ದೇಶದ ಅಭಿವೃದ್ಧಿಗೆ ರೈಲು, ಸಾರಿಗೆ ವ್ಯವಸ್ಥೆಯು ಪ್ರಮುಖ: ರಾಜ್ಯಪಾಲ ಗೆಹ್ಲೋಟ್

Amrutha Station in Dharawad inaugurated by Governor

ಧಾರಡವಾಡದಲ್ಲಿ ಅಮೃತ ಸ್ಟೇಷನ್ ರಾಜ್ಯಪಾಲರಿಂದ ಉದ್ಘಾಟನೆ  

ಧಾರವಾಡ 22:  ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಧಾರವಾಡದಿಂದ ಅಮೃತ್ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ ಮತ್ತು ಧಾರವಾಡ ಸೇರಿದಂತೆ ದೇಶದಲ್ಲಿ 103 ಅಮೃತ್ ನಿಲ್ದಾಣಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.   

ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ರಾಜ್ಯಪಾಲರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2023-24ನೇ ಸಾಲಿನಲ್ಲಿ ಅಮೃತ್ ರೈಲು ನಿಲ್ದಾಣ ಯೋಜನೆಯಡಿ 1000 ಕ್ಕೂ ಹೆಚ್ಚು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಸಂತೋಷದ ವಿಷಯವಾಗಿದೆ.  

ಪ್ರಧಾನ ಮಂತ್ರಿಗಳು ಇಂದು 103 ಅಮೃತ್ ನಿಲ್ದಾಣಗಳನ್ನು ಉದ್ಘಾಟಿಸಿದ್ದಾರೆ. ಇದರಲ್ಲಿ ಕರ್ನಾಟಕದ ಐದು ನಿಲ್ದಾಣಗಳು, ಧಾರವಾಡ, ಬಾಗಲಕೋಟೆ, ಮುನಿರಾಬಾದ್, ಗದಗ ಮತ್ತು ಗೋಕಾಕ್ ರಸ್ತೆ ಸೇರಿವೆ ಎಂದರು.  

ದೇಶದ ನಿರಂತರ ಅಭಿವೃದ್ಧಿಯಲ್ಲಿ ಸುಗಮ ಮತ್ತು ಸಂಘಟಿತ ರೈಲು ಸಾರಿಗೆ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ಸಾಧನವಾಗಿರುವುದರ ಜೊತೆಗೆ, ದೇಶದ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಯ ಬೆನ್ನೆಲುಬಾಗಿದೆ.   

ಭಾರತ ಸರ್ಕಾರವು ರೈಲು ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಬದ್ಧವಾಗಿದೆ.  

ಪ್ರಧಾನಿ ಮೋದಿ ಅವರು ನಮ್ಮ ರೈಲ್ವೆ ನಿಲ್ದಾಣಗಳು, ರೈಲುಗಳು, ಹಳಿಗಳು ಮತ್ತು ಸಿಗ್ನಲಿಂಗ್ ಅನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸಲು ಬಯಸುತ್ತಾರೆ. ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಾ, ದೇಶಾದ್ಯಂತ ರೈಲ್ವೆ ಯೋಜನೆಗಳು ಬಹಳ ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ರಾಜ್ಯಪಾಲರು ಹೇಳಿದರು.  

ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ರೈಲು ಸೇವೆಗಳನ್ನು ಒದಗಿಸಲು, ರೈಲು ವ್ಯವಸ್ಥೆಗಳು, ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯಗಳನ್ನು ಆಧುನೀಕರಿಸಲು ಮತ್ತು ಅತ್ಯುತ್ತಮವಾಗಿಸಿ, ಮಾಲಿನ್ಯ ಮುಕ್ತ ರೈಲು ಮತ್ತು ಸರಕು ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. 

ಕರ್ನಾಟಕದಲ್ಲಿ ಪ್ರಸ್ತುತ 50,792 ಕೋಟಿ ರೂ.ಗಳ ಮೌಲ್ಯದ ಕಾಮಗಾರಿಗಳು ನಡೆಯುತ್ತಿವೆ. 2025-26 ಸಾಲಿನ ಬಜೆಟ್‌ನಲ್ಲಿ ರಾಜ್ಯಕ್ಕೆ 7,564 ಕೋಟಿ ರೂಪಾಯಿ ಹಂಚಿಕೆಯಾಗಿದ್ದು, 61 ನಿಲ್ದಾಣಗಳನ್ನು ವಿಶ್ವ ದರ್ಜೆಯ ರೈಲು ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.  

ಗೌರವಾನ್ವಿತ ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ, ಪ್ರಯಾಣಿಕರಿಗೆ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲು ಅಮೃತ್ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ರೈಲ್ವೆ ಸಚಿವಾಲಯವು ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣದ ಕೆಲಸವನ್ನು ಮಾಡುತ್ತಿದೆ. ಇದು ಈ ಪ್ರದೇಶದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದು ಅವರು ತಿಳಿಸಿದರು. 

ಆತ್ಮನಿರ್ಭರ ಭಾರತ ಅಭಿಯಾನದ ಮೂಲಕ ರೈಲ್ವೆಯ ಹಲವು ಪ್ರಮುಖ ಮೂಲಸೌಕರ್ಯ ಮತ್ತು ಉತ್ಪಾದನಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ವಂದೇ ಭಾರತ್ ರೈಲುಗಳ ಸ್ಥಳೀಯ ಉತ್ಪಾದನೆಯ ಕೆಲಸ ಮುಖ್ಯವಾಗಿದೆ ಎಂದು ಹೇಳಿದರು.  

ಸ್ವಾತಂತ್ರ್ಯದ ನಂತರ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ. ಭಾರತೀಯ ರೈಲ್ವೆ ಕೂಡ ವೇಗವಾಗಿ ಅಭಿವೃದ್ಧಿ ಹೊಂದಿದ್ದು, ದೇಶದ ಅಭಿವೃದ್ಧಿ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೈಲ್ವೆ ಅಭಿವೃದ್ಧಿಯಲ್ಲಿ ದೂರದೃಷ್ಟಿಯ ನಾಯಕತ್ವ ವಹಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ಗೌರವಾನ್ವಿತ ರೈಲ್ವೆ ಸಚಿವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ​‍್ಿಸುತ್ತೇನೆ ಎಂದರು. 

ಈ ಐತಿಹಾಸಿಕ ಸಾಧನೆಗಳಿಗಾಗಿ  ಅಭಿನಂದಿಸುತ್ತೇನೆ ಎಂದ ಅವರು ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಕೊಡುಗೆ ನೀಡೋಣ ಎಂದು ಕರೆ ನೀಡಿದರು.  

ಕರ್ನಾಟಕ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ ಅವರು ಮಾತನಾಡಿದರು. 

ಮಾಜಿ ಶಾಸಕ ಅಮೃತ ದೇಸಾಯಿ, ರೈಲ್ವೆ ಐಜಿಪಿ ಆರ್‌.ಎಸ್‌.ಪಿ.ಸಿಂಗ್ ಅವರು ವೇದಿಕೆಯಲ್ಲಿ ಇದ್ದರು. 

ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಮುಕುಲ ಸರಣ ಮಾತುರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈಲ್ವೆ ಅಧಿಕಾರಿ ಅಂಜಿನಿ ಹೆಚ್‌. ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಇತರ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಸಾರ್ವಜನಿಕರು, ರೈಲ್ವೆ ಬಳಕೆದಾರ ಸಂಘದ ಸದಸ್ಯರು, ಮತ್ತಿತರರು ಭಾಗವಹಿಸಿದ್ದರು. 

ಅಮೃತ ಸ್ಟೇಶನ್‌-ವಿವಿಧ ಸ್ಪರ್ಧಾ ವಿಜೇತರು: ಧಾರವಾಡ ರೈಲು ನಿಲ್ದಾಣ ಪುನರಾಭಿವೃದ್ಧಿ ಮತ್ತು ಆಧುನಿಕರಣ ಯೋಜನೆಯ ಅಂಗವಾಗಿ ಜಿಲ್ಲೆಯ ಶಾಲಾ ಮಕ್ಕಳಿಗೆ ನೈಋತ್ಯ ರೈಲ್ವೆ ಇಲಾಖೆಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು. 

ಚಿತ್ರಕಲಾ ಸ್ಪರ್ಧೆ: ಧಾರವಾಡ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಎಸ್‌.ಪಿ. ಪ್ರಥಮ ಸ್ಥಾನ, ಕೇಂದ್ರೀಯ ವಿದ್ಯಾಲಯ 4ನೇ ತರಗತಿ ವಿದ್ಯಾರ್ಥಿನಿ ರೋಶನಿ ಮುನೀರ್ ಅಹಮದ್ ಕುರ್ಲಗೇರಿ ದ್ವಿತೀಯ ಸ್ಥಾನ ಹಾಗೂ ಕೆ.ಇ ಬೋರ್ಡ್‌ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕಿರಣ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ.  

ಪ್ರಬಂಧ ಸ್ಪರ್ಧೆ: ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾಗಿರಿಯ ಜೆಎ??ಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಆದ್ಯ ಶ್ರೀಚಂದ್ರ ಪ್ರಥಮ ಸ್ಥಾನ, ಕೇಂದ್ರೀಯ ವಿದ್ಯಾಲಯ 9ನೇ ತರಗತಿ ವಿದ್ಯಾರ್ಥಿನಿ ಸುರಭಿ ವಿ.ಜಿ ದ್ವಿತೀಯ ಸ್ಥಾನ ಹಾಗೂ ಮುಂಡಗೋಡ ಸರ್ಕಾರಿ ಪ್ರೌಢಶಾಲೆ 10ನೇ ತರಗತಿಯ ವಿದ್ಯಾರ್ಥಿನಿ ಸಾಧನಾ ತೃತೀಯ ಸ್ಥಾನ ಪಡೆದಿದ್ದಾರೆ.   

ಭಾಷಣ ಸ್ಪರ್ಧೆ: ಭಾಷಣ ಸ್ಪರ್ಧೆಯಲ್ಲಿ ವಿದ್ಯಾಗಿರಿಯ ಜೆಎ??ಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಆದ್ಯ ಶ್ರೀಚಂದ್ರ ಪ್ರಥಮ ಸ್ಥಾನ, ಪಾಲಾಕ್ಷ ಪೋದರ್ಲರ್ನ್‌ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸಂಚಿತಾ ಪೂಜಾರಿ ದ್ವಿತೀಯ ಸ್ಥಾನ ಹಾಗೂ ಕೇಂದ್ರೀಯ ವಿದ್ಯಾಲಯ 9ನೇ ತರಗತಿ ವಿದ್ಯಾರ್ಥಿನಿ ಸುರಭಿ ವಿ.ಜಿ ತೃತೀಯ ಸ್ಥಾನ ಪಡೆದಿದ್ದಾರೆ.    

ರಾಜಭಾಷಾ ಪ್ರಬಂಧ ಸ್ಪರ್ಧೆ: ರಾಜಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ಧಾರವಾಡ ಸ್ಟೇಷನ್ ಮ್ಯಾನೇಜರ್ ರಂಜನ್ ಕುಮಾರ್ ಝಾ, ಮುಖ್ಯ ವಾಣಿಜ್ಯ ನೀರೀಕ್ಷಕ ವಿ.ವಿ. ಗ್ರಾಮಪುರೋಹಿತ್, ವೆಲ್ಡರ್, ಗ್ರೇಡ್‌-ಋಋ, ಮಹೇಶ್ ಎಸ್‌.ತಳವಾರ ಪ್ರಶಸ್ತಿ ಪಡೆದಿದ್ದಾರೆ.