ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ
ವಿಜಯಪುರ 02 : ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಅಪ್ಪಗಳ ಗುರುನಮನ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಇಂದು ಗುರುವಾರ ಬೆಳಿಗ್ಗೆ 6 ಗಂಟೆಗೆ ನಾಡಿನ ಸ್ವಾಮೀಜಿಗಳು, ಮಠಾಧೀಶರು ಹಾಗೂ ಭಕ್ತರು ಅಪ್ಪಗಳವರ ಕುರಿತಾದ ವೇದ ಮೂರ್ತಿ ಜ್ಞಾನ ಜ್ಯೋತಿ ಹಾಡಿನ ಮೂಲಕ ಚಾಲನೆ ನೀಡಿದರು.ಆಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಜಪಯಜ್ಞದ ಮೂಲಕ ಗುರುವಿಗೆ ನಮಸ್ಕಾರಗಳು, ಶಿವನಿಗೆ ಆರಾಧನೆ ಎನ್ನುವ ಅರ್ಥವನ್ನು ಕೊಡುವ ‘ಶಿವಾಯ ನಮಃ ಓಂ, ಶಿವಾಯ ನಮಃ ಓಂ’ ಎಂಬ ಮಂತ್ರವನ್ನು ಪಠಿಸಲಾಯಿತು. ನಂತರ ಒಂದು ನಿಮಿಷದ ಮೌನ ಧ್ಯಾನ ಸಲ್ಲಿಸಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಅತ್ಯಂತ ಭಕ್ತಿಯಿಂದ ಸ್ಮರಿಸಲಾಯಿತು.‘ಜ್ಯೋತಿ...ಬೆಳಗುತ್ತಿದೆ, ವಿಮಲಪರಂ ಜ್ಯೋತಿ...ಬೆಳಗುತ್ತಿದೆ’ ಮಂತ್ರದೊಂದಿಗೆ ಜಪಯಜ್ಞವನ್ನು ಪೂರ್ಣ ವಿರಾಮ ನೀಡಲಾಯಿತು. ಸಾವಿರಾರು ಭಕ್ತರು ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುದೇವ ಶ್ರೀ ಸಿದ್ಧೇಶ್ವರ ಅಪ್ಪಗಳವರಿಗೆ ಶ್ರದ್ಧೆ-ಭಕ್ತಿಯ ನಮನಗಳನ್ನು ಸಲ್ಲಿಸಿದರು. ನಂತರ ಶ್ರೀ ಸಿದ್ಧೇಶ್ವರ ಸ್ವಾಮೀಜಿಳ ವಿಡಿಯೋ ಪ್ರವಚನ ಪ್ರಸಾರಗೊಳಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಶ್ರೀ ಮಲ್ಲಿಕಾಜುನ ಶಿವಯೋಗಿಗಳವರ ಪ್ರಣವ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನ ನೂರಾರು ಸ್ವಾಮೀಜಿಗಳು, ಮಠಾಧೀಶರು, ಗುರುದೇವರ ಶಿಷ್ಯ ಬಳಗ ಹಾಗೂ ಸರ್ವ ಭಕ್ತರು ಪೂಜೆಯಲ್ಲಿ ಭಾಗವಹಿಸಿ ಶ್ರೀ ಪೂಜ್ಯ ಮಲ್ಲಿಕಾರ್ಜು ಸ್ವಾಮೀಜಿಗಳು ಹಾಗೂ ಗುರುದೇವ ಶ್ರೀ ಸಿದ್ಧೇಶ್ವರ ಅಪ್ಪಗಳವರಿಗೆ ಪುಷ್ಫ ನಮನ ಸಲ್ಲಿಸಿ ಪೂಜ್ಯರ ಆಶೀರ್ವಾದ ಪಡೆದುಕೊಂಡರು.ಫೋಟೋ ಕ್ಯಾಪ್ಷನ್ಗಳು. ಜ್ಞಾನಯೋಗಾಶ್ರಮದಲ್ಲಿ ವೇದಾಂತಕೇಸರಿ ಪೂಜ್ಯ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂಟಪದಲ್ಲಿ ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸುತ್ತಿರುವುದು ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಣವ ಮಂಟಪದ ಎದುರಿಗೆ ಇರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಲಾಯಿತು ಜ್ಞಾನಯೋಗಾಶ್ರಮದ ಆವರಣದಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಗಳವರ ಅಪರೂಪದ ಭಾವಚಿತ್ರಗಳನ್ನು ಪ್ರದರ್ಶನ ಜ್ಞಾನಯೋಗಾಶ್ರಮದ ಪ್ರಣವ ಮಂಟಪದ ಮುಂಭಾಗದಲ್ಲಿ ಪೂಜ್ಯ ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಪೂಜೆ ಸಲ್ಲಿಸಲು ಸೇರಿರುವ ಭಕ್ತ ಸಮೂಹ ಜ್ಞಾನಯೋಗಾಶ್ರಮದಲ್ಲಿ ಸಿಂಗಾರಗೊಂಡಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಗಳ ಪೂಜ್ಯ ಶ್ರೀ ಹರ್ಷಾನಂದ ಸ್ವಾಮೀಜಿಗಳ ಹಾಗೂ ಪೂಜ್ಯರು ಮಹಾಪ್ರಸಾದಕ್ಕೆ ಪೂಜೆ ಸಲ್ಲಿಸುತ್ತರುವುದು ಜ್ಞಾನಯೋಗಾಶ್ರಮದಲ್ಲಿ ಬೆಳಿಗ್ಗೆ 6 ಗಂಟೆಗೆ ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಶ್ರೀ ಸಿದ್ಧೇಶ್ವರ ಅಪ್ಪಗಳವರಿಗೆ ವೇದಮೂರ್ತಿ ಜ್ಞಾನ ಜ್ಯೋತಿ ಹಾಡಿನ ಮೂಲಕ ನಮಿಸಿ ಜಪಯಜ್ಞಕ್ಕೆ ಚಾಲನೆ ನೀಡಿದರು.