ರಾಯಬಾಗ 21: ತಾಲೂಕಿನ ನಿಪನಾಳ ಗ್ರಾಮದ ನಿಷ್ಕರ್ಶಿಣಿ ಹೊನ್ನಪ್ಪ ಮಡಿವಾಳ ಎಂಬ 06 ವರ್ಷದ ಹೆಣ್ಣು ಮಗುವನ್ನು ಅಪರಿಚಿತರು ಅಪಹರಿಸಿಕೊಂಡು ಹೋಗಿರುವುದಾಗಿ ಮಗುವಿನ ತಂದೆ ಹೊನ್ನಪ್ಪ ಮಡಿವಾಳ ರಾಯಬಾಗ ಪೊಲೀಸ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಸೋಮವಾರ ಸಾಯಂಕಾಲ ಸುಮಾರು 7 ಗಂಟೆಗೆ ನಿಷ್ಕರ್ಶಿಣಿ ಇವಳು ತಮ್ಮ ಮನೆ ಹತ್ತಿರ ಆಟ ಆಡಲು ಹೋದ ಸಮಯದಲ್ಲಿ ಅಪರಿಚಿತರು ಅಪಹರಣ ಮಾಡಿರುವುದಾಗಿ ಮಗುವಿನ ತಂದೆ ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ಅಪಹರಣ ಆಗಿರುವ ಮಗು 3 ಫೂಟ್ ಎತ್ತರವಿದ್ದು, ಮೈಯಿಂದ ತೆಳ್ಳಗೆ, ಗೋದಿ ಮೈಬಣ್ಣ, ದುಂಡು ಮುಖ ಹೊಂದಿರುತ್ತಾಳೆ.
ಕನ್ನಡ, ಇಂಗ್ಲಿಷ ಭಾಷೆ ತಿಳಿದಿರುವ ಈ ಮಗು ಅಪಹರಣ ಸಮಯದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಪಟ್ಟಿ ಇರುವ ಟಾಪ್ ಮತ್ತು ಕಪ್ಪು ಬಣ್ಣದ ಲೆಗಿನ್ಸ್ ಧರಿಸಿರುತ್ತಾಳೆ. ಈ ಮಗುವಿನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ರಾಯಬಾಗ ಪೊಲೀಸ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.