ಕೃಷ್ಣಾ 'ಭಿ ಸ್ಕೀಂ ಮೂರನೇಯ ಹಂತದ ಮೇಲ್ದಂಡೆ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ ತೀವ್ರ ಜಾರಿಗೆ ಬರಲಿ

ಲೋಕದರ್ಶನ ವರದಿ

ಗಜೇಂದ್ರಗಡ 07: ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆಯು 2013 ರಲ್ಲಿಯೇ ಪ್ರಾರಂಭಗೊಂಡಿದೆ. 2016ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಆದರೆ ಆಡಳಿತಾತ್ಮಕ ಹಾಗೂ ಹಣಕಾಸಿನ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ನಮ್ಮನ್ನು ಆಳುತ್ತಿರುವ ರಾಜ್ಯ ಹಾಗೂ ಕೇಂದ್ರ ಸಕರ್ಾರಗಳು ಸದರಿ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ  ವಿಫಲವಾಗಿವೆ.  

ಕುಡ್ಲೆಪ್ಪ ಗುಡಿಮನಿ ಮಾತನಾಡಿ  ಉತ್ತರ ಕನರ್ಾಟಕ ಬಹುತೇಕ ಮಳೆ ಆಶ್ರಿತ ವ್ಯವಸಾಯ ಹೊಂದಿ ಸಂಕಷ್ಟ ಪರಿಸ್ಥಿತಿಯಲ್ಲಿಯೇ ಸಾಗಿದೆ. ಇಂತಹ ನೀರಾವರಿ ಯೋಜನೆಯಿಂದ ಮಾತ್ರ ಈ ಭಾಗದ ರೈತರನ್ನು ಹಾಗೂ ಜನತೆಯನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಾಧ್ಯ.ಇತ್ತೀಚಿನ ಕೆಲವು ವರ್ಷಗಳಿಂದ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದ್ದು ಅಂತರ್ಜಲದ ಮಟ್ಟ ಪಾತಾಳ ಕಂಡಿದೆ. ಪರಿಣಾಮ ರೈತರ ಕೊಳವೆ ಬಾಯಿಗಳು ಸೇರಿದಂತೆ, ನಗರಗಳಿಗೆ ನೀರು ಪೂರೈಸುವ ಕೊಳವೆ ಬಾಯಿಗಳು ಬತ್ತಿ ಹೋಗಿವೆ. ಒಂದು ಕಡೆ ಬೆಳೆ ನಾಶ ಮತ್ತೊಂದು ಕಡೆ ಜನ ಜಾನುವಾರುಗಳಿಗೆ ನೀರಿಗೆ ಭರ ಬಂದಿದೆ. ಜನ ದೂರದ ನಗರಗಳಿಗೆ ನಿತ್ಯ ಗುಳೆ ಹೋಗಿ ಬದುಕು ನೂಕುವಂತಾಗಿದೆ. ಯೋಜನೆ ಜಾರಿಗೆ ಒತ್ತಾಯಿಸಿ ಈಗಾಗಲೇ ಗದಗ ಜಿಲ್ಲಾಧಿಕಾರಿ ಕಛೇರಿ, ರೋಣ, ಗಜೇಂದ್ರಗಡ ತಹಶೀಲ್ದಾರ ಮುಂದೆ ರೈತಾಪಿ ಜನ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ ಜಾರಿ ತಾಲೂಕ ಹೋರಾಟ ಸಮಿತಿ ನೇತೃತ್ವದಲ್ಲಿ ಐದಾರು ಬಾರಿ ಹೋರಾಟ ಮಾಡಿ ಸಕರ್ಾರಕ್ಕೆ ಮನವಿ ಪತ್ರ ಕೂಡಾ ಸಲ್ಲಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕನರ್ಾಟಕದ ಯಾವುದೇ ಯೋಜನೆಗಳು ಕಾಲ ಮಿತಿಯಲ್ಲಿ ಮುಗಿಯದೆ ಇರುವುದಕ್ಕೆ ಈ ಭಾಗದ ನಮ್ಮ ಜನಪ್ರತಿನಿಧಿಗಳ ರಾಜಕೀಯ ಇಚ್ಚಾಶಕ್ತಿ ಕೊರತೆ ಹಾಗೂ ಯೋಜನೆ ಜಾರಿಗೆ ಸಂಬಂಧಿಸಿ ಅವರಲ್ಲಿನ  ಉದಾಸೀನ, ನಿರ್ಲಕ್ಷ್ಯೆಭಾವನೆ ಪ್ರಮುಖ ಕಾರಣ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. 

ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನ ವಿರೋಧಿ ನಿಲುವಿನವರು ಆಗಿದ್ದಾರೆ ಎಂಬುದು ಇದರಿಂದ ಸಾಬೀತಾಗುತ್ತದೆ.  ಯೋಜನೆಯು ಬಾಗಲಕೋಟ, ಗದಗ, ಕೊಪ್ಪಳ ಜಿಲ್ಲೆಗಳು ಪ್ರಮುಖ ಫಲಾನುಭವಿ ಜಿಲ್ಲೆಗಳಾಗಿದ್ದು, ಈ ಭಾಗದ ಸಂಸದರು ಮೋದಿಯನ್ನು ಗುಣಗಾನ ಮಾಡಿ ಕಾಲ ಕಳೆಯುವ ಅಥವಾ ಕೇವಲ ರಾಜ್ಯ ಸಕರ್ಾರವನ್ನು ಹೊಣೆ ಮಾಡದೇ ಈ ಭಾಗದ ಸಂಸದರು ಯೋಜನೆ ನಿದರ್ಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಕೇಂದ್ರ ಸಕರ್ಾರದಿಂದ ವಿಶೇಷ ಅನುದಾನ ತರುವಲ್ಲಿ ಮುಂದಾಗಲಿ ಹಾಗೂ ಆಯಾ ಕ್ಷೇತ್ರಗಳಿಂದ ಆಯ್ಕೆಯಾದ  ಶಾಸಕರು ಪಕ್ಷಾತೀತವಾಗಿ ರಾಜ್ಯ ಸಕರ್ಾರದ ಮೇಲೆ ಒತ್ತಡ ತರಲು ಮುಂದಾಗಬೇಕು.ಅಲ್ಲದೇ ಯೋಜನೆ ಪೂರ್ಣಗೊಳ್ಳುವ ಮಧ್ಯದ ಅವಧಿಯಲ್ಲಿ ಕನಿಷ್ಠ  ಈ ಭಾಗದ ಕೆರೆಗಳನ್ನು ತುಂಬಿಸಲಿ ಎಂಬುದು ಜನತೆಯ ಒಕ್ಕೊರಲಿನ ಆಗ್ರಹವಾಗಿದೆ.