ತಾಯಿಯ ಎದೆ ಹಾಲು ಮಗುವಿಗೆ ರಾಮ ಬಾಣವಿದ್ದಂತೆ: ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ

ಕೊಪ್ಪಳ 01: ತಾಯಿಯ ಎದೆ ಹಾಲು ಮಗುವಿಗೆ ರಾಮ ಬಾಣ ವಿದ್ದಂತೆ ಮುಂದೆ ಬರುವ ರೋಗಗಳಿಂದ ರಕ್ಷಣೆ ನೀಡಲು ಪ್ರತಿಯೊಂದು ಮಗುವಿಗೂ ತಾಯಿಯ ಎದೆ ಹಾಲು ಅಮೃತವಿದ್ದಂತೆ ಎಂದು ಕೊಪ್ಪಳ ಪ್ರಭಾರ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ರವರು ಹೇಳಿದರು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ, ಹಿರೇಸಿಂದೋಗಿ ಗ್ರಾಮ ಪಂಚಾಯತ್ ಕಾರ್ಯಲಯ ಹಾಗೂ ಸಮುದಾಯ ಆರೊಗ್ಯ ಕೇಂದ್ರ, ಇವರ ಸಹಯೋಗದಲ್ಲಿ ಹಿರೇಸಿಂದೋಗಿ ಗ್ರಾಮ ಶ್ರೀದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರ ಆಂಗನವಾಡಿ ಕೇಂದ್ರದಲ್ಲಿ ಇಂದು (ಆಗಸ್ಟ್.01) ಹಮ್ಮಿಕೊಳ್ಳಲಾದ ``ವಿಶ್ವ ಸ್ತನ್ಯಪಾನ ಸಪ್ತಾಹ'' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಶಿಶು ಸಂಪೂರ್ಣ ವಿಕಾಸಹೊಂದಿ, ನಿಮೋನಿಯಾ, ಅತಿಸಾರ ಬೇಧಿ, ಆಪೌಷ್ಠಿಕತೆ ಇತ್ಯಾದಿ ತೊಂದರೆಗಳಿಂದ ಸಂರಕ್ಷಿಸಲು, ಶಿಶುವಿಗೆ ಹುಟ್ಟಿನಿಂದ (1 ಗಂಟೆಯ ಒಳಗೆ) 06 ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ಮಾತ್ರ ಕುಡಿಸುವುದರಿಂದ ಶಿಶುವು ದೈಹಿಕವಾಗಿ, ಬೌಧ್ಧಿಕವಾಗಿ, ಮಾನಸಿಕವಾಗಿ ಸರ್ವತೋಮುಖ ಬೆಳವಣಿಗೆ ಹೊಂದಲು ಸ್ತನ್ಯಪಾನವು ಮಹತ್ವ ಪೂರ್ಣವಾಗಿರುತ್ತದೆ. ಹೆರಿಗೆಯಾದ ಮೇಲೆ ಬರುವ ಮೊದಲ ತಾಯಿ ಎದೆ ಹಾಲಿನಲ್ಲಿ ''ಕೊಲಾಸ್ಟ್ರಂ'' ಎಂಬ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಎದೆ ಹಾಲು ಉಣುಸುವದರಿಂದ ಬಹಳಷ್ಟು ಅನುಕೂಲಗಳಾಗುತ್ತವೆ. ಇದು ಮಗುವಿಗೆ ಸರಳವಾಗಿ ಜೀರ್ಣವಾಗುತ್ತದೆ. ಮಗು ಅತ್ತಗಾಲಲ್ಲೇ ಕೊಡಬಹುದು. ಎದೆ ಹಾಲು ಕುಡಿಸುವದರಿಂದ ಸ್ತನ ಕ್ಯಾನ್ಸರ್ ಬರುವುದಿಲ್ಲ. ತಾಯಿ ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ. ತಾಯಿಗೆ ಗರ್ಭವತಿಯಾಗುವುದನ್ನು ಮುಂದೂಡುತ್ತದೆ. ಮಗುವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಸಿಸುತ್ತದೆ. ಮಗುವಿನ ಶಕ್ತಿ ಮತ್ತು ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳನ್ನು ಹೊಂದಿರುತ್ತದೆ ಪ್ರಭಾರ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ರವರು ತಿಳಿಸಿದರು.

ಕಿ.ಆ.ಸ ವಂದನಾರವರು ಲಿಂಗ ಸಮಾನತೆ ಕುರಿತು ಮಾತನಾಡಿ, ಮಗು ಹೆಣ್ಣಾಗಲಿ ಅಥವಾ ಗಂಡಾಗಲಿ ಎರಡು ಮಕ್ಕಳನ್ನು ಸಮಾನವಾಗಿ ಕಾಣಬೇಕು.  ಹೆಣ್ಣು ಮಗುವನ್ನು ಕೀಳ ಬಾವನೆಯಿಂದ ಕಾಣದೇ ಸಮಾಜದ ಒಂದು ಮುಖ್ಯ ಕಣ್ಣು ಎಂದು ಬೆಳಸಬೇಕು. ಹೆಣ್ಣು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸಿಕೊಂಡರೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ.  ಗರ್ಭಪಾತ ಮಾಡುವರು ಮತ್ತು ಮಾಡಿಸಿದವರಿಗೆ ದಂಡ ಮತ್ತು ಜೈಲು ವಾಸ ಶಿಕ್ಷೆ ನೀಡಲಾಗುತ್ತದೆ.  ಈಗಾಗಲೇ ಭಾರತದಲ್ಲಿ 1000 ಪುರುಷರಿಗೆ 962 ಹೆಣ್ಣು ಮಕ್ಕಳು ಇದ್ದಾರೆ.  ಆದ್ದರಿಂದ ಹೆಣ್ಣು ಮಕ್ಕಳನ್ನು ಉಳಿಸಿ, ಬೆಳಿಸಿ, ಶಿಕ್ಷಣ ನೀಡಿ ಆರೋಗ್ಯ ಸೌಲಭ್ಯ ನೀಡಿಸಿ, ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ವಿಶಾದ ವ್ಯಕ್ತಪಡಿಸಿದರು.   

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಪರ್ಿತಾರವರು ಮಾತನಾಡಿ, ಮಗುವಿಗೆ ಬರುವ ಅತಿಸಾರ ಬೇಧಿ, ಅಪೌಷ್ಠಿಕತೆ, ಸೋಂಕು ಉಂಟಾಗದಂತೆ ನೋಡಿಕೊಳ್ಳವುದು ತಾಯಿ ಮತ್ತು ಪಾಲಕರ ಕರ್ತವ್ಯವಾಗಿದೆ. ಮಗುವಿಗೆ 06 ತಿಂಗಳ ನಂತರ ತಾಯಿಯ ಎದೆ ಹಾಲಿನ ಜೊತೆಗೆ ಪೂರಕವಾದ ಪೌಷ್ಠಿಕ ಆಹಾರ ನೀಡುವ ಬಗ್ಗೆ ವಿವರವಾಗಿ ಮಾತನಾಡಿದರು. ಮಗು ಮತ್ತು ತಾಯಿ ಸಮಾಜದ ಆಸ್ತಿ ಇದ್ದಂತೆ ಅವರನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.   

ಕಿರಿಯ ಆರೋಗ್ಯ ಸಹಾಯಕರು ಲಲಿತಾ ಕೊಂಡಿಕೊಪ್ಪ ರವರು ಮಗುವಿಗೆ ಬರುವ ಹತ್ತು ಮಾರಕ ರೋಗಗಳ ವಿರುದ್ದ ನೀಡುವ ಲಸಿಕೆ & ಪೌಷ್ಠಿಕ ಆಹಾರ ಕುರಿತು ವಿವರಿಸಿದರು.  

ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕರು ಯಲ್ಲಮ್ಮ ಶಿವರಾಜ, ಅ.ಕಾ,ಕ, ಮಂಜುಳಾ,ಅಂಬಿಕಾ,  ಸ್ತ್ರೀ ಶಕ್ತಿ ಸಂಘದ ಮುಖಂಡರಾದ ವಿರುಪಮ್ಮ, ಗಂಗಮ್ಮ, ಹುಲಿಗೆಮ್ಮ, ವಿದ್ಯಾ, ತಾಯಿಂದಿರು, ಗಭರ್ಿಣಿ ಸ್ತ್ರೀಯರು, ಭಾಣಂತಿಯರು, ಕಿಶೋರಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.