವನ ಬಾಳು ಕೀಟತಿಂದ ಹಣ್ಣಿನಂತೆ ಆಗುತ್ತದೆ. ಗ್ರಾಮೀಣ ಪ್ರದೇಶ ಪ್ರತಿಯೊಬ್ಬ ಯುವಕ ಯುವತಿಯರಿಗೆ ಕ್ರೀಡೆಯ ಬಗ್ಗೆ ಅರಿವು ಮೂಡಬೇಕಾದರೆ ಇಂತಹ ಕಾರ್ಯಕ್ರಮಗಳು ಅವಶ್ಯ. ಮತ್ತು ಕ್ರೀಡಾ ಇಲಾಖೆಯು ಹಲವಾರು ರೀತಿಯಾದ ಸೌಲಭ್ಯಗಳ ನೀಡಲಾಗುತ್ತಿದ್ದು, ಅವುಗಳ ಸದಪಯೋಗವನ್ನು ಗ್ರಾಮೀಣ ಭಾಗದ ಯುವಜನತೆ ಪಡೆಯಬೇಕು. ಹಾಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ನಿಭರ್ೀತಿಯಿಂದ ಮತ ಚಲಾಯಿಸಬೇಕು. ಮತದಾನ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಅದನ್ನು ಯಾರೂ ಮಾರಿಕೊಳ್ಳಬಾರದು ಎಂದು ಕೊಪ್ಪಳ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ. ನಾಡಗೀರ ಹೇಳಿದರು.

ಸಿ.ಆರ್.ಪಿ. ದ್ಯಾಮಣ್ಣ ಮುರಡಿ ಅವರು ಮಾತನಾಡಿ ಗ್ರಾಮೀಣ ಬಾಗದಲ್ಲಿ ಇಂತಹ ಕ್ರೀಡೋತ್ಸವವನ್ನು ಕ್ರೀಡಾ ಇಲಾಖೆಯು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಹಾಗೆ ಪ್ರತಿಯೊಬ್ಬ ಯುವಕ ಯುವತಿಯರು ಗ್ರಾಮೀಣ ಕ್ರೀಡೋತ್ಸವದಲ್ಲಿ ಭಾಗಿಯಾಗಬೇಕು. ಮತ್ತು ಗ್ರಾಮೀಣ ಸೊಗಡಿನ ಕ್ರೀಡೆಗಳು ನಶಿಸಿ ಹೋಗದಂತೆ ಪ್ರತಿ ಕ್ರೀಡಾ ಚಟುವಟಿಕಟಯಲ್ಲಿ ಯುವಕರು ಪಾಲ್ಗೊಳಬೇಕು ಎಂದು ಹೇಳಿದರು.

ಸಂದರ್ಭದಲ್ಲಿ ಮತದಾನ ಜಾಗೃತಿ ಅಭಿಯಾನ ಕುರಿತು ಶಾಲಾ ಶಿಕ್ಷಕ ಭೀಮಸೇನ ಜೋಷಿ ಬಿಎಲ್ಓ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಬುಡಶೆಟ್ನಾಳ ಗ್ರಾ ಪಂ ಸಿಬ್ಬಂಧಿ ಮಲ್ಲಕಜಪ್ಪ ಕಮ್ಮಾರ, ಬಸಮ್ಮ, ಹಾಗೂ ಸಂಸ್ಥೆಯ ಉಪಾಧ್ಯಕ್ಷ ನಾಗಪ್ಪ ಹಳ್ಳಿಕೇರಿ, ಗ್ರಾಮದ ಹಿರಿಯರಾದ ಶರಣಪ್ಪ ಮುರಡಿ, ಸಿದ್ದಪ್ಪ ಶಹಪೂರು, ನಾಗರಾಜ, ಕ್ರೀಡಾ ಇಲಾಖೆ ಅಥ್ಲೇಟಿಕ್ಸ್ ತರಬೇತುದಾರ ತಿಪ್ಪಣ್ಣ ಮಾಳಿ ಮತ್ತು ಸಿಬ್ಬಂದಿಳಾದ ಹನುಮೇಶ, ಶರಣಪ್ಪ ಡಂಬರ್ ಇದೇ ಸಂದರ್ಭದಲ್ಲಿ 

ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಹಗ್ಗ ಜಗ್ಗಾಟ, ಭಾರ ಎತ್ತುವ ಸ್ಪಧರ್ೆ, 03 ಕಾಲಿನ ಓಟ, ಕಬಡ್ಡಿ, ಸ್ಲೋ ಸೈಕಲ್ ಸ್ಪಧರ್ೆ ಮುಂತಾದ ಸ್ಪಧರ್ೆಗಳನ್ನು ಏರ್ಪಡಿಸಲಾಯಿತು.