ವಿಜಯಪುರ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2024-25 ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಐದು ರಾ್ಯಂಕ್ಗಳನ್ನು ಪಡೆದುಕೊಳ್ಳುವ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿನಿಯರಾದ ಅಶ್ವಿನಿ ಎಕ್ಕುಂಡಿ ಕೆಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್‌ಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದುಕೊಂಡರೆ, ಕಾವ್ಯಾ ಸಿಂಧೆ ಕೆಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್‌ಲ್ಲಿ 10ನೇ ಸ್ಥಾನವನ್ನು ಹಾಗೂ ಗಂಗಾಧರ ಮುತಗಿ ವೆಟರನರಿ ಸೈನ್ಸ್‌ಲ್ಲಿ ರಾಜ್ಯಕ್ಕೆ 16 ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೌಲಗಿ; ಇಂದು ಕೆಸಿಇಟಿ ಅಗ್ರಿ ಹಾಗೂ ವೆಟರ್‌ನರಿಯಲ್ಲಿ ಸ್ಥಾನ ಪಡೆದುಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಇಡೀ ರಾಜ್ಯದ ಮೂಲೆ ಮೂಲೆಗಳಿಂದಲೂ ಈ ಸ್ಥಾನಗಳಿಗಾಗಿ ವಿಪರೀತವಾದ ಪೈಪೋಟಿ ನಡೆಯುತ್ತಿರುತ್ತದೆ. ಇದರ ನಡುವೆ ರಾಜ್ಯಕ್ಕೆ ಅಗ್ರ ಹತ್ತರೊಳಗೆ ರಾ್ಯಂಕ್ಗಳನ್ನು ಪಡೆದುಕೊಳ್ಳುವುದೆಂದರೆ ಅತ್ಯಂತ ದೊಡ್ಡ ಸಾಧನೆಯೇ ಸರಿ. ಯಾರು ಪರಿಶ್ರಮ ಪಟ್ಟು ಅಧ್ಯಯನ ಮಾಡುತ್ತಾರೋ ಅವರು ಖಂಡಿತ ಯಶಸ್ಸು ಪಡೆಯುತ್ತಾರೆ ಎನ್ನುವುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ. ರೈತರ ಮಕ್ಕಳಾಗಿದ್ದುಕೊಂಡು ಅಗ್ರಿಯಲ್ಲಿ ರಾ್ಯಂಕ್ ಪಡೆದು ಹೆತ್ತವರ ಕನಸನ್ನು ನನಸು ಮಾಡಿದ ಇವರಿಗೆ ಹೃದಯಪೂರ್ವಕ ಶುಭಾಷಯಗಳನ್ನು ಸಲ್ಲಿಸುತ್ತೇನೆ. ಇಂದು ಈ ವಿದ್ಯಾರ್ಥಿಗಳು ಮಾಡಿದ ಸಾಧನೆ ಪ್ರಸ್ತುತ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೂ ಸಹ ಮಾರ್ಗಸೂಚಿಯಾಗಿದ್ದು ವಿದ್ಯಾರ್ಥಿಗಳು ಅವರ ದಾರಿಯನ್ನು ಅನುಸರಿಸಬೇಕು ಎಂದು ಹೇಳಿದರು. ಹಾಗೂ ಈ ಐತಿಹಾಸಿಕ ಸಾಧನೆಯ ಹಿಂದೆ ಶ್ರಮವಹಿಸಿದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು.
ಅಶ್ವಿನಿ ಎಕ್ಕುಂಡಿಯವರ ತಂದೆ ಹರ್ಷ ವ್ಯಕ್ತ ಪಡಿಸುತ್ತ ನಮ್ಮ ಮಕ್ಕಳಿಗೆ ಎಕ್ಸಲಂಟ್ ಕಾಲೇಜಿಗೆ ಸೇರಿಸುವಾಗಲೇ ನಾವಂತೂ ಒಕ್ಕಲತನದ ಹೊರತು ಬೇರೇನು ತಿಳಿದವರಲ್ಲ. ನೀನು ಕಲಿತು ಒಳ್ಳೆ ಹೆಸರು ತೆಗೆದುಕೊಂಡು ಬಾ. ಎರಡು ವರ್ಷ ಓದಿ ಏನಾದರೂ ಸಾಧಿಸಿ ಬಾ ಮಗಳೇ ಎಂದು ಹೇಳಿ ಕಳಿಸಿದ್ದೆ. ಅದರಂತೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಈ ಕಾಲೇಜು ನನ್ನ ಮಗಳು ಇಂದು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದರ ಜೊತೆಗೆ ಅವಳಿಗೆ ಸುಂದರವಾದ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದೆ. ಅದಕ್ಕೆ ಜೀವನವೀಡೀ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ಕಾವ್ಯ ಸಿಂಧೆಯವರ ತಂದೆ ಶಿವಾಜಿ ಸಿಂಧೆ ಮಾತನಾಡಿ ನಾವು ಊರಲ್ಲಿ ಇಲ್ಲ. ಹಲದಲ್ಲಿ ಬದುಕು ಕಟ್ಟಿಕೊಂಡವರು. ನಮ್ಮಂತೆ ನಮ್ಮ ಮಕ್ಕಳು ಹೊಲದಲ್ಲಿ ದುಡಿಯುವಂತಾಗಬಾರದು ಎಂದೇ ಪಟ್ಟಣದಲ್ಲಿ ಕಾಲೇಜಿಗೆ ಕಳುಹಿಸಿದ್ದೇವು. ನಮಗೆ ಹೊಲಮನಿ ಕೆಲಸ ಹೊರತು ಬೇರೆ ಏನು ಗೊತ್ತಿಲ್ಲ. ಹೀಗಾಗಿ ನಮ್ಮ ಮಗಳ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಹೇಳಿ ಎಕ್ಸಲಂಟ ಕಾಲೇಜಿನಲ್ಲಿ ಹೇಳಿ ಅಡ್ಮಿಷನ್ ಮಾಡಿಸಿದೆ. ನನ್ನ ನಂಬಿಕೆಯನ್ನು ಹುಸಿಗೊಳಿಸದ ಈ ಕಾಲೇಜು ಇಂದು ನಮ್ಮ ಮಗಳಿಗೆ ಉತ್ತಮ ಶಿಕ್ಷಣ ಅತ್ಯುತ್ತಮವಾದ ಪರೀಕ್ಷಾ ತರಬೇತಿಯನ್ನು ನೀಡುವ ಮೂಲಕ ರಾಜ್ಯವೇ ಗುರುತಿಸುವ ಮಟ್ಟದಲ್ಲಿ ಬೆಳೆಯುವುದಕ್ಕೆ ಕಾರಣವಾಗಿದ್ದು ಕಾಲೇಜಿನ ಸರ್ವರಿಗೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸೇರಿದಂತೆ ಕಾಲೇಜಿನ ಸರ್ವ ಸಿಬ್ಬಂದಿ ಬಳಗ ಶುಭ ಹಾರೈಸಿದರು.
ರಾಜ್ಯ ಮಟ್ಟದಲ್ಲಿ ನನಗೆ ರಾ್ಯಂಕ್ ಬರುತ್ತದೆ ಎಂದು ನಾನು ಕನಸು ಸಹ ಕಂಡಿದ್ದಿಲ್ಲ. ಆದರೆ ನನ್ನ ಅಧ್ಯಯನಕ್ಕೆ ತಕ್ಕ ಒಂದು ಸ್ಥಾನ ನನಗೆ ಸಿಕ್ಕೆ ಸಿಕ್ಕುತ್ತದೆ ಎನ್ನುವ ಭರವಸೆ ಇತ್ತು. ನೀನು ಇನ್ನಷ್ಟು ಪ್ರಯತ್ನ ಮಾಡು ಒಳ್ಳೆ ರಾ್ಯಂಕ್ ಬರುತ್ತೆ ಎಂದು ನಮ್ಮ ಉಪನ್ಯಾಸಕರು ಹೇಳುತ್ತಿದ್ದರು. ಅದರಂತೆಯೇ ಆಗಿದ್ದು ನನಗೆ ತುಂಬ ಸಂತೋಷ ತಂದಿದೆ. ಇದರ ಶ್ರೇಯ ನಮ್ಮ ಕಾಲೇಜಿಗೆ ಸಲ್ಲಬೇಕು.
ಅಶ್ವಿನಿ ಯೆಕ್ಕುಂಡಿ
ಒಬ್ಬ ರೈತನ ಮಗಳಾಗಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರಾ್ಯಂಕ್ ಬಂದಿದ್ದು ನಿಜಕ್ಕೂ ಸಂತಸದ ಜೊತೆಗೆ ಹೆಮ್ಮೆ ಎನಿಸುತ್ತಿದೆ. ಹೊಲದಲ್ಲಿ ದುಡಿಯುವ ನನ್ನ ಹೆತ್ತವರ ಮೊಗದಲ್ಲಿ ಈ ಫಲಿತಾಂಶ ನಗು ಮೂಡಿಸಿದೆ. ಇದಕ್ಕೆ ಕಾರಣವಾದ ಎಕ್ಸಲಂಟ್ ಕಾಲೇಜಿನ ಸರ್ವ ಸಿಬ್ಬಂದಿ ವರ್ಗಕ್ಕೆ ಚಿರಋಣಿಯಾಗಿರುತ್ತೇನೆ
ಕಾವ್ಯಾ ಶಿಂಧೆ