ಬೀಜ ಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ : ಮ್ಯಾಗೇರಿ
ಶಿಗ್ಗಾವಿ 21 : ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಿದ್ದು ಕೃಷಿ ಅಧಿಕಾರಿಗಳು ತಕ್ಷಣ ತಾಲೂಕಿನ ರೈತರಿಗೆ ಪರಿಶುದ್ಧವಾದ ಬೀಜ ಮತ್ತು ರಸಗೊಬ್ಬರವನ್ನು ವಿತರಣೆ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ನಿಕಟಪೂರ್ವ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅನೇಕ ಸಲ ಮುಗ್ಧ ರೈತರು ಕಳಪೆ ಬೀಜ ಗೊಬ್ಬರಕ್ಕೆ ಮೋಸ ಹೋಗಿದ್ದಾರೆ ಕಾರಣ ಕಳಪೆ ಬೀಜ ಮಾರಾಟ ಮಾಡಬಾರದೆಂದು ಮಾರಾಟಗಾರರಿಗೆ ಆದೇಶ ಮಾಡಬೇಕು ಕುದ್ದು ಕೃಷಿ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಾಕೀತು ಮಾಡಬೇಕು ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡದಂತೆ ಹಾಗೂ ಗೊಬ್ಬರದ ಜೊತೆಗೆ ಲಿಂಕ್ ತೆಗೆದುಕೊಂಡರೆ ಮಾತ್ರ ರಸಗೊಬ್ಬರ ಕೊಡುತ್ತೇವೆಂದು ಹೇಳಬಾರದು ಕೃಷಿ ಇಲಾಖೆಗೆ ಬಂದ ರೈತರಿಗೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳು ಎಫ್ ಐಡಿ ಮಾಡಿಸಿಕೊಂಡು ಬರದೆ ನಿಮಗೆ ಬೀಜ ಗೊಬ್ಬರ ಕೊಡುವುದಿಲ್ಲ ಎನ್ನದೆ ರೈತರನ್ನು ಅಲೆದಾಡಿಸದೆ ಬೇಕಾದ ಆಧಾರ್ ಕಾರ್ಡ್ ಉತಾರ ಬ್ಯಾಂಕ್ ಪಾಸ್ ಪುಸ್ತಕ ತೆಗೆದುಕೊಂಡು ನೀವೇ ಎಫ್ ಐಡಿ ಮಾಡಿ ಬಿತ್ತನೆ ಬೀಜ ವಿತರಣೆ ಮಾಡಬೇಕು ಎಂದರು ಸಾಕಷ್ಟು ದಾಸ್ತಾನು ಇದೆ ಎಂದು ಬಾಯಿ ಮಾತಲ್ಲಿ ಅಧಿಕಾರಿಗಳು ಹೇಳಿ ಜಾರಿ ಕೊಳ್ಳದೇ ರೈತರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಒಂದು ವೇಳೆ ಬೀಜ ಗೊಬ್ಬರ ಕೊರತೆ ಆದರೆ ರೈತರೊಂದಿಗೆ ಕೃಷಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.