ನಿವೃತ್ತ ನೌಕರರು ಯುವ ನೌಕರರಿಗೆ ಆದರ್ಶಪ್ರಾಯವಾಗಲಿ: ಪ್ರಕಾಶಾನಂದಜೀ

ಲೋಕದರ್ಶನವರದಿ

ರಾಣೇಬೆನ್ನೂರು: ಸರಕಾರಿ ಹಾಗೂ ಅರೆ ಸರಕಾರಿಯಾಗಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಯೋ ನಿವೃತಿ ಸಹಜ ಪ್ರಕ್ರಿಯೆ, ನಿವೃತ್ತರು ಇದರಿಂದ ಚಿಂತೆಗೊಳಗಾಗದೆ ಕ್ರಿಯಾಶೀಲರಾಗಿ ಉಲ್ಲಾಸದ ಜೀವನ ನಡೆಸುವ ಮೂಲಕ ಬದುಕನ್ನು ಹಸನವಾಗಿಸಿಕೊಳ್ಳಬೇಕು ಎಂದು ಸ್ಥಳೀಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ ಹೇಳಿದರು. 

    ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಪಿಂಚಣಿದಾರರ ದಿನಾಚರಣೆ, ಹಿರಿಯ ಪಿಂಚಣಿದಾರರಿಗೆ ಸನ್ಮಾನ, ಚಿಂತನದ ಕಿರಣ ಕೃತಿ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

    ನಿವೃತ್ತರು ಸಮಾಜಮುಖಿಯಾಗಿ ಕ್ರಿಯಾಶೀಲರಾದಲ್ಲಿ ವಯಸ್ಸಾಗಿದೆ ಎಂಬ ಭಾವನೆ ಬರುವುದಿಲ್ಲ. ಸದಾ ಒಂದಿಲ್ಲೊಂದು ಕ್ರಿಯಾತ್ಮಾಕ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ. ಇದು ಇತರರಿಗೂ ದಾರಿದೀಪವಾಗುವುದರ ಜೊತೆಗೆ ತಮಗೂ ಸ್ಪೂತರ್ಿಯಾಗಲಿದೆ ಎಂದರು. 

 ಸೇವಾ ನಿವೃತ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಮತ್ತು 2018-19ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚೇತನ ಮುಂಡಾಸದ, ಪ್ರಶಾಂತ ಕೆ, ಅನುಷಾ ಮೈಲಾರ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ.ಎಚ್.ಕೆ.ಕದರಮಂಡಲಗಿ ರಚಿತ ಚಿಂತನದ ಕಿರಣ ಕೃತಿಯನ್ನು ಶ್ರೀಗಳು ಮತ್ತು ಅತಿಥಿಗಳು ಬಿಡುಗಡೆ ಮಾಡಿದರು. 

ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಂ.ಸಂಕಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಪಿ.ಯು. ಗಡ್ಡದಗೂಳಿ, ಪ್ರಕಾಶ ಕುಲಕಣರ್ಿ, ಎಂ.ಬಿ. ಮಳಲಿ, ಆರ್.ಟಿ. ಉದಗಟ್ಟಿ, ಎಸ್.ಎಂ. ಅರಿಕಟ್ಟಿ, ವಿ.ಸಿ. ಕೋಟಿಹಾಳ, ಸುಧಾ ಸಾತಬಾಯಿ, ಮೃತ್ಯುಂಜಯ ಮುದ್ದಿ, ಎಂ.ಟಿ. ಅಸುಂಡಿ, ಜೆ.ಎಸ್. ಕುಪ್ಪೇಲೂರ, ವಿ.ಎಂ. ಕರ್ಜಗಿ, ಸಿ.ಎಸ್. ಶೀಲವಂತ, ಎನ್.ಎಸ್. ಪಾಟೀಲ, ಎಸ್.ಎಸ್. ತಳವಾರ, ಪಿ.ಬಿ. ಕುಲಕಣರ್ಿ, ವಿ.ಎಸ್. ಮೂಲಿಮನಿ, ಪಿ.ಬಿ. ಕಡ್ಲೆಪ್ಪನವರ, ಬಿ.ಸಿ. ಉಜ್ಜಮ್ಮನವರ, ಬಿ.ಬಿ. ಗೌಡರ, ಎಚ್.ಬಿ. ಇಮ್ಮಡಿ ಸೇರಿದಂತೆ ಮತ್ತಿತರರು ಇದ್ದರು