ಯಮಕನಮರಡಿ 29: ಸಮೀಪದ ಯಮಕನಮರಡಿಯ ಜಗದ್ಗುರು ಶೂನ್ಯ ಸಂಪಾದನಾ ಮಠದಲ್ಲಿ ಇಂದು ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಶ್ರೀ ಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಗುವುದು.
ವಚನ ವಟು ಸಾಧಕರಿಂದ ಲಿಂಗಾಯತ ಧರ್ಮಗುರು ಬಸವಣ್ಣನವರ ಭಾವಚಿತ್ರ ಪೂಜೆ ಹಾಗೂ ವಚನ ಪ್ರಾರ್ಥನೆ ನಡೆಯಲಿದ್ದು ಎಲ್ಲರೂ ಬಂದು ಶ್ರೀ ಗುರು ಬಸವಣ್ಣನವರ ಕೃಪೆಗೆ ಪಾತ್ರರಾಗಬೇಕೆಂದು ಈ ಮಠದ ಪೂಜ್ಯರಾದ ಸಿದ್ದಬಸವ ದೇವರು ತಿಳಸಿದ್ದಾರೆ.