ಲೋಕದರ್ಶನ ವರದಿ
ಕೊಪ್ಪಳ 01: ಭಾರತ ದೇಶವು ವಿವಿಧತೆಯಲ್ಲಿ ಐಕ್ಯತೆಯನ್ನು ಹೊಂದಿರುವ ದೇಶವಾಗಿದೆ. ಆಚಾರ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನಿಟ್ಟುಕೊಂಡು ಜೀವನ ಸಾಗಿಸುತ್ತಿರುವ ದೇಶ ಎಂದು ಹೇಳಲಾಗುತ್ತಿದೆ. ಧರ್ಮ, ನಂಬಿಕೆ ಮತ್ತು ಸಾಂಪ್ರದಾಯದ ಹೆಸರಿನಲ್ಲಿ ನಿರ್ಗತಿಕರಿಗೆ, ಅಸಹಾಯಕರಿಗೆ, ತಳ ಸಮುದಾಯ ಹಾಗೂ ತುಳಿತಕ್ಕೆ ಒಳಪಟ್ಟಿರುವ ದಲಿತರಿಗೆ ಮಹಿಳೆಯರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆಯ ಸದಸ್ಯರು ಹೇಳಿದರು.
ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ದಲಿತ ಮಹಿಳೆಯರಿಗೆ ಅನ್ಯಾಯಮಾಡಲಾಗುತ್ತಿದೆ. ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ದಲಿತ ಮಹಿಳೆಯರ ಜೀವನದಲ್ಲಿ ಚಲ್ಲಾಟ ಆಡಲಾಗುತ್ತಿದೆ. ಧಾಮರ್ಿಕತೆ ಹೆಸರಿನ್ನಲ್ಲಿ ಸಮಾಜಿಕ, ಶೈಕ್ಷಣಿಕ ಮತ್ತು ರಾಜಿಕೀಯವಾಗಿ ದೂರ ಉಳಿಯುವಂತೆಮಾಡಿದ್ದಾರೆ. ದೇವರಹೆಸರಿನಲ್ಲಿ ಮತ್ತು ಕಟ್ಟಿ ದೇವದಾಸಿಯರನ್ನಾಗಿ/ ಬಸವಿಯನ್ನಾಗಿ ಮಾಡುವ ಸಾಂಪ್ರದಾಯವನ್ನು ಹುಟ್ಟುಹಾಕಿ ದಲಿತ ಮಹಿಳೆಯರನ್ನು ದಯನೀಯವಾಗಿ ಶೋಷಿಸುತ್ತಬರುತ್ತಿದಾರೆ. ಇಂತಹ ಅಮಾನವೀಯ ಪದ್ದತಿ ಕೋನೆಗಾಣಿಸಬೇಕಿದೆ ಎಂದರು.
ಚಂದಾಲಿಂಗ ಕಲಾಲ್ ಬಂಡಿಯವರು ಮಾತನಾಡಿ ಭಾರತದ ಯಾವುದೆ ಧರ್ಮದ ಜನಾಂಗ ಜಾತಿಯ ಮಹಿಳೆಯರನ್ನು ದೇವದಾಸಿ ಬೀಡುವುದು ಮತ್ತು ಈ ಪದ್ಧತಿಗೆ ಪ್ರಚೋದನೆ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಆದರೆ ಕಾನೂನು ಅನುಷ್ಠಾನವಾಗದೆ ದೇವದಾಸಿ ಪದ್ದತಿಗೆ ಮಹಿಳೆಯರು ನಿರಂತರವಾಗಿ ಬಲಿಯಾಗುತ್ತಿದ್ದಾರೆ. ಸವದತ್ತಿಯ ಎಲ್ಲಮ್ಮ, ಹುಲಿಗಿಯ ಹುಲಿಗೆಮ್ಮ, ಹುಚ್ಚಂಗಿಯ ದುರುಗಮ್ಮ ದೇವರ ಹೆಸರಿನಲ್ಲಿ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಶೋಷಿತ ನಿರ್ಗತಿಕ, ಅಸಹಾಯಕ, ಅಂಗವಿಕಲ, ಬಡ ದಲಿತ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ಬಲವಂತವಾಗಿ ತಳ್ಳುತ್ತಿರುವುದು ಇಂದಿಗೂ ನಡೆಯುತ್ತಿದೆ ಎಂದು ಹೇಳಿದರು.
ಮೂಢನಂಬಿಕೆ ಮೌಢ್ಯತೆ, ಅನಕ್ಷರತೆ, ಕೀಳುರಿಮೆ ಭಾವನೆ ಹೂಗಲಾಡಿಸಬೇಕಿದೆ. ಮಹಿಳೆಯರಿಗೆ ಶಿಕ್ಷಣನೀಡಬೇಕಿದೆ. ಅನಿಷ್ಠ ಪದ್ದತಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ನಾವು ಎಲ್ಲಾ ರಂಗದಲ್ಲಿ ಸಾಧನೆಯ ದಾರಿಯತ್ತ ಮುಖಮಾಡಿ ನಿಲ್ಲುವಂತಹ ಅವಕಾಶ ನೀಡಬೇಕಿದೆ. ಪ್ರೊ. ಬಿ.ಕೃಷ್ಣಪ್ಪ ಅವರ 81ನೇ ಜನುಮ ದಿನದ ಅಂಗವಾಗಿ ದೇವದಾಸಿ ಮಕ್ಕಳ ಸಮೋಹಿಕ ವಿವಾಹ ಕಾರ್ಯಕ್ರಮ ಅಯೋಜಿಸಿರುವುದು ಸಂತಸವಾಗಿದೆ. ನೊಂದವರ ಬದಿಕಿಗೆ ಬೆಳಕಾಗಿ ದೀನ ದಲಿತರ ಧ್ವನಿಯಾಗಿದ್ದರು ಸಾಮಾಜಿಕ ಬದ್ಧತೆಗೆ ಹೆಸರಾಗಿದ್ದ ಇವರು ತಮ್ಮ ಜೀವನದ ಹಂಗನ್ನು ತೋರೆದು ಸಮಾಜದ ಒಳಿತಿಗಾಗಿ ನಿರಂತರ ದುಡಿದಿದ್ದಾರೆ. ಅನ್ಯಾಯದ ವಿರುದ್ಧ ಅಂದೋಲನ ಮತ್ತು ಚಳುವಳಿಯನ್ನು ಪ್ರಾರಂಬಿಸಿದ್ದರು. ಸಮಾಜದ ಬದಲಾವಣೆ ಬಯಸಿ ಧೀಮಂತ ಹೋರಾಟಗಾರರಾಗಿದ್ದರು ಇಂತಹ ಜನುಮ ದಿನಾಚರಣೆಗಳು ಸಮ ಸಮಾಜದ ಸ್ಥಾಪನೆಗೆ ಸಹಕಾರಿಯಾಗುವುದು. ಅಲದಲದೆ ಯುವಕ ಯುವತಿಯರಲ್ಲಿ ಸ್ವಾಭಿಮಾನ ಬೆಳೆಸಲು ಸ್ಪೂತರ್ಿಯಾಗುತ್ತದೆ ಹಿಂದಿನ ವರ್ಷ 32 ಜೋಡಿಗಳ ಮದುವೆ ಮಾಡಿಸಿದ್ದೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ವಿಮುಕ್ತಿ ದೇವದಾಸಿ ಮಹಿಳಾ ವೇದಿಕೆಯ ಅಧಯಕ್ಷೆ ಪಡಿಯಮ್ಮ ಕ್ಯಾದಗುಂಪ, ಹಿರಿಯ ಹೋರಾಟಗಾರ ವಿಠಪ್ಪ ಗೂರಂಟ್ಲಿ, ನರಸಪ್ಪ ಇನ್ನು ಅನೇಕ ಸದಸ್ಯರು ಪಾಲ್ಗೊಂಡಿದ್ದರು.