ಬಾಬು ಜಗಜೀವನರಾಂ ದೇಶದ ಹಸಿರು ಕ್ರಾಂತಿಯ ಹರಿಕಾರ: ಜಿ.ಪಿ.ಬಿರಾದಾರ

Babu Jagjivan Ram was the pioneer of the country's green revolution: G.P. Biradar

ದೇವರಹಿಪ್ಪರಗಿ 05:‘ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಜಿ.ಪಿ.ಬಿರಾದಾರ ಹೇಳಿದರು. 

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ 118ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು,‘ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು’ಇಂತಹ ಮಹಾನ್ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಫೋಟೋ ಪ್ರತಿಮೆಗೆ ಮಾಲಾರೆ​‍್ಣ ಮಾಡುವ ಮೂಲಕ ಮಾತನಾಡಿದ ಅವರು,‘ಬಾಬು ಜಗಜೀವನರಾಂ ಅವರು ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದಕ್ಷ ಆಡಳಿತಗಾರರಾಗಿದ್ದರು. ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದಿಗೂ ಮರೆಯದ ವ್ಯಕ್ತಿತ್ವವನ್ನು ಹೊಂದಿದ್ದರು. ಬಡವರು, ದೀನ ದಲಿತರ ಕಣ್ಣೀರು ಒರೆಸಿದ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು’ ಎಂದು ಹೇಳಿದರು.ಇದೇ ಸಂಧರ್ಭದಲ್ಲಿ ಕಂದಾಯ ಶಿರಸ್ತೇದಾರ ಡಿ.ಬಿ.ಭೋವಿ, ಉಪ ತಹಶೀಲದಾರರಾದ ಗಿರಿಜಾ ಸಜ್ಜನ, ಸಿಬ್ಬಂದಿಗಳಾದ ಅಮಸಿದ್ದ ದಳವಾಯಿ, ಸಂತೋಷ ಹೊಟಗಾರ, ಕುಮಾರ ಅವರಾದಿ, ಚನ್ನಬಸು ಹೊಸಮನಿ, ಅಬುಲಕಲಾಂ ಮೋಮಿನ, ರಾಜಕುಮಾರ ಕಿಣಗಿ, ಸಂತೋಷ ತಳವಾರ, ವಿನೋದ ರಡ್ಡಿ, ಪ್ರವೀಣ ಹೂಗಾರ, ಸಮುದಾಯದ ಮುಖಂಡರುಗಳಾದ ಸಂತೋಷ ಬೇವಿನಗಿಡದ, ರಾಹುಲ್ ದೊಡಮನಿ, ಕಿರಣ್ ವಗ್ಗರ, ನಾಗೇಶ್ ವಗ್ಗರ, ಭಿಮಾಶಂಕರ್ ವಗ್ಗರ, ಪರಸು ಸನದಿ, ಮರಣಿಗಪ್ಪ ಪಡಗನೂರ, ಸದಾಶಿವ ಬೇವಿನಗಿಡದ, ಪ್ರಬು ಸಂಗಣ್ಣವರ, ಸುರೇಶ ಮಣ್ಣೂರ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು.