ಕೊಪ್ಪಳ 29: ಕೊಪ್ಪಳ ನಗರಸಭೆಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಸಭೆ ಮಂಗಳವಾರ ಬೆಳಿಗ್ಗೆ ಕಚೇರಿಯ ಸಭಾಭವನದಲ್ಲಿಅಧ್ಯಕ್ಷರಾದ ಅಮ್ಜದ್ ಪಟೇಲ್ ರವರ ಅಧ್ಯಕ್ಷತೆಯಲ್ಲಿಜರುಗಿದ್ದು 48 ಲಕ್ಷರೂ ಗಳ ಉಳಿತಾಯ ಬಜೆಟ್ ಮಂಡನೆಯನ್ನು ನಗರಸಭೆಅಧ್ಯಕ್ಷರಾದಅಮ್ಜದ್ ಪಟೇಲ್‌ರವರು ಮಂಡನೆ ಮಾಡಿದರು.ನಗರಸಭೆಗೆ ವಿವಿಧ ಯೋಜನೆಗಳಿಂದ ಹಾಗೂ ಸಾರ್ವಜನಿಕರಕರ ಪಾವತಿಯಿಂದ ಅಂದಾಜು ಗುರಿ ಒಟ್ಟು 54,43,61,278 ರೂ. ಜಮಾವಾಗಲಿದೆ.
ಅದರಲ್ಲಿಅಂದಾಜು 53,95,13,778 ರೂ.ಗಳನ್ನು ಖರ್ಚು ಮಾಡಲಾಗುವುದು. ಸುಮಾರು 48,47,500 ರೂ.ಗಳನ್ನು ಉಳಿತಾಯ ಮಾಡಬಹುದೆಂದು ಉಳಿತಾಯ ಬಜೆಟನ್ನುಅವರು ಮಂಡಿಸಿದರು.ನಗರದ ಹುಲಿಕೇರೆ ಸೇರಿದಂತೆ ವಿವಿಧಕೆರೆಅಭಿವೃದ್ಧಿ ಪಡಿಸುವದು ನನ್ನಗುರಿಯಾಗಿದ್ದು, ಅದಕ್ಕೆತಕ್ಕಂತೆ ವಿಶೇಷ ಆದ್ಯತೆ ನೀಡಿ ಕೆರೆಗಳ ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಸಾರ್ವಜನಿಕರಿಗೆಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವುದಿಲ್ಲ. ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವಂತಾಗುತ್ತದೆ ಎಂದು ವಿವರಿಸಿದರು.ಅಲ್ಲದೆ ನಗರದಲ್ಲಿರಸ್ತೆ ಉಪ ರಸ್ತೆಗಳ ದುರಸ್ತಿಯ ಅಭಿವೃದ್ಧಿ ಸೇರಿದಂತೆ ಚರಂಡಿಗಳ ನಿರ್ಮಾಣ, ವಿದ್ಯುತ್ ಸಮರ್ಕವಾಗಿ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಆದ್ಯತೆ ಮೇರೆಗೆ ಜನಪರ ಕಾರ್ಯಕ್ರಮಗಳನ್ನು ಸಹ ಮಾಡಲಾಗುವುದು.ಜನರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿಅದರಇತ್ಯಾರ್ಥಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದುಎಂದು ಕೊಪ್ಪಳ ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್‌ರವರು ಬಜೆಟ್ ಮಂಡನೆ ಸಭೆಯಲ್ಲಿ ವಿವರಿಸಿದರು.
ನಂತರ ಸದಸ್ಯರಿಂದ ಸುದೀರ್ಘವಾಗಿ ಚರ್ಚೆಗಳನ್ನು ನಡೆದು ನಂತರ ಬಜೆಟ್ ಮಂಡನೆಗೆಎಲ್ಲರೂಅನುಮೋದನೆ ನೀಡಿದರು. ವೇದಿಕೆ ಮೇಲೆ ಕೊಪ್ಪಳ ನಗರಸಭೆಯಉಪಾಧ್ಯಕ್ಷರಾದ ಅಶ್ವಿನಿ ಗದುಗಿನಮಠ, ಸ್ಥಾಯಿ ಸಮಿತಿಅಧ್ಯಕ್ಷರಾದಅಕ್ಬರ್ ಪಾಷಾ ಪಲ್ಟನ್, ಪೌರಾಯುಕ್ತಾರಾದಗಣಪತಿ ಪಾಟೀಲ್ ಉಪಸ್ಥಿತರಿದ್ದು, ಸಭೆಯಲ್ಲಿ ನಗರಸಭೆಯ ಮಾಜಿಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಮಹೇಂದ್ರ ಚೋಪ್ರಾ, ಸದಸ್ಯರಾದ ಮುತ್ತುರಾಜ್ ಕುಷ್ಟಗಿ, ಮಲ್ಲಪ್ಪಕವಲೂರು ಹಾಗೂ ಅನೇಕ ಸದಸ್ಯರು ಸೇರಿದಂತೆ ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.