ಕೌಂಡಿನ್ಯ ನೌಕೆ ನಿರ್ಮಾಣದ ಉದ್ದೇಶದ ಹಿನ್ನೆಲೆ

Background to the purpose of building the Kaundinya ship

ಕೌಂಡಿನ್ಯ ನೌಕೆ ನಿರ್ಮಾಣದ ಉದ್ದೇಶದ ಹಿನ್ನೆಲೆ 

ಕಾರವಾರ 21:  5 ನೇ ಶತಮಾನದ ಅಜಂತಾ ಗುಹೆಯ ವರ್ಣಚಿತ್ರದಿಂದ ಸ್ಫೂರ್ತಿ ಪಡೆದ ಈ ವಿಶಿಷ್ಟ ಹಡಗು ಪ್ರಾಚೀನ ಸಮುದ್ರಯಾನ ಸಂಪ್ರದಾಯವನ್ನು ಆಧುನಿಕ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ.ಈ ಹಡಗಿಗೆ ಹಿಂದೂ ಮಹಾಸಾಗರದಿಂದ ಆಗ್ನೇಯ ಏಷ್ಯಾಕ್ಕೆ ಪ್ರಯಾಣ ಬೆಳೆಸಿದ್ದ ಪೌರಾಣಿಕ ಭಾರತೀಯ ನಾವಿಕ ಮತ್ತು ಸನ್ಯಾಸಿಯಾಗಿದ್ದ ಕೌಂಡಿನ್ಯ ಅವರ ಹೆಸರನ್ನು ಇಡಲಾಗಿದೆ. ಇದು ಭಾರತದ ಸಾಗರ ವಿನಿಮಯದ ಪ್ರಾಚೀನ ಸಂಪ್ರದಾಯಗಳು, ಸಮುದ್ರಯಾನ, ಐತಿಹಾಸಿಕ ಹೆಜ್ಜೆಯನ್ನು ಸಂಕೇತಿಸುತ್ತದೆ. ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಗೋವಾದ ಮೆ/ಎಸ್ ಹೊಡಿ ಇನ್ನೋವೇಶನ್ಸ್‌ ನಡುವಿನ ತ್ರಿಪಕ್ಷೀಯ ಸಹಯೋಗದ ಮೂಲಕ ಕೌಂಡಿನ್ಯ ನೌಕೆ ನಿರ್ಮಿಸಲಾಗಿದೆ.ಸಾಂಪ್ರದಾಯಿಕ ತೆಂಗಿನ ನಾರಿನ ಹೊಲಿಗೆ ತಂತ್ರಗಳನ್ನು ಬಳಸಿ ಮಾಸ್ಟರ್ ಶಿಪ್ ರೈಟ್ ಶ ಬಾಬು ಶಂಕರನ್ ನಿರ್ಮಿಸಿದ ಈ ಹಡಗನ್ನು ಫೆಬ್ರವರಿ 2025 ರಲ್ಲಿ ಪಯಣಕ್ಕೆ ತಯಾರು ಮಾಡಲಾಯಿತು.  

ಭಾರತೀಯ ನೌಕಾಪಡೆ ಮತ್ತು ಐಐಟಿ ಮದ್ರಾಸ್ ಹಡಗಿನ ವಿನ್ಯಾಸ ಬಳಸಿ ಸಮುದ್ರ ಪಯಣಕ್ಕೆ ಸಿದ್ಧ ಮಾಡಲಾಗಿದೆ. ಗಂಡಭೇರುಂಡ ಮತ್ತು ಸಿಂಹ ಮುಖದ ವಿಶಿಷ್ಟ ಲಕ್ಷಣಗಳಿಂದ ಅಲಂಕರಿಸಲ್ಪಟ್ಟ ಕೌಂಡಿನ್ಯ,ಹರಾ​‍್ಪ ಶೈಲಿಯ ಲಂಗರು ಹೊಂದಿದೆ. ಕೌಂಡಿನ್ಯ ಭಾರತದ ಕಡಲ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.ಈ ಹಡಗು ಶೀಘ್ರದಲ್ಲೇ ಪ್ರಾಚೀನ ವ್ಯಾಪಾರ ಮಾರ್ಗಗಳಲ್ಲಿ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದ್ದು ಕಾಂಬೋಡಿಯ, ಆಫ್ರಿಕಾದತ್ತ ಸಹ ಪಯಣಿಸಲಿದೆ.ಭಾರತದ ಸಾಗರ ಪರಂಪರೆ ಮತ್ತು ನಾಗರಿಕತೆಯ ವ್ಯಾಪ್ತಿಯನ್ನು ಪುನರುಚ್ಚರಿಸಲಿದೆ. ತೆಂಗಿನ ನಾರು ಬಳಸಿ ಸಿದ್ದಪಡಿಸಿದ ದೇಶಿಯ ಹಡಗು ಐದನೇ ಶತಮಾನದ ತಂತ್ರಜ್ಞಾನ ಬಳಸಿ ಸಿದ್ದಪಡಿಸಿದ ಹಡಗು ಅಜಂತಾ ಗುಹೆಯ ವರ್ಣ ಚಿತ್ರ ಆಧರಿಸಿ ಹಡಗು ನಿರ್ಮಾಣ ದೇಶದ ಸಂಸ್ಕೃತಿ ,ಪರಂಪರೆ ಬಿಂಬಿಸಲು ಹಡಗು ನಿರ್ಮಾಣ ಗೋವಾದ ಹೋಡಿ ಇನ್ನೋವೇಶನ್ ಕಂಪನಿಯಿಂದ ಹಡಗು ನಿರ್ಮಾಣ ಗುಜರಾತ್ ನಿಂದ ಓಮನ್ ದೇಶಕ್ಕೆ ಮೊದಲ ಪ್ರಯಾಣ ಬೆಳಸಲಿರುವ ಐ.ಎನ್‌.ಎಸ್‌.ವಿ. ಕೌಂಡಿನ್ಯ.