ಬಳ್ಳಾರಿ: 'ಸಧೃಡ ಆರೋಗ್ಯಕ್ಕಾಗಿ ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ'

ಲೋಕದರ್ಶನ ವರದಿ

ಬಳ್ಳಾರಿ 25: ಸಧೃಡ ಆರೋಗ್ಯಕ್ಕಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ಮಕ್ಕಳು ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಶಿವರಾಜ ಹೆಡೆ ಹೇಳಿದರು.

      ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಕಿಯರ ಸರ್ಕಾರಿ ಬಾಲಕಿಯರ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಮಕ್ಕಳಿಗೆ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1 ರಿಂದ 19 ವರ್ಷದೊಳಗಿನ ಎಲ್ಲ್ಲಾ ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಂತುಹುಳು ನಿವಾರಣೆಯ ಅಲ್ಬಂಡಜೋಲ್ ಮಾತ್ರೆಗಳನ್ನು ಚೀಪಿಸಿ ಸೇವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದ್ದು, ತಪ್ಪದೇ ಚೀಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಶ್ರೀಧರನ್ ಅವರು ಮಾತನಾಡಿ ಹೆಚ್ಚಿನ ರೋಗಗಳು ಅಶುಚಿತ್ವದ ಕಾರಣದಿಂದಾಗಿ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಮಕ್ಕಳು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯವೇ ಭಾಗ್ಯ ಎನ್ನುವಂತೆ ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಚಟುವಟಿಕೆಯಿಂದ ಇರಲು ಸಾಧ್ಯ. ಆರೋಗ್ಯದ ಕುರಿತು ಎಂದಿಗೂ ನಿರ್ಲಕ್ಷ್ಯ ವಹಿಸದಿರಿ ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವುದರಿಂದ ಪರೊಕ್ಷವಾಗಿ ಜಂತು ಹುಳು ಸೊಂಕು ತಡೆಯಬಹುದು ಎಂದರು. 

     ಸರ್ಕಾರಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಹಾಲಿಂಗನಗೌಡ ಅವರು ಮಾತನಾಡಿದರು. 

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪವನರ ಸ್ವಾಗತಿಸಿದರು. ಉಪನ್ಯಾಸಕ ಚಾಂದಪಾಶಾ ವಂದಿಸಿದರು. 

    ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸವರ್ೆಕ್ಷಣಾಧಿಕಾರಿ ಡಾ.ಮರಿಯಂ ಬಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಕೆ.ಜಿ ವೀರೇಂದ್ರಕುಮಾರ, ವೈದ್ಯಾಧಿಕಾರಿ ಡಾ.ಕರುಣಾ, ಶಿಕ್ಷಣ ಇಲಾಖೆಯ ಇಸಿಓ ಮೋಹಿನುದ್ದಿನ, ಗಿರಿಮಲ್ಲ, ಉಪನ್ಯಾಸಕರಾದ ಶ್ರೀನಿವಾಸ ಮೂತರ್ಿ.ಯು, ಎ.ಈರಣ್ಣ, ಶ್ಯಾಮಣ್ಣ, ಡಿಎನ್ಓ ಸರೋಜ, ಆರ್ಬಿಎಸ್ಕೆ ಜಿಲ್ಲಾ ಸಂಯೋಜಕ ಮನೋಹರ, ಎವಿಡೆನ್ಸ್ ಆಕ್ಷನ್ನ ಷಡಾಕ್ಷರಿ. ಟಿ.ಡಿವೈಹೆಚ್ಇಓ ಕೃಷ್ಣಾ ನಾಯ್ಕ್, ಶಾಂತವ್ವ ಉಪ್ಪಾರ, ವಿಜಯಲಕ್ಷ್ಮೀ ಕುರಡಪ್ಪನವರ, ಮೇಘರಾಜ್, ನೇತ್ರಾ ಸೇರಿದಂತೆ ಶಾಲಾ ವಿಧ್ಯಾಥರ್ಿನಿಯರು ಹಾಗೂ ಉಪನ್ಯಾಸಕರು, ಟ್ಯಾಂಕ್ಬಂಡ್ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು