ಕೊಪ್ಪಳ : ರಾಜಶೇಖರ ಹಿಟ್ನಾಳ್ ಗೆಲುವು ನಿಶ್ಚಿತ: ನಗರಸಭೆ ಹಿರಿಯ ಸದಸ್ಯರಾದ ಅಮ್ಜದ್

ಲೋಕದರ್ಶನ ವರದಿ

ಕೊಪ್ಪಳ 25: ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಮತದಾನವಾಗಿದ್ದು, ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಜನತೆ ಇನ್ನು ಮರೆತಿಲ್ಲ ಈ ಯೋಜನೆಗಳು ಮೈತ್ರಿ ಸರಕಾರದಲ್ಲಿ ಸಹ ಮುಂದುವರೆದಿವೆ ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ನಗರಸಭೆ ಹಿರಿಯ ಸದಸ್ಯರಾದ ಅಮ್ಜದ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ನಗರ ಪೊಲೀಸ್ ಠಾಣೆಯ ಪಕ್ಕದ ಬಾಲಿಕೀಯರ ವಸತಿ ನಿಲಯದ ಮತಗಟ್ಟೆ ಸಂಖ್ಯೆ 129 ರಲ್ಲಿ ತಮ್ಮ ಧರ್ಮಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದ ನಂತರ ಮಾತನಾಡಿ ನಾವು ನಮ್ಮ ಮತದಾನದ ಹಕ್ಕುನ್ನು ಚಲಾಯಿಸಿದ್ದೇವೆ ಎಲ್ಲಾರೂ ತಪ್ಪದೇ ಮತದಾನ ಮಾಡಿ ಜೊತೆಗೆ ಮತದಾನಕ್ಕಾಗಿ ಆಗಮಿಸುವ ವೃದ್ದರು, ವಿಕಲಚೇತನರಿಗೆ ಮತದಾನ ಮಾಡಲು ಎಲ್ಲಾರೂ ಸಹಾಯ ಮಾಡೋಣ ಎಂದರು.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.