ಆನಂದ್ ಸಿಂಗ್ ಮಗನ ಮದುವೆ ಖರ್ಚನ್ನು ಚುನಾವಣಾ ವೆಚ್ಚಕ್ಕೆ ಸೇರಿಸಬೇಕು: ರಾಯರೆಡ್ಡಿ ಆಗ್ರಹ

ಆನಂದ್ ಸಿಂಗ್ ಮಗನ ಮದುವೆ ಖರ್ಚನ್ನು ಚುನಾವಣಾ ವೆಚ್ಚಕ್ಕೆ ಸೇರಿಸಬೇಕು:  ರಾಯರೆಡ್ಡಿ ಆಗ್ರಹ 

ಬಳ್ಳಾರಿ: ಅನರ್ಹಗೊಂಡಿರುವ ಶಾಸಕ, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಆನಂದ್ ಸಿಂಗ್ ವಾಮ ಮಾರ್ಗದಿಂದ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆರೋಪಿಸಿದರು. 

ಹೊಸಪೇಟೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಡಿ.1 ರಂದು ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ. ಈ ಬಗ್ಗೆ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ. 

ಮಗನ ಮದುವೆಯಲ್ಲಿ ಆನಂದ್ ಸಿಂಗ್ ಒಂದು ಊಟಕ್ಕೆ 500 ರೂ.ಯಂತೆ ಸುಮಾರು ಎರಡು ಕೋಟಿ ರೂ. ಖಚರ್ು ಮಾಡುತ್ತಿದ್ದಾರೆ. ಪೆಂಡಾಲ್ ಗೆ ಎರಡು ಕೋಟಿ ರೂ. ಖಚರ್ು ಮಾಡುತ್ತಿದ್ದಾರೆ. ಮದುವೆ ನೆಪದಲ್ಲಿ ಮತದಾರರಿಗೆ 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ. ಈ ಬಗ್ಗೆಯೂ ಕಾಂಗ್ರೆಸ್ ದೂರು ನೀಡಲಿದೆ. ಮದುವೆಯಲ್ಲಿ ಸಿಸಿ ಟಿವಿ ಅಳವಡಿಕೆ ಜತೆಗೆ ವಿಶೇಷ ಸ್ಕ್ವಾಡ್ ಕಳಿಸಬೇಕು. ಎಲ್ಲವನ್ನೂ ಲೆಕ್ಕ ಇಟ್ಟು ಆನಂದ್ ಸಿಂಗ್ ರ ಚುನಾವಣಾ ವೆಚ್ಚಕ್ಕೆ ಸೇರಿಸಬೇಕೆಂದು ಬಸವರಾಜ ರಾಯರೆಡ್ಡಿ ಆಗ್ರಹಿಸಿದರು.