ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಬಾಬು ಜಗಜೀವನರಾಮರವರ ಜಯಂತಿ ಆಚರಣೆ

Babu Jagjivan Ram's birth anniversary celebrated at Maharana Pratap Simha Educational Institute

ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಬಾಬು ಜಗಜೀವನರಾಮರವರ ಜಯಂತಿ ಆಚರಣೆ 

ಬೆಟಗೇರಿ 05: ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಸಿರು ಕ್ರಾಂತಿ ಹರಿಕಾರ ಹಾಗೂ  ಗ್ರಾಮೀಣ ಕಾರ್ಮಿಕ ಚಳುವಳಿ ಸಂಘಟನಾಕಾರರಾಗಿದ್ದ ಬಾಬು ಜಗಜೀವನರಾಮರವರ ಜಯಂತಿಯನ್ನು ಆಚರಿಸಲಾಯಿತು. 

   ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಗಣೇಶಸಿಂಗ್ ಬ್ಯಾಳಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ​‍್ಾರೆ್ಪಣ ಮಾಡಿದರು.  ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಎ.ಎ.ಹದ್ಲಿ, ಪ್ರೌಢ ಶಾಲಾ ಪ್ರಭಾರ ಮುಖ್ಯಾಧ್ಯಾಪಕರಾದ ಎಚ್‌.ಎಸ್‌.ಬ್ಯಾಳಿ ಹಾಗೂ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.