ರಾಮಚಂದ್ರ ಪಡೆಸೂರಗೆ ಪಿಎಚ್‌.ಡಿ ಪದವಿ ಪ್ರಧಾನ

Ramachandra Padesura's Ph.D

ರಾಮಚಂದ್ರ ಪಡೆಸೂರಗೆ ಪಿಎಚ್‌.ಡಿ ಪದವಿ ಪ್ರಧಾನ 

ಗದಗ 24:ನಗರದ ಕೆ.ಎಲ್‌.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕರಾದ ರಾಮಚಂದ್ರ ಪಡೆಸೂರ ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಪಿಎಚ್‌.ಡಿ ಪದವಿಯನ್ನು ಘೋಷಿಸಿದೆ.   

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ಸಹ ಪ್ರಾಧ್ಯಾಪಕರಾದ ಡಾ. ಸರಸ್ವತಿದೇವಿ ಎಸ್‌. ಭಗವತಿ ಅವರ ಮಾರ್ಗದರ್ಶನದಲ್ಲಿ ’ರಾಮದಾಸರ ದಾಸಬೋಧ: ಕನ್ನಡ ಆವೃತ್ತಿಗಳ ತೌಲನಿಕ ಅಧ್ಯಯನ’ ಎಂಬ ವಿಷಯದ ಕುರಿತು ಅವರು  ಮಂಡಿಸಿದ ಮಹಾಪ್ರಬಂಧಕ್ಕೆ  ಡಾಕ್ಟರೇಟ್ ಪದವಿ ಘೋಷಣೆ ಮಾಡಲಾಗಿದೆ. ಡಾ. ರಾಮಚಂದ್ರ ಪಡೆಸೂರ ಅವರಿಗೆ ನಗರದ ಕೆ. ಎಲ್‌. ಇ. ಸಂಸ್ಥೆಯ ಪ್ರಾಚಾರ್ಯರು, ಕನ್ನಡ ವಿಭಾಗದ ಮುಖ್ಯಸ್ಥರು  ಹಾಗೂ ಎಲ್ಲ ಸಿಬ್ಬಂದಿ ವರ್ಗ, ವೀರಶೈವ ಲಿಂಗಾಯತ ಸಮಾಜದ ಹಿರಿಯರು, ಕುಟುಂಬವರ್ಗ, ಸ್ನೇಹಬಳಗ ಶುಭಹಾರೈಸಿದ್ಧಾರೆ.