ಲೋಕದರ್ಶನ ವರದಿ
ಗಡಿ ಭಾಗದ ಗ್ರಾಮಗಳು ಅರಿಶಿಣ ಬೆಳೆಯಲು ಹೆಚ್ಚಿನ ಒಲವು
ಸಂಬರಗಿ, 29 : ಗ್ರಾಮೀಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರಿನ ಮೇಲೆ ಕಡಿಮೆ ಅವಧಿಯಲ್ಲಿ ಹೆಚ್ಚು ಉತ್ಪಾದನೆ ಪಡೆದುಕೊಳ್ಳುವ ರೈತರು ಅರಿಶಿಣ ಲಾವಣಿ ಮಾಡುತ್ತಿದ್ದಾರೆ. ಅಥಣಿ ಮಾರುಕಟ್ಟೆಯಲ್ಲಿ ಸೇಲಮ್ ಹಾಗೂ ಕಡಪಾ ಬೀಜಗಳು ಲಭ್ಯವಿದ್ದು, ಬೀಜದ ದರ ಮಾತ್ರ ಗಗನಕ್ಕೆ ಏರಿದೆ. ಸಾಮಾನ್ಯ ರೈತರು ಅರಿಶಿಣ ಲಾವಣಿ ಮಾಡವುದು ಕಷ್ಟವಾಗಿದೆ.
ಗಡಿ ಭಾಗದ ಅನಂತಪೂರ, ಖಿಳೇಗಾಂವ, ಬಳ್ಳಿಗೇರಿ, ಚಮಕೇರಿ, ಪಾರ್ಥನಹಳ್ಳಿ, ಗುಂಡೇವಾಡಿ, ಎಲಿಹಡಲಗಿ, ಅಡಹಳ್ಳಿ ಇನ್ನೀತರ ಗ್ರಾಮಗಳಲ್ಲಿ ಅರಿಶಿಣ ಬೆಳೆ ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಕಳೆದ ವರ್ಷ ಕ್ವಿಂಟಲ್‌ಕೆ ಕಡಪಾ ಹಾಗೂ ಸೇಲಂ ಕ್ಕೆ 22 ಸಾವಿರದಿಂದ 25 ಸಾವಿರದ ವರೆಗೆ ದರ ಸಿಕ್ಕಿದೆ. ಈ ವರ್ಷ ರೈತರು ತಮ್ಮ ಕೊಳವೆ ಬಾವಿ ಮತ್ತು ತೆರೆದ ಬಾವಿಯಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂದಾಜಿನ ಮೇಲೆ ಅರಿಶಿಣ ಲಾಗಾಣ ಮಾಡುತ್ತಿದ್ದಾರೆ. ಗಡಿ ಭಾಗದಲ್ಲಿ ಕಡಪಾ ಹಾಗೂ ಸೇಲಂ ಜಾತಿಯ ಅರಿಶಿಣ ಕಡೆಗೆ ಹೆಚ್ಚು ಒಲವು ಅದೆ. ಸಧ್ಯದಲ್ಲಿ ಅಥಣಿ ಮಾರುಕಟ್ಟೆಯಲ್ಲಿ ಕಡಪಾ ಅರಿಶಿಣ ಬೀಜ ಲಭ್ಯವಿದ್ದು, 4 ರಿಂದ 4.5 ಸಾವಿರದ ವರೆಗೆ ಕ್ವೀಂಟಾಲಗೆ ಬೀಜದ ದರ ಇದೆ. ಆದರೆ ಸೇಲಂ ಬೀಜವನ್ನು ಇಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸಾಂಗಲಿ ಮಾರುಕಟ್ಟೆಗೆ ಹೋಗಿ ಬೀಜವನ್ನು ತರಬೇಕಾಗಿದೆ. ರೈತರು ಮಳೆಯ ಮುಂಚಿತವಾಗಿ ನಿಗದಿತ ಅವಧಿಯಲ್ಲಿ ಅರಿಶಿಣ ಲಾಗಾಣ ಮಾಡಲು ಒಲವಿದೆ.
ಕಳೆದ ವರ್ಷ ಗಡಿ ಭಾಗದಲ್ಲಿ ಆರು ನೂರದಿಂದ ಏಳು ನೂರು ಏಕರೆ ಅರಿಶಿಣ ಇದ್ದು, ಕಳೆದ ವರ್ಷದ ದರ ನೋಡಿ ಈ ವರ್ಷ ರೈತರು ಅರಿಶಿಣ ಕಡೆ ಹೆಚ್ಚಿನ ಒಲವು ತೋರಿದ್ದು, ಸಾವಿರ ಎಕರೆಯ ವರೆಗೆ ಹೋಗುವ ಸಾಧ್ಯತೆ ಇದೆ. ತೋಟಗಾರಿಕೆ ಇಲಾಖೆಯಿಂದ ಅರಿಶಿಣ ಬೀಜವು ಲಭ್ಯವಿಲ್ಲ. ಸರಕಾರ ತೋಟಗಾರಿಕೆ ಇಲಾಖೆಯಿಂದ ಅರಿಶಿಣವನ್ನು ಪೂರೈಕೆ ಮಾಡಬೇಕೆಂದು ರೈತರು ಅಗ್ರಹಿಸಿದ್ದಾರೆ. ಪ್ರತಿ ವರ್ಷ ಅರಿಶಿಣ ದರ ಹೆಚ್ಚುತ್ತಿದೆ. ಕಬ್ಬಿಗಿಂತ ಅರಿಶಿಣ ಬೆಲೆ ಹೆಚ್ಚಿದೆ.
ಈ ಕುರಿತು ಬೆಳಗಾವಿ ಜಿಲ್ಲಾ ರೈತ ಸಂಘದ ಸಂಚಾಲಕ ಹಾಗೂ ಗಡಿ ಭಾಗದ ಹೋರಾಟಗಾರರಾದ ಕಿರಣ ಮಿಸಾಳ ಇವರನ್ನು ಸಂಪರ್ಕಿಸಿದಾಗ ಗಡಿ ಭಾಗದ ಗ್ರಾಮಗಳಲ್ಲಿ ಕೊಳವೆ ಬಾವಿ ಹಾಗೂ ತೆರೆದ ಬಾವಿಯ ಸ್ವಲ್ಪ ನೀರಿನಲ್ಲಿ ಅರಿಶಿಣ ಲಾಗಾಣ ಮಾಡುತ್ತಾರೆ. ಆದರೆ ಅರಿಶಿಣ ಬೀಜದ ಬೆಲೆ ಗಗನಕ್ಕೆ ಏರಿದ ಕಾರಣ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಬೀಜವನ್ನು ಉಚಿತವಾಗಿ ಇಲ್ಲವಾದರೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕು ಹಾಗೂ ಅರಿಶಿಣ ಮಾರುಕಟ್ಟೆ ಅಥಣಿಯಲ್ಲಿ ಲಭ್ಯಮಾಡಬೇಕೆಂದು ಅವರು ಅಗ್ರಹಿಸಿದ್ದಾರೆ.