ಬೆಳಗಾವಿ 29: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ಆಯ್‌ಸಿಎಆಯ್ ) ಖಋಅ ಯ ಬೆಳಗಾವಿ ಶಾಖೆಯು ದಿ. 27ರಂದು ಬೆಳಗಾವಿಯ ಏಐಇ ಯ ಡಾ. ಬಿ. ಎಸ್. ಜಿರ್ಗೆ ಆಡಿಟೋರಿಯಂನ ಡಾ. ಬಿ. ಎಸ್. ಕೋಡ್ಕಣಿ ಹಾಲ್‌ನಲ್ಲಿ ಬ್ಯಾಂಕ್ ಶಾಖೆಯ ಆಡಿಟ್ ಸೆಮಿನಾರ್ ಅನ್ನು ಆಯೋಜಿಸಿತ್ತು.
ಸೆಮಿನಾರ್ ಅನ್ನು ಹೈದರಾಬಾದ್‌ನ ಸಿಎ ಸರಣ್‌ಕುಮಾರ್‌ಯು ಉದ್ಘಾಟಿಸಿದರು, ಬೆಳಗಾವಿ ಶಾಖೆಯ ಹಿಂದಿನ ಅಧ್ಯಕ್ಷ ಸಿಎ ರಾಜೇಂದ್ರ ಮುಂಡದ ಅವರನ್ನು ಪ್ರಸ್ತುತ ವ್ಯವಸ್ಥಾಪಕ ಸಮಿತಿ ಸದಸ್ಯರು ಸನ್ಮಾನಿಸಿದರು. ಸಿಎ ವೀರಣ್ಣ ಎಂ. ಮುರ್ಗೋಡ್ ತಮ್ಮ ಸ್ವಾಗತ ಭಾಷಣದಲ್ಲಿ ಶಾಖೆ ಮತ್ತು ಸಿಎ ವೃತ್ತಿಗೆ ಅವರ ಕೊಡುಗೆಯನ್ನು ಹೆಚ್ಚಾಗಿ ಉಲ್ಲೇಖಿಸಿದರು. ಸಿಎ ಸಂಜೀವ್ ದೇಶಪಾಂಡೆ ಧನ್ಯವಾದಗಳನ್ನು ಅರ್ಿಸಿದರು, ವ್ಯವಸ್ಥಾಪಕ ಸಮಿತಿ ಸದಸ್ಯರು ಸಿಎ ಅನಿಲ್ ರಾಮದುರ್ಗ, ಸಿಎ ಪ್ರಸಾದ್ ಸೋಲಾಪುರಮಠ, ಸಿಎ ಸಚಿನ್ ಖಡಬಾದಿ, ಹಿಂದಿನ ಅಧ್ಯಕ್ಷ ಸಿಎ ನಿತಿನ್ ನಿಂಬಾಳ್ಕರ್, ಸಿಎ ಎಂ. ಎಸ್. ತಿಗಡಿ, ಸಿಎ ಗೌರಿ ನಾಯಕ್, ಬೆಳಗಾವಿ ಸಿಎ ಅಸೋಸಿಯೇಷನ್ ಅಧ್ಯಕ್ಷರು, ಬೆಳಗಾವಿ ಸಿಎ ಅಸೋಸಿಯೇಷನ್‌ನ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.