ಲೋಕದರ್ಶನವರದಿ
ರಾಣೇಬೆನ್ನೂರು: ಆಧುನೀಕತೆಯ ಇಂದಿನ ದುಬಾರಿ ವೈದ್ಯಕೀಯ ಪರಿಸ್ಥಿತಿಯಲ್ಲಿ ಕಡು ಬಡವರಿಗೆ ರಿಯಾಯತಿ ದರದಲ್ಲಿ ಆರೋಗ್ಯ ತಪಾಸಣೆ ಮಾಡಿ ಜನಮಾನಸದಲ್ಲಿ ನೆಲೆಸಿರುವ ಸ್ಥಳೀಯ ಇಂದಿರಾ ಲ್ಯಾಬೋರೇಟರಿಯ ಸುರೇಶ ಬಿದರಿಯವರ ಸೇವಾ ಮನೋಭಾವನೆ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
ನಗರದ ಕುರುಬಗೇರಿಯ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ದುಬಾರಿ ವೆಚ್ಚದ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಹರಸಾಹಸ ಪಡುತ್ತಿರುವ ಬಡ ಕುಟುಂಬಗಳಿಗೆ ವೈದ್ಯರು ಸೂಚಿಸಿದ ಸಲಹೆಗಳನ್ನು ಪರಿಪಾಲಿಸಿ ಕಡಿಮೆ ದರದಲ್ಲಿ ಆರೋಗ್ಯ ತಪಾಸಣೆ ಮಾಡಿ ತಾಲೂಕಿನ ಜನತೆಗೆ ಅನುಕೂಲ ಮಾಡಿರುವುದು ಪ್ರಶಂಸನೀಯವಾದುದು ಎಂದರು.
ನಿವೃತ್ತ ಶಿಕ್ಷಕ ಬಸವರಾಜ ಅಂಗಡಿ ಮಾತನಾಡಿ, ಇಂದಿನ ಯಾಂತ್ರಿಕ ದಿನಮಾನಗಳಲ್ಲಿ ರೋಗಗಳು ಉಲ್ಬಣಗೊಂಡು ಚಿಕಿತ್ಸೆ ದೊರೆಯದೇ ಹತಾಶರಾಗುವ ಬಡ ಕುಟುಂಬಳಿಗೆ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸಿ ಎಲ್ಲರಲ್ಲಿ ಮನೆ ಮಾತಾಗಿರುವ ಇಂದಿರಾ ಲ್ಯೋಬೋರೇಟರಿ ಕ್ಲಿನಿಕ್ ಬಡವರಿಗೆ ಊರುಗೋಲಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಅನೇಕ ಶಿಬಿರಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯ ಕೈಗೊಂಡು ಬಡವರ ಆರೋಗ್ಯ ಸುಧಾರಣೆಗೆ ಕಾಳಜಿ ವಹಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಇಂದಿರಾ ಕ್ಲಿನಿಕ್ನ ರೂವಾರಿ ಸುರೇಶ ಬಿದರಿ ಮಾತನಾಡಿ, ರಾಣೇಬೆನ್ನೂರಿನ ಜನತೆ ಅದರಲ್ಲೂ ಕುರುಬಗೇರಿಯ ನಾಗರೀಕರು ನನ್ನ ಸೇವೆಯನ್ನು ಗುತರ್ಿಸಿ ಸನ್ಮಾನಿಸಿದ್ದು ಮತ್ತಷ್ಟು ಜವಾಬ್ಧಾರಿ ಹೆಚ್ಚಿಸಿದೆ. ಅವರು ತೋರಿದ ಈ ಗೌರವಕ್ಕೆ ನಾನು ಚಿರಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಬಡವರಿಗೆ, ದೀನ ದಲಿತರಿಗೆ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಇಂದಿರಾ ಕ್ಲಿನಿಕ್ನ ಮಂಜುನಾಥ ಶಿಡಗನಾಳ, ಚೇತನಾ ಶಿಡಗನಾಳ, ಮಂಜುನಾಥ ವಡವಿ, ಫಕ್ಕೀರಪ್ಪ ಕಾಕೋಳ, ಕಲಾವತಿ ಬಡಿಗೇರ, ಸೋಮಶೇಖರ ಹಿರೇಮಠ, ರತ್ನಾಕರ, ಆಂಜನೇಯ ಬಳಿಗಾರ, ಶೋಭಾ ಬಿದರಿ, ಇಂದಿರಾ ಬಿದರಿ ಇವರುಗಳನ್ನು ಸನ್ಮಾನಿಸಲಾಯಿತು.
ನಾಗಪ್ಪ ಮಾಕನೂರ, ಈರಮ್ಮ ಬಣಕಾರ, ವೀರಭದ್ರಪ್ಪ ಬಣಕಾರ, ಹೇಮಪ್ಪ ಮಾಕನೂರ, ಮಹೇಶಪ್ಪ ಕೊಪ್ಪದ, ಬಸವರಾಜ ಗೌಡಶಿವಣ್ಣನವರ, ರಮೇಶ ದುರ್ಗದಶೀಮಿ, ಶಿವಪ್ಪ ಹೆದ್ದೇರಿ, ಶಂಬಣ್ಣ ಬಿಳಗಣ್ಣನವರ, ಎಮ್.ಎಸ್.ಕರೇಗೌಡ್ರ, ವಿರುಪಾಕ್ಷ ಬೆಳಕೇರಿ, ಅಶೋಕ ಕುಬಸದ ಸೇರಿದಂತೆ ಮತ್ತಿತರರು ಇದ್ದರು.