‘ಶಾಲಾಶಿಕ್ಷಣ ಸಂಕಥನ’ ಪುಸ್ತಕ ಲೋಕಾರೆ​‍್ಣಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ 60 ವರ್ಷಗಳ ಶಿಕ್ಷಣ ಸೇವಾನೆನಪುಗಳ ಮೆಲುಕು

The book 'Shalashikshana Sankathana' is a recollection of 60 years of educational service by Shivsh

‘ಶಾಲಾಶಿಕ್ಷಣ ಸಂಕಥನ’ ಪುಸ್ತಕ ಲೋಕಾರೆ​‍್ಣಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ 60 ವರ್ಷಗಳ ಶಿಕ್ಷಣ ಸೇವಾನೆನಪುಗಳ ಮೆಲುಕು 

ಧಾರವಾಡ 24  : ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಹಾಗೂ ಡಾ. ಎಚ್‌.ಎಫ್‌. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಪುಸ್ತಕ ಲೋಕಾರೆ​‍್ಣ ಡಿಸೆಂಬರ್ 27ರಂದು ಮುಂಜಾನೆ 11 ಗಂಟೆಯಿಂದ ಇಡೀ ದಿನ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಆವರಣದಲ್ಲಿ ನಡೆಯಲಿದೆ. 

‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಕೃತಿಯು 1961 ರಿಂದ 2020ರವರೆಗೆ ಧಾರಾನಗರಿಯ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು(ಗಂಟ್ರೇಕಾ) ಕೇಂದ್ರಿತವಾದ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಅವರ 60 ವರ್ಷಗಳ ಶಿಕ್ಷಣ ಸೇವಾನೆನಪುಗಳ ವಿದ್ಯಾ ವಿಕಾಸದ ಅನೇಕ ಚಿಂತನೆಗಳನ್ನು ಒಳಗೊಂಡಿದ್ದು, ಕನ್ನಡದ ಶಕ್ತಿ ಕೇಂದ್ರವೆಂದೇ ಬಿಂಬಿತವಾದ ‘ಗಂಟ್ರೇಕಾ’ದ ಚಾರಿತ್ರಿಕ ಸಂಗತಿಗಳ ದಾಖಲೆಯಾಗಿ ಇದು ಮೂಡಿ ಬಂದಿದೆ.  

ಉದ್ಘಾಟನೆ : ಗದಗ ತೋಂಟದಾರ್ಯಮಠದ ಜಗದ್ಗುರು ಡಾ. ಸಿದ್ದರಾಮ ಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದು, ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಅಧ್ಯಕ್ಷತೆ ವಹಿಸುವರು. ಭಾರತೀಯ ತಂತ್ರಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಎಸ್‌. ಎಂ. ಶಿವಪ್ರಸಾದ್ ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಕೃತಿಯನ್ನು ಲೋಕಾರೆ​‍್ಣಗೊಳಿಸುವರು. ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಪುಸ್ತಕ ಪರಿಚಯ ಮಾಡುವರು.   

ಸಂವಾದ : ಮಧ್ಯಾಹ್ನ 3 ಗಂಟೆಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ‘ಧಾರವಾಡದ ಶಾಲಾಶಿಕ್ಷಣ ಸಂಕಥನ’ ಕೃತಿ ಕುರಿತು ಹಿರಿಯ ಸಾಹಿತಿ ಡಾ. ಬಾಳಣ್ಣ ಸೀಗೀಹಳ್ಳಿ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಶಿಧರ ತೋಡಕರ ಸಂವಾದ ನಡೆಸಿ ಕೊಡುವರು. ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ನಿರ್ದೇಶಕ ಈಶ್ವರ ನಾಯಕ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಲೀಲಕ್ಕ ಬೆಲ್ಲದ ಪಾಲ್ಗೊಳ್ಳುವರು.    

ಗೌರವಾರೆ​‍್ಣ : ಸದಭಿರುಚಿ ವಿಕಾಸ ಶಾಲಾ ಚಟುವಟಿಕೆಯ ದತ್ತಿದಾನಿಗಳು ಹಾಗೂ ಪ್ರತಿಷ್ಠಾನಗಳ ಉಳಿದ ಯೋಜನೆಗಳ ದಾನಿ ಸದಸ್ಯರಿಗೆ ಗೌರವಾರೆ​‍್ಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಹಾಗೂ ಅವರ ಪತ್ನಿ ಶಿಕ್ಷಕಿಯರ ಸರಕಾರಿ ತರಬೇತಿ ಕಾಲೇಜಿನ ವಿಶ್ರಾಂತ ಪ್ರಿನ್ಸಿಪಾಲ್ ಶಾಂತಲಾ ಹಿರೇಮಠ ಅವರ 60 ವರ್ಷಗಳ ದಾಂಪತ್ಯದ ‘ಶಾಂತ-ಶಿಹಿ’ ನೆನಪುಗಳ ಸಂದರ್ಭ ಹಾಗೂ ಅವರ ಧಾರವಾಡದ ವಿದ್ಯಾ ವಿಕಾಸ ಸೇವಾ ಜೀವನಕ್ಕೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ವತಿಯಿಂದ ವಿಶಿಷ್ಟವಾಗಿ ಗೌರವಿಸಲಾಗುವುದು.   

ಈ ಶೈಕ್ಷಣಿಕ ಸಮಾವೇಶದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿವಿಧ ನಿವೃತ್ತ ಅಧಿಕಾರಿಗಳು, ಪ್ರಶಿಕ್ಷಕರು, ಪ್ರಶಿಕ್ಷಣಾರ್ಥಿಗಳು, ಅಧ್ಯಾಪಕರು, ಶಿಕ್ಷಣ ಚಿಂತಕರು ಹಾಗೂ ಇತರೇ ಸಿಬ್ಬಂದಿ ಪಾಲ್ಗೊಂಡು ಅಭಿಪ್ರಾಯಗಳನ್ನು ಮಂಡಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯುವರಾಜ್ ನಾಯಕ, ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಗೌರವ ಸಂಚಾಲಕ ಎಸ್‌. ಬಿ. ಕೊಡ್ಲಿ ಮತ್ತು ಡಯಟ್ ಪ್ರಿನ್ಸಿಪಾಲ್ ಜಯಶ್ರೀ ಕಾರೇಕರ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.