ಜಗತ್ತಿನಲ್ಲಿ ಸಮಾನತೆ ಪರಿಕಲ್ಪನೆ ತಂದವರು ಬಸವಣ್ಣ : ಶಾಸಕ ಪಠಾಣ
ಶಿಗ್ಗಾವಿ 01 : ಜಗತ್ತಿನಲ್ಲಿ ಸಮಾನತೆಯ ಪರಿಕಲ್ಪನೆಯನ್ನು ತಂದವರು ವಿಶ್ವಗುರು ಬಸವಣ್ಣವರು ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು. ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಉದ್ದೇಶಿಸಿ ಮಾತನಾಡಿದ ಅವರು ಬಸವಣ್ಣವರು ತಮ್ಮ ಮನೆಯಲ್ಲಿರುವ ಅಚರಣೆಗಳ ಬಗ್ಗೆ ತಾತ್ಸಾರ ಹೊಂದಿ ವೀರಶೈವ ಸಮಾಜಕ್ಕೆ ಬಂದು ಮಹಾಯೋಗಿಯಾದರು ಅಲ್ಲದೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಹೀಗಿರಬೇಕು ಎಂದು ಪ್ರತಿಪಾಧಿಸಿದವರು ಹಾಗೂ ಬಸವೇಶ್ವರ ಜಯಂತಿ ಅದ್ದೂರಿಯಾಗಿ ಮಾಡಲು ಪೂರ್ವಭಾವಿ ಸಭೆ ಮಾಡಿ ಒಮ್ಮತದ ತೀರ್ಮಾನ ಮಾಡಿರಿ ನನ್ನ ಶಕ್ತಾನುಸಾರ ಕಾರ್ಯಕ್ರಮಕ್ಕೆ ಸಹಾಯ ಮಾಡುತ್ತೇನೆ ಮತ್ತು ಸಮಾಜದ ಒಮ್ಮತದ ತಿರ್ಮಾನದ ಮೇರೆಗೆ ಬಸವಣ್ಣವರ ಪುತ್ಥಳಿಯನ್ನು ಪಟ್ಟಣದಲ್ಲಿ ಪ್ರತಿಷ್ಠಾಪಿಸೋಣ ಎಂದರು. ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಸಮಾಜದಲ್ಲಿರುವ ಅಸಮಾನತೆಯನ್ನು ತೊಲಗಿಸಿ ಸಮಾನತೆ ಕಡೆಗೆ ಹೋದಾಗ ಮಾತ್ರ ಬಸವಣ್ಣವರ ಜಯಂತಿಗೆ ಅರ್ಥ ಬರುತ್ತದೆ ಹಾಗೂ ಇದು ಸರ್ಕಾರಿ ಕಾರ್ಯಕ್ರಮವಾಗಿರುವ ಕಾರಣ ವಿಜೃಂಭಣೆಯಿಂದ ಮಾಡಲು ಆಗುವುದಿಲ್ಲ ಸಮಾಜದ ಅಧ್ಯಕ್ಷರು ಕಾರ್ಯಕ್ರಮ ಆಯೋಜಿಸಿ ಅದರ ಖರ್ಚನ್ನು ನಾನು ಭರಿಸುತ್ತೇನೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮಾತನಾಡಿ ಜಗತ್ತಿಗೆ ಮೊಟ್ಟ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಟ್ಟವರು ವಿಶ್ವಗುರು ಬಸವಣ್ಣವರು, ಕಾಯಕವೇ ಕೈಲಾಸ, ಸಾಮಾಜಿಕ ಕ್ರಾಂತಿಯ ಹರಕಾರರು, ಸಮಾಜದಲ್ಲಿ ಬದಲಾವಣೆ ತಿರುವ ಕೊಟ್ಟವರು ಬಸವಣ್ಣವರು ಅಲ್ಲದೇ ಇಂದಿನ ಮಕ್ಕಳಿಗೆ ಬಸವಣ್ಣವರ ವಚನವನ್ನು ಪರಿಪಾಠ ಮಾಡಿಸಬೇಕು ಎಂದರು.
ವೀರಶೈವ ಸಮಾಜ ತಾಲೂಕ ಅಧ್ಯಕ್ಷ ಬಸವರಾಜ ರಾಗಿ, ಬಸವರಾಜ ಜೇಕಿನಕಟ್ಟಿ, ಶಂಕರಗೌಡ ಪಾಟೀಲ, ಲಲಿತಾ ಹಿರೇಮಠ, ಹನುಮಂತ ಬಂಡಿವಡ್ಡರ, ಭರಮಜ್ಜ ನವಲಗುಂದ, ಕರೆಯಪ್ಪ ಕಟ್ಟಿಮನಿ, ಪಕ್ಕೀರ್ಪ ಕುಂದೂರ ಮಾತನಾಡಿದರು. ನಿವೃತ್ತ ಶಿಕ್ಷಕಿ ಪ್ರತಿಭಾ ಗಾಂಜಿ ಬಸವಣ್ಣವರ ವಚನಗಳನ್ನು ಪ್ರಸ್ತುತ ಪಡಿಸಿದರು, ತಹಶಿಲ್ದಾರ ರವಿ ಕೊರವರ, ಇಓ ಕುಮಾರ ಮಣ್ಣವಡ್ಡರ, ಉಪ ತಹಶೀಲ್ದಾರ ಗಾಮನಗಟ್ಟಿ, ಇಂಧೂದರ ಮುತ್ತಳ್ಳಿ, ಪುರಸಭೆ ಸದಸ್ಯ ದಯಾನಂದ ಅಕ್ಕಿ, ಗೌಸಖಾನ ಮುನಶಿ, ಪಂಚಮಸಾಲಿ ಸಮಾಜ ಅಧ್ಯಕ್ಷ ಶಿವಾನಂದ ಬಾಗೂರ, ಲಂಬಾಣಿ ಸಮಾಜ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಪಿಂಜಾರ ಸಮಾಜ ಅಧ್ಯಕ್ಷ ಪೀರಸಾಬ ನದಾಫ, ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಮುಖಂಡರಾದ ಜಿ.ಎನ್.ಯಲಿಗಾರ, ಜಯಣ್ಣಾ ಹೆಸರೂರ, ರವಿ ಕುಡವಕ್ಕಲಿಗೇರ, ಶಿವಪ್ಪ ಗಂಜೀಗಟ್ಟಿ, ಮಂಜುನಾಥ ಮಣ್ಣಣ್ಣವರ, ಸಿ.ಎಸ್.ಪಾಟೀಲ, ಅಶೋಕ ಕಾಳೆ, ಗುಡ್ಡಪ್ಪ ಜಲದಿ, ಮಹಾಂತೇಶ ಸಾಲಿ, ಸುಧೀರ ಲಮಾಣಿ, ಸುಮಿತ ಸೂರ್ಯವಂಶಿ, ಶಿವಾನಂದ ಕುನ್ನೂರ, ಮಾಲತೇಶ ಯಲಿಗಾರ, ಈರಣ್ಣ ಸಮಗೊಂಡ , ಕಲ್ಲಪ್ಪ ಹೆಸರೂರ, ಉಮೇಶಗೌಡ ಪಾಟೀಲ, ಪ್ರಕಾಶ ಹಿರೇಮಠ, ಎಸ್.ಎನ್.ಮುಗಳಿ, ಮುನ್ನಾ ಲಕ್ಷ್ಮೇಶ್ವರ, ಬಸವರಾಜ ಕಟ್ಟೀಮನಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ನೌಕರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.