ಮಕ್ಕಳ ಸಂತೆ ಕಾರ್ಯಕ್ರಮ ಚಾಲನೆ

ಲೋಕದರ್ಶದನ ವರದಿ

ಧಾರವಾಡ 05 :- ಇಂದು ರಂಗಾಯಣ ಚಿಣ್ಣರ ಮೇಳದಲ್ಲಿ ಇಂದು ಮಕ್ಕಳ ಜಾತ್ರೆ ಹಾಗೂ ಮಕ್ಕಳ ಸಂತೆ ಅಂಗವಾಗಿ 'ಪರಿಸರ ತೇರು'ನ್ನು ಮಕ್ಕಳಿಂದ ಎಳೆಯ ಮೂಲಕ ಮಕ್ಕಳ ಜಾತ್ರೆ ಹಾಗೂ 'ಮಕ್ಕಳ ಸಂತೆ' ಕಾರ್ಯಕ್ರಮ ಹಮ್ಮಿಕೋಳಲಾಗಿತ್ತು.

'ಪರಿಸರ ತೇರು'ನ್ನು ಮಕ್ಕಳಿಂದ ಎಳೆಯ ಮೂಲಕ ಮಕ್ಕಳ ಜಾತ್ರೆ ಹಾಗೂ 'ಮಕ್ಕಳ ಸಂತೆ'  ಕಾರ್ಯಕ್ರಮ ಚಾಲನೆ ನೀಡಲಾಯಿತ್ತು. ಇದರಲ್ಲಿ ಜಗ್ಗಲಗಿ, ಡೊಳ್ಳು ಕುಣಿತ ಕಲಾ ತಂಡಗಳು ಮತ್ತು ಮಕ್ಕಳ ಪಾಲಕರು ಪಾಲಗೊಂಡು ಮಕ್ಕಳು ಪರಿಸರ ತೇರು ಎಳೆಯುವದನ್ನು ನೋಡಿ ಸಂಭ್ರಮಿಸಿದರು.

ಚಿಣ್ಣರ ಮೇಳದ ಮಕ್ಕಳ ಸಂತೆಯಲ್ಲಿ ಮಕ್ಕಳು ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಹಾಗೂ ಮನೆಯಲ್ಲಿ ಸಿದ್ಧಪಡಿಸಿದ ವಿವಿಧ ಬಗ್ಗೆಯ ತಿಂಡಿ ತಿನುಸುಗಳನ್ನು, ಮನೆಯಲ್ಲಿ ಸಿದ್ಧಪಡಿಸಿದ ತಪ್ಪು ಪಾನಿಯ ಅಲ್ಲದೆ. 

    ಸಿದ್ಧ ವಸ್ತುಗಳನ್ನು ತಂದು ಉತ್ಸಾದಲ್ಲಿ ಪಾಲ್ಲೊಂಡ ಮಕ್ಕಳದಿಂದ ಖರೀದಿಸುವ ಮೂಲಕ ಮಕ್ಕಳಿಗೆ ಒಂದು ಗ್ರಾಮಿಣ ಸಂತೆಯ ಅನುಭವವನ್ನು ದೊರಕಿಸಿಕೊಟ್ಟಿರುತ್ತಾರೆ. 

         ಚಿಣ್ಣರ ಸಂತೆಯಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ವಿವಿಧ  ಪಾತ್ರಗಳಾದ ಭಿಕ್ಷುಕ, ಕಣಿ ಹೇಳುವುವರು, ಜೊಗಮ್ಮನ ವೇಶದವರು, ಬುಡಬುಡಿಕೆ, ಹುಲಿವೇಶ, ಪೋಲಿಸ, ಕಳ್ಳ ಮುಂತಾದ ವೇಶಗಳನ್ನು ದರಿಸಿ ಗ್ರಾಮಿಣ ಸಂತೆಯಲ್ಲಿ ಈ ತರಹದ  ಪಾತ್ರಗಳು ಇರುವುದನ್ನು ಮಕ್ಕಳಿಗೆ ಪರಿಚಯಿಸಿದ್ದರು.

      ಧಾರವಾಡ ರಂಗಾಯಣವು ಈ ರೀತಿ ಪರಿಸರ ತೇರು ಗ್ರಾಮಿಣ ಸಂತೆ ಹಾಗೂ ಜಾತ್ರೆಯನ್ನು ಪರಿಚಯ ಮಾಡಿಕೊಡುವುದರಲ್ಲಿ ಯಶ್ವಸಿಯಾಗಿತ್ತು.

   ಈ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಮತ್ತು ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್ ವವ್ಯಸ್ಥಾಪಕ ನಿದರ್ೇಶಕರಾದ ರಾಜೇಂದ್ರ ಚೋಳನ್ ಹಾಗೂ ಶಿಬಿರದ ಎಲ್ಲಾ ಮಕ್ಕಳ ಪಾಲಕರು ಮತ್ತು ಶಿಬಿರದ ಸಂಚಾಲಕರಾದ ಉಮೇಶ ಪಾಟೀಲ ಮತ್ತು ಕಲಾವಿದರು ಹಾಗೂ ರಂಗಾಯಣದ ಆಡಳಿತಾಧಿಕಾರಿಗಳಾದ ಕೆ.ಎಚ್.ಚನ್ನೂರ,  ಸಂತೆಯಲ್ಲಿ ಪಾಲ್ಲೊಂಡಿದರು.