ಬಳ್ಳಾರಿ 31: ಮಹಾನಗರದ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣಗಳ ಲೇಪನದಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸದೇ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿದ ಗಣೇಶ ಮೂತರ್ಿಗಳನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಪರಿಸರ ಸಂರಕ್ಷಿಸಲು ಮಹಾನಗರಪಾಲಿಕೆಯವರು ಗಣೇಶನ ವಿಸರ್ಜನೆ ಮಾಡಲು ನಗರದ ಬೆಂಗಳೂರು ರಸ್ತೆ, ತಾಳೂರು ರಸ್ತೆ, ಕಪ್ಪಗಲ್ಲು ರಸ್ತೆ, ಅಲ್ಲೀಪುರ ಹೊಸಪೇಟೆ ರಸ್ತೆ, ಬೆಳಗಲ್ಲು ರಸ್ತೆ(ಡಿ.ಸಿ ನಗರ), ಸಿರುಗುಪ್ಪ ರಸ್ತೆ ಹವಂಬಾವಿ, ಬಂಡಿಹಟ್ಟಿ ಆಲದಹಳ್ಳಿ ರಸ್ತೆ ಹಾಗೂ ಭತ್ರಿ ಪ್ರದೇಶಗಳಲ್ಲಿ ನಿಗದಪಡಿಸಲಾಗಿದೆ. ಆದ್ದರಿಂದ ಭಕ್ತಾಧಿಗಳು ನಿಗದಿಪಡಿಸಿದ ಸ್ಥಳದಲ್ಲಿ ಗಣೇಶನ ಮೂತರ್ಿ ವಿಸರ್ಜನೆ ಮಾಡಲು ಕೋರಿದೆ.